ಮನೆಯಲ್ಲಿ ದೇವರ ಮುಂದೆ ಇಟ್ಟಿದ್ದ ದೀಪ ಬಾಲಕಿಯ ಜೀವವನ್ನೇ ಕಸಿಯಿತು
ಬೆಳಗಾವಿ, ಜೂನ್ 25: ಬೆಳಗಾವಿಯ ಮನೆಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ್ದು ಘಟನೆಯಲ್ಲಿ ಬಾಲಕಿ ಸಜೀವ ದಹನವಾಗಿದ್ದಾಳೆ.
ರಾತ್ರಿ ಮಲಗಿದ್ದಾಗ ದೇವರಿಗೆ ಹಚ್ಚಿದ್ದ ದೀಪದಿಂದ ಬತ್ತಿ ಕೆಳಗೆ ಬಿದ್ದು ಬೆಂಕಿ ಹೊತ್ತಿಕೊಂಡಿದೆ. ಮೊದಲು ಯಾರಿಗೂ ತಿಳಿದಿರಲಿಲ್ಲ, ಬಳಿಕ ಎದ್ದು ನೋಡುವಾಗ ಇಡೀ ಕೋಣೆ ಬೆಂಕಿಯಿಂದ ಆವರಿಸಿಕೊಂಡಿತ್ತು.

ಅದು ಬಾಲಕಿ ಮಲಗಿದ್ದ ಬೆಡ್‌ಶೀಟ್, ಬಟ್ಟೆ ಎಲ್ಲಕ್ಕೂ ತಗುಲಿ, ಮನೆಯಿಂದ ಹೊರಬರಲಾರದೆ 8 ವರ್ಷದ ಬಾಲಕಿ ಕಸ್ತೂರಿ ಮೃತಪಟ್ಟಿದ್ದಾರೆ.
ಅದೃಷ್ಟವಶಾತ್ ತಂದೆ-ತಾಯಿ ಪ್ರಾಣಾಪಾಯದಿಂದ ಪಾರಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ.












Click it and Unblock the Notifications