ಗೋವಾ: ರೈಲು ಪ್ರಯಾಣದ ವೇಳೆ ವಿಷಾಹಾರ ಸೇವನೆ ಮಾಡಿ 8 ಯುವಕರು ಅಸ್ವಸ್ಥ

ಬೆಳಗಾವಿ, ಸೆಪ್ಟೆಂಬರ್‌, 12: ರೈಲ್ವೆ ಪ್ರಯಾಣದ ವೇಳೆ ವಿಷಾಹಾರ ಸೇವನೆ ಮಾಡಿ 8 ಜನ ಯುವಕರು ಅಸ್ವಸ್ಥಗೊಂಡ ಘಟನೆ ನಿನ್ನೆ (ಸೆಪ್ಟೆಂಬರ್‌ 12) ತಡರಾತ್ರಿ ಗೋವಾದಲ್ಲಿ ನಡೆದಿದೆ.

ವಾಸ್ಕೋ-ನಿಜಾಮುದ್ದೀನ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ 8 ಜನ ಯುವಕರು ಹಸಿವು ತಾಳಲಾರದೇ ಗೋವಾದಲ್ಲಿ ಊಟ ಸೇವನೆ ಮಾಡಿ ಅಸ್ವಸ್ಥಗೊಂಡಿದ್ದಾರೆ. ನಂತರ ರೈಲು ಬೆಳಗಾವಿಗೆ ಬರುತ್ತಿದ್ದಂತೆ ಸಹ ಪ್ರಯಾಣಿಕರು ರೈಲ್ವೆ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಎಲ್ಲ 8 ಯುವಕರನ್ನು ತಕ್ಷಣವೇ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

Goa: 8 youths sick after consuming poisoned food during railway journey

ಆರು ಜನ ಯುವಕರು ಪ್ರಜ್ಞಾಹೀನ ಸ್ಥತಿಗೆ ಬಂದಿದ್ದು, ಇಬ್ಬರು ಯುವಕರು ತೀವ್ರ ಅಸ್ವಸ್ಥರಾಗಿದ್ದಾರೆ. ಹೀಗೆ ವಿಷಾಹಾರ ಸೇವಿಸಿದ ಎಲ್ಲರೂ ಉತ್ತರ ಪ್ರದೇಶದ ಜಾನ್ಸಿ ಮೂಲದವರು ಎಂದು ಗುರುತಿಸಲಾಗಿದೆ. ಈ ಯುವಕರು ಉದ್ಯೋಗ ‌ಅರಿಸಿ ಉತ್ತರ ಪ್ರದೇಶದಿಂದ ಗೋವಾಕ್ಕೆ ಬಂದಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.

ಕೆಲಸ ಮುಗಿವ ಬಳಿಕ ಮರಳಿ ವಾಸ್ಕೋ- ನಿಜಾಮುದ್ದೀನ್ ರೈಲಿನಲ್ಲಿ ಗೋವಾದಿಂದ ತಮ್ಮ ರಾಜ್ಯ ಉತ್ತರ ಪ್ರದೇಶಕ್ಕೆ ಮರಳುತ್ತಿದ್ದರು. ಈ ವೇಳೆ ಮಾರ್ಗಮಧ್ಯೆ ವಿಷಾಹಾರ ಸೇವಿಸಿದ್ದರಿಂದ ದುರ್ಘಟನೆ ನಡೆದಿದೆ ಎನ್ನುವ ಶಂಕೆ ವ್ಯಕ್ತವಾಗಿದೆ. ಇನ್ನು ಜಿಲ್ಲಾಸ್ಪತ್ರೆಗೆ ‌ನಗರ ಹಿರಿಯ ಪೊಲೀಸ್ ಅಧಿಕಾರಿಗಳು, ರೈಲ್ವೆ ಪೊಲೀಸರು ಭೇಟಿ,‌ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+