ಚಿಕ್ಕೋಡಿ-ರಾಯಭಾಗ ಜೋಡಿ ಹಳಿಯಲ್ಲಿ ಆಯುಕ್ತರ ತಪಾಸಣೆ

ಬೆಳಗಾವಿ, ನವೆಂಬರ್ 24 : ಚಿಕ್ಕೋಡಿ ಮತ್ತು ರಾಯಭಾಗ ನಡುವಿನ ಜೋಡಿ ಹಳಿಯನ್ನು ರೈಲ್ವೆ ಸುರಕ್ಷತಾ ಆಯುಕ್ತರು ಪರಿಶೀಲನೆ ನಡೆಸಿದರು. ಲೋಂಡಾ-ಮೀರಜ್ ನಡುವಿನ ಜೋಡಿ ಹಳಿ ಯೋಜನೆಯ ಭಾಗವಾಗಿ ಈ ಮಾರ್ಗ ನಿರ್ಮಾಣಗೊಂಡಿದೆ.

ಬೆಂಗಳೂರಿನಿಂದ ಆಗಮಿಸಿದ್ದ ರೈಲ್ವೆ ಸುರಕ್ಷತಾ ಆಯುಕ್ತ ಎ. ಕೆ. ರೈ ನೇತೃತ್ವದ ಅಧಿಕಾರಿಗಳ ತಂಡ ಚಿಕ್ಕೋಡಿ-ರಾಯಭಾಗ ನಡುವಿನ 13.94 ಕಿ. ಮೀ. ಮಾರ್ಗದಲ್ಲಿ ಪರಿಶೀಲನೆಯನ್ನು ಮಂಗಳವಾರ ನಡೆಸಿದರು.

ಲೋಂಡಾ ಮತ್ತು ಮೀರಜ್ ನಡುವಿನ 186 ಕಿ. ಮೀ. ಗಳ ಜೋಡಿ ಹಳಿ ನಿರ್ಮಾಣ ಯೋಜನೆಯನ್ನು 1,191 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿತ್ತು. 2015-16ರಲ್ಲಿ ಯೋಜನೆಯನ್ನು ಘೋಷಣೆ ಮಾಡಲಾಗಿತ್ತು.

 CRS Inspection In Double Line Between Chikodi Road and Raybag

ಈ ಯೋಜನೆಯ ಭಾಗವಾಗಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ-ರಾಯಭಾಗ ನಡುವೆ ಜೋಡಿ ಹಳಿ ನಿರ್ಮಾಣ ಮಾಡಲಾಗಿದೆ. ಘಟಪ್ರಭಾ ಮತ್ತು ಚಿಕ್ಕೋಡಿ ರಸ್ತೆ ನಡುವಿನ ಜೋಡಿ ಮಾರ್ಗವನ್ನು ಕಳೆದ ವರ್ಷ ಲೋಕಾರ್ಪಣೆ ಮಾಡಲಾಗಿತ್ತು. ಕುಡಚಿ ಮತ್ತು ರಾಯಭಾಗ ನಡುವಿನ ಮಾರ್ಗವನ್ನು ಈ ಆರ್ಥಿಕ ವರ್ಷದ ಅಂತ್ಯದಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.

ಚಿಕ್ಕೋಡಿ ಮತ್ತು ರಾಯಭಾಗ ನಡುವಿನ ಜೋಡಿಹಳಿಯಲ್ಲಿ 130 ಕಿ. ಮೀ. ವೇಗದಲ್ಲಿ ರೈಲನ್ನು ಓಡಿಸುವ ಮೂಲಕ ಪರಿಶೀಲನೆ ಮಾಡಲಾಯಿತು. ಬಳಿಕ ರೈಲ್ವೆ ನಿಲ್ದಾಣಗಳನ್ನು ಪರಿಶೀಲನೆ ನಡೆಸಲಾಯಿತು.

 CRS Inspection In Double Line Between Chikodi Road and Raybag

ಮೋಟಾರ್ ಟ್ರಾಲಿ ತಪಾಸಣೆಯನ್ನು ನಡೆಸಿದ ಅಧಿಕಾರಿಗಳ ತಂಡ ಹಳಿಗಳ ಪರಿಶೀಲನೆಯನ್ನು ನಡೆಸಿತು. ಬೆಳಗಾವಿ ಸಂಸದ, ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ದಿ. ಸುರೇಶ್ ಅಂಗಡಿ ಅವರು ಈ ಯೋಜನೆ ವೇಗವಾಗಿ ಪೂರ್ಣಗೊಳ್ಳಲು ವಿಶೇಷ ಆಸಕ್ತಿವಹಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+