Get Updates
Get notified of breaking news, exclusive insights, and must-see stories!

ಖಾನಾಪುರದಲ್ಲಿ ಎಂಇಎಸ್‌ನಿಂದ ಬಿಜೆಪಿಗೆ ಸಂಕಷ್ಟ: ಕಾಂಗ್ರೆಸ್‌ನ ಅಂಜಲಿ ನಿಂಬಾಳ್ಕರ್‌ ಗೆಲುವಿನ ಸಾಧ್ಯತೆ ಹೆಚ್ಚಿಸಿದ ಲೆಕ್ಕಾಚಾರ

ಬೆಳಗಾವಿ, ಮೇ 02: ರಾಜ್ಯದ ಪ್ರತಿಷ್ಠಿತ ವಿಧಾನಸಭಾ ಕ್ಷೇತ್ರಗಳಲ್ಲಿ ಬೆಳಗಾವಿ ಜಿಲ್ಲೆಯ ಖಾನಾಪುರವೂ ಒಂದು. ಮರಾಠಾ ಸಮುದಾಯದ ಪ್ರಾಬಲ್ಯವಿರುವ ಕ್ಷೇತ್ರವು ಎಂಇಎಸ್‌ನ ಭದ್ರಕೋಟೆ ಎಂದೆ ಪರಿಣಿಸಲ್ಪಟ್ಟಿತ್ತು. ಆದರೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಇಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದ್ದು, ಎಲ್ಲರ ಗಮನ ಸೆಳೆಯುವಂತೆ ಮಾಡಿತು.

ಕಾಂಗ್ರೆಸ್ ಹಾಲಿ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಅವರು ಕಳೆದ ಚುನಾವಣೆಯಲ್ಲಿ ಆಯ್ಕೆಯಾದರು. ಇವರ ವಿರುದ್ಧ ಬಿಜೆಪಿಯಿಂದ ವಿಠ್ಠಲ್ ಹಾಲ್ಗೇಕರ್ ಕಣಕ್ಕಿಳಿದಿದ್ದರು. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಡಾ.ಅಂಜಲಿ ನಿಂಬಾಳ್ಕರ್, ಬಿಜೆಪಿಯಿಂದ ವಿಠ್ಠಲ್ ಹಾಲ್ಗೇಕರ್, ಜೆಡಿಎಸ್‌ನಿಂದ ನಾಸೀರ್ ಬಾಪುಲಸಾಬ್ ಭಗವಾನ್ ಹಾಗೂ ಎಂಇಎಸ್‌ನಿಂದ ಮುರಳೀಧರ ಪಾಟೀಲ್ ಕಣಕ್ಕಿಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ಷೇತ್ರವು ತೀವ್ರ ಪೈಪೋಟಿಯ ಕಣವಾಗಿ ಮಾರ್ಪಟ್ಟಿದೆ.

Difficulty for BJP from MES in Khanapur: Anjali Nimbalkar of Congresss chances of victory increased

ಈ ಕ್ಷೇತ್ರದಲ್ಲಿ ಮರಾಠಿ ಸಮುದಾಯವು 82,000 ಮತದಾರರನ್ನು ಹೊಂದಿದೆ. ಈಗ ಕಣಕ್ಕಿಳಿದಿರುವ ನಾಲ್ಕು ಪ್ರಮುಖ ಅಭ್ಯರ್ಥಿಗಳಲ್ಲಿ ಮೂವರು ಮರಾಠಿ ಸಮುದಾಯದವರಾಗಿದ್ದಾರೆ. ಈ ಕ್ಷೇತ್ರದಲ್ಲಿ ಮುಸ್ಲಿಂ ಮತದಾರರು 28,000 ರಷ್ಟಿದ್ದಾರೆ. ಇದು ಎರಡನೇ ಅತಿ ದೊಡ್ಡ ಸಮಯದಾಯವಾಗಿದೆ.

25,000 ಎಸ್ಸಿ/ಎಸ್ಟಿ ಮತದಾರರು, 24,000 ಲಿಂಗಾಯತರು, 16,000 ಹಣಬರರು, 13,000 ಕ್ರಿಶ್ಚಿಯನ್ನರು, 8,000 ಜೈನರು, ಬ್ರಾಹ್ಮಣರು ಮತ್ತು ವಿಶ್ವಕರ್ಮರು ತಲಾ 4,000 ಮತದಾರರಿದ್ದಾರೆ.

ಟಿಕೆಟ್‌ ವಿಚಾರವಾಗಿ ಕಾಂಗ್ರೆಸ್, ಜೆಡಿ(ಎಸ್) ಮತ್ತು ಎಂಇಎಸ್‌ ಪಕ್ಷಗಳಲ್ಲಿ ಯಾವುದೇ ಗೊಂದಲಗಳು ಉದ್ಬವಿಸಿರಲಿಲ್ಲ. ಆದರೆ, ಬಿಜೆಪಿಯಲ್ಲಿ ಡಾ.ಸೋನಾಲಿ ಸರ್ನೋಬತ್, ಮಾಜಿ ಶಾಸಕ ಅರವಿಂದ ಪಾಟೀಲ್ ಮತ್ತು ವಿಠ್ಠಲ್ ಹಲಗೇಕರ್‌ರಂತಹ ಪ್ರಬಲ ಟಿಕೆಟ್‌ ಆಕಾಂಕ್ಷಿಗಳಿದ್ದರು. ಅಂತಿಮವಾಗಿ, ಪಕ್ಷವು ಹಲಗೇಕರ್‌ಗೆ ಆದ್ಯತೆ ನೀಡಿತು. 2018ರ ಚುನಾವಣೆಯಲ್ಲಿ ಹಲಗೇಕರ್‌ ಅವರು ಕಾಂಗ್ರೆಸ್ ಅಭ್ಯರ್ಥಿ ಡಾ.ನಿಂಬಾಳ್ಕರ್ ವಿರುದ್ಧ 5,000ಕ್ಕಿಂತ ಕಡಿಮೆ ಮತಗಳ ಅಂತರದಿಂದ ಸೋತಿದ್ದರು. ಈ ಹಿನ್ನೆಲೆಯಲ್ಲಿ ಖಾನಪುರ ಬಿಜೆಪಿ ಅಸಮಾಧಾನಗಳಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

Difficulty for BJP from MES in Khanapur: Anjali Nimbalkar of Congresss chances of victory increased

ಇನ್ನು ಕ್ಷೇತ್ರದಲ್ಲಿ ಎಂಇಎಸ್‌ ಸ್ಪರ್ಧಿಸುತ್ತಿದೆ. ಇದು ಬಿಜೆಪಿ ಮತದಾರರನ್ನು ಸೆಳೆಯುವ ಸಾಧ್ಯತೆ ಇದೆ. ಪಕ್ಷದೊಳಗಿನ ಅಸಮಾಧಾನ ಹಾಗೂ ಎಂಇಎಸ್‌ ಮತಗಳನ್ನು ಸೆಳೆಯುದರಿಂದ ಬಿಜೆಪಿ ದೊಡ್ಡ ಸಂಕಷ್ಟವನ್ನು ಎದುರಿಸುವ ಸಂಭವವಿದೆ.

ಇನ್ನು ಜೆಡಿಎಸ್‌ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್‌ ನೀಡಿದೆ. ಎರಡನೇ ಅತಿ ದೊಡ್ಡ ಸಮುದಾಯವಾದ ಮುಸ್ಲಿಮರು ಜೆಡಿಎಸ್‌ಗೆ ಮತ ನೀಡಬಹುದು. ಆದರೆ, ಇಲ್ಲಿ ಜೆಡಿಎಸ್‌ಗೆ ಬೆಂಬಲ ಸಿಗುವುದು ಕಷ್ಟಸಾಧ್ಯವೆಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಡಾ ಅಂಜಲಿ ನಿಂಬಾಳ್ಕರ್‌ ಅವರು ಎರಡನೇ ಬಾರಿಗೆ ಗೆಲುವು ಸಾಧಿಸುವ ವಿಶ್ವಾಸದಲ್ಲಿದ್ದಾರೆ. ಡಾ ನಿಂಬಾಳ್ಕರ್ ಅವರು ವಿಧಾನಸಭೆಯಲ್ಲಿ ಸಾಕಷ್ಟು ಬಾರಿ ಮಹಿಳೆಯರ ಪರ ಮಾತನಾಡಿದ್ದಾರೆ. ಕ್ಷೇತ್ರದ ವಿವಿಧ ಯೋಜನೆಗಳ ಬಗ್ಗೆ ಕಾಳಜಿವಹಿಸಿದ್ದಾರೆ. ವಿಶೇಷವಾಗಿ ಪರಿಸರ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ನಿಂಬಾಳ್ಕರ್ ಅವರು ಶಾಸಕರಾಗಿದ್ದ ಅವಧಿಯಲ್ಲಿ ಖಾನಾಪುರದ ಹಲವು ಒಳ ರಸ್ತೆಗಳು ಮೊದಲ ಬಾರಿಗೆ ಡಾಂಬರ್‌ ಕಂಡಿವೆ ಎಂದು ಕ್ಷೇತ್ರದ ಜನರು ಹೇಳಿದ್ದಾರೆ. ಇದು ಡಾ ಅಂಜಲಿ ನಿಂಬಾಳ್ಕರ್‌ ಅವರ ಗೆಲುವಿನ ಸಾಧ್ಯತೆಯನ್ನು ಹೆಚ್ಚಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+