Breaking: ನಿಪ್ಪಾಣಿಯಲ್ಲಿ ಭೀಕರ ಅಪಘಾತ, ನಾಲ್ವರು ಸಾವು
ಬೆಳಗಾವಿ, ಮೇ 27: ಲಾರಿ ಮತ್ತು ಕಾರಿನ ನಡುವೆ ಡಿಕ್ಕಿಯಾಗಿ ಕಾರಿನೊಳಗಿದ್ದ ನಾಲ್ವರು ಸ್ಥಳದಲ್ಲಿ ಸಾವನ್ನಪ್ಪಿರುವ ದಾರುಣ ಘಟನೆ ಜಿಲ್ಲೆಯ ನಿಪ್ಪಾಣಿ ತಾಲ್ಲೂಕಿನ ಸ್ಥವನಿಧಿ ಸಮೀಪ ನಡೆದಿದೆ.
ಬಾಬು ಪಾಟೀಲ (60), ಪತ್ನಿ ಛಾಯಾ ಅದಗೊಂಡ ಪಾಟೀಲ (55), ಚಂಪಾತಾಯಿ ಬಾಳೆಷಾ ಮಗದುಮ್ಮ (85) ಮತ್ತು ಸದಲಗಾದ ಮಹೇಶ ದೇವಗೊಂಡ ಪಾಟೀಲ (28) ಎಂಬುವವರೇ ಮೃತಪಟ್ಟ ದುರ್ದೈವಿಗಳು.
ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ 4ರಲ್ಲಿ ದುರಂತ ಸಂಭವಿಸಿದ್ದು, ಮೃತರು ಸಂಚರಿಸುತ್ತಿದ್ದ ಕಾರು ಕೊಲ್ಲಾಪುರದಿಂದ ಬೆಳಗಾವಿ ಕಡೆಗೆ ಹೊರಟಿತ್ತು ಎಂದು ನಿಪ್ಪಾಣಿ ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ.

ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ನಿಪ್ಪಾಣಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಜೆಸಿಬಿಯಿಂದ ಕಾರನ್ನು ತೆರವುಗೊಳಿಸಿ ಶವಗಳನ್ನು ಹೊರತೆಗೆದಿದ್ದಾರೆ. ಈ ಕುರಿತು ಪ್ರಕರಣ ದಾಖಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.












Click it and Unblock the Notifications