ಸಿಎಂ ಬದಲಾವಣೆ ಬಗ್ಗೆ ಚೈಲ್ಡಿಶ್ ರೀತಿ ಮಾತನಾಡಬೇಡಿ: ಲಕ್ಷ್ಮೀ ಹೆಬ್ಬಾಳ್ಕರ್

ಬೆಳಗಾವಿ, ಸೆಪ್ಟಂಬರ್ 11: ರಾಜ್ಯ ರಾಜಕಾರಣದಲ್ಲಿ ಸದ್ಯ ಸಿಎಂ ಸಿದ್ದರಾಮಯ್ಯ ಬದಲಾವಣೆ ಬಗ್ಗೆಯೇ ಮಾತು. ನಾನು ಸಿಎಂ ಆಗುವ ಆಸೆ ಇದೆ ಎಂದು ಹಲವು ನಾಯಕರು ಬಹಿರಂಗವಾಗಿ ಹೇಳಿದ್ದಾರೆ. ಈ ಕುರಿತು ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಇಂತಹ ಸಂದರ್ಭದಲ್ಲಿ ಎಲ್ಲ ಶಾಸಕರು ಸಿಎಂ ಜೊತೆ ನಿಲ್ಲಬೇಕೆ ವಿನಃ ಚೈಲ್ಡಿಶ್ ರೀತಿ ಮಾತನಾಡಬಾರದು ಎಂದು ಹೇಳಿದ್ದಾರೆ.

ಬುಧವಾರ ಈ ಕುರಿತು ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಸಾಮಾಜಿಕ ಜಾಲತಾಣಗಳಲ್ಲಿ ಮುಂದಿನ ಸಿಎಂ ಲಕ್ಷ್ಮೀ ಹೆಬ್ಬಾಳ್ಕರ್ ಅಭಿಮಾನ ವಿಚಾರ ಇದೆಲ್ಲವು ನಗಣ್ಯ. ಅಲ್ಲದೇ ಸಿಎಂ ಬದಲಾವಣೆ ಚರ್ಚೆಯೇ ನಗಣ್ಯ ಎಂದು ತಿಳಿಸಿದರು.

Dont Talk About Siddaramaiah CM Post Change Like Childish Says Lakshmi Hebbalkar

ಚೈಲ್ಡೀಶ್ ರೀತಿ ಮಾತನಾಡಬೇಡಿ: ಸಚಿವೆ

ಮುಡಾ ಹಗರಣದಲ್ಲಿ ಸುಳ್ಳು ದಾಖಲೆ ಸೃಷ್ಟಿಸಿ ಬಿಜೆಪಿ ನಾಯಕರು ಏನೆನೋ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ನಾನು ಏನನ್ನು ಪ್ರತಿಕ್ರಿಯೆ ನೀಡುವುದಿಲ್ಲ. ಇಂತಹ ಸಂದರ್ಭದಲ್ಲಿ 136 ಜನ ಶಾಸಕರು ಸಿಎಂ ಸಿದ್ದರಾಮಯ್ಯ ಅವರ ಬೆನ್ನಿಗೆ ಗಟ್ಟಿಯಾಗಿ ನಿಲ್ಲಬೇಕು ಅದನ್ನು ಬಿಟ್ಟು ಚೈಲ್ಡೀಶ್ ಹಾಗೆ ಮಾತನಾಡಬಾರದು ಎಂದು ತಿಳಿಸಿದ್ದಾರೆ. ಈ ಮೂಲಕ ಸಿಎಂ ಆಗುವ ಆಸೆ ವ್ಯಕ್ತಪಡಿಸಿದವರಿಗೆ ಸಚಿವೆ ಟಾಂಗ್ ನೀಡಿದ್ದಾರೆ.

ಶಾಸಕಾಂಗ ಪಕ್ಷದ ನೀರ್ಣವೇ ಅಂತಿಮ

ಇನ್ನೂ ಕಾಂಗ್ರೆಸ್ ನಾಯಕರೇ ಮುಖ್ಯಮಂತ್ರಿ ಹುದ್ದೆಯ ರೇಸ್ ನಲ್ಲಿರುವ ಬಗೆಗಿನ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಜವಾಬ್ದಾರಿಯುತ ಪಕ್ಷದ ಶಿಸ್ತಿನ ಸಿಪಾಯಿಯಾಗಿ ಕೆಲಸ ಮಾಡುತ್ತಿದ್ದೇನೆ. ನಮ್ಮ ಪಕ್ಷಕ್ಕೆ ಒಂದು ಶಿಸ್ತಿದೆ. ಪಕ್ಷಕ್ಕೆ ಹೈಕಮಾಂಡ್ ಇದೆ. ಆದ್ದರಿಂದ ಶಾಸಕಾಂಗ ಪಕ್ಷದ ಶಾಸಕರ ನಿರ್ಣಯವೇ ಅಂತಿಮ ಎಂದು ಸ್ಪಷ್ಟಪಡಿಸಿದರು.

Dont Talk About Siddaramaiah CM Post Change Like Childish Says Lakshmi Hebbalkar

ಅಲ್ಲದೇ ಮುಖ್ಯಮಂತ್ರಿ ಬದಲಾವಣೆ ವಿಚಾರವನ್ನು ಗಲ್ಲಿಯಲ್ಲಿ ಮಾತನಾಡುವ ವಿಷಯವಲ್ಲ. ಸಿದ್ದರಾಮಯ್ಯ ಅವರ ಧೀಮಂತ ನಾಯಕ. ಅವರ ನೇತೃತ್ವದಲ್ಲಿ ಸರ್ಕಾರ ಸುಸೂತ್ರವಾಗಿ ಉತ್ತಮವಾಗಿ ಆಡಳಿತ ನಿಡುತ್ತಿದೆ. ನಾವೆಲ್ಲರು ಅವರ ಜೊತೆಗೆ ಇದ್ದೇವೆ.

ಯಾವುದೇ ವಿಚಾರಗಳು ಇದ್ದರೂ ಹೈಕಮಾಂಡ್ ಮಟ್ಟದಲ್ಲಿ ಚರ್ಚೆ ಆಗುತ್ತದೆ. ಹೈಕಮಾಂಡ್ ಎಲ್ಲಿಯವರೆಗೆ ಸಿದ್ದರಾಮಯ್ಯನವರ ಜತಗೆ ಇರುತ್ತದೆಯೋ ಅಲ್ಲಿಯವರೆಗೆ ರಾಜ್ಯದಲ್ಲಿ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ ಈ ಬಗ್ಗೆ ಅನುಮಾನ ಬೇಡ. ಇಂತಹ ವಿಷಯಗಳನ್ನು ಹಾದಿ ಬೀದಿಯಲ್ಲಿ ಚರ್ಚಿಸಲು ಆಗಲ್ಲ ಎಂದು ಅವರು ತಿಳಿಸಿದರು.

ಕಾಂಗ್ರೆಸ್‌ ಹಿರಿಯ ನಾಯಕರ ಸಿಎಂ ಆಸೆಯ ಬಹಿರಂಗ ಹೇಳಿಕೆ

ವಾಲ್ಮೀಕಿ ನಿಗಮದಲ್ಲಿನ ಭ್ರಷ್ಟಾಚಾರ ಬೆನ್ನಲ್ಲೆ ಮುಡಾ ಹಗರಣದಿಂದ ತತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇದೀಗ ಸಿಎಂ ಬದಲಾವಣೆ ವಿಚಾರ ಇರಿಸು ಮುರಿಸು ಉಂಟು ಮಾಡುತ್ತಿದೆ.. ಅಲ್ಲದೇ ಇತ್ತೀಚೆಗೆ ಸಿಎಂ ಆಗುವ ಆಸೆ ಯಾರಿಗೆ ಇರುವುದಿಲ್ಲ ಹೇಳಿ ಎಂದು ಆರ್.ವಿ.ದೇಶಪಾಂಡೆ, ಇಂದು ಶಾಸಕ ಶಾಮನೂರು ಶಿವಶಂಕರಪ್ಪ ಬಹಿರಂಗವಾಗಿ ತಿಳಿಸಿದ್ದಾರೆ.

ಅಲ್ಲದೇ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರು, ಡಾ.ಜಿ.ಪರಮೇಶ್ವರ ಬೆಂಬಲಿಗರು ತಮ್ಮ ನಾಯಕರೇ ರಾಜ್ಯ ಮುಂದಿನ ಸಿಎಂ, ಹೊಸ ಸಿಎಂ ಎಂದು ಅಭಿಯಾನ ಆರಂಭಿಸಿದ್ದಾರೆ. ಇದೆಲ್ಲ ನೋಡಿದರೆ, ರಾಜ್ಯ ಸರ್ಕಾರದಿಂದ ಅಭಿವೃದ್ಧಿ ಮರಿಚೀಕೆ ಆಗಿದೆ. ಗ್ಯಾರೆಂಟಿಗಳಿಗೆ ಹಣ ನೀಡಿ ಸರ್ಕಾರ ಬರಿದಾಗಿದೆ ಎನ್ನುತ್ತಿದ್ದ ವಿಪಕ್ಷಗಳ ಆರೋಪ ನಿಜವೆಂದು ಭಾಸವಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+