ಬೆಳಗಾವಿಯಲ್ಲಿ ಕಣ್ಣಿಗೆ ಮೆಣಸಿನಪುಡಿ ಎರಚಿ 12 ಲಕ್ಷ ರು.ನೊಂದಿಗೆ ಪರಾರಿ
ಬೆಳಗಾವಿ, ಜೂನ್ 02 : ವ್ಯಕ್ತಿಯೊಬ್ಬರು ಹಣದ ಥೈಲಿಯೊಂದಿಗೆ ನಡೆದುಕೊಂಡು ಬರುತ್ತಿದ್ದಾಗ ಅವರ ಕಣ್ಣಿಗೆ ಮೆಣಸಿನ ಪುಡಿ ಎರಚಿ ಅವರಿಂದ 12 ಲಕ್ಷ ರುಪಾಯಿಯನ್ನು ಲಪಟಾಯಿಸಿದ ಘಟನೆ ಬೆಳಗಾವಿಯಲ್ಲಿ ಗುರುವಾರ ರಾತ್ರಿ ನಡೆದಿದೆ.
ಭಾವೆ ವೃತ್ತದಲ್ಲಿರುವ ತಮ್ಮ ಹೋಲ್ ಸೇಲ್ ಅಂಗಡಿಯನ್ನು ಮುಚ್ಚಿಕೊಂಡು ರಾತ್ರಿ 10 ಗಂಟೆಯ ಸುಮಾರಿಗೆ ಅನಿಲ್ ಪೋರ್ವಲ್ ಎಂಬುವವರು ನಡೆದುಕೊಂಡು ಬರುತ್ತಿದ್ದರು.
ಕೇಳ್ಕರ್ ಬಾಗ್ ನಲ್ಲಿರುವ ತಮ್ಮ ಮನೆಗೆ ಬರುತ್ತಿದ್ದಾಗ, ಅವರು ಕಿರ್ಲೋಸ್ಕರ್ ರಸ್ತೆಯಲ್ಲಿರುವ ನವಗ್ರಹ ದೇವಸ್ಥಾನದ ಬಳಿಯಿದ್ದಾಗ ಇಬ್ಬರು ಅವರನ್ನು ತಡೆದಿದ್ದಾರೆ. ಅವರ ಕನ್ನಡಕವನ್ನು ಬಲವಂತವಾಗಿ ಕಿತ್ತುಕೊಂಡಿದ್ದಾರೆ. [ತಾರಕಕ್ಕೇರಿದ ಸಚಿವ ರೋಷನ್ ಬೇಗ್ v/s ಶಿವಸೇನೆ ಜಟಾಪಟಿ]

ನಂತರ ಅವರ ಕಣ್ಣಿಗೆ ಮೆಣಸಿನ ಪುಡಿ ಎರಚಿದ್ದಾರೆ. ಇದೆಲ್ಲ ಕ್ಷಣಾರ್ಧದಲ್ಲಿ ನಡೆದುಹೊಗಿದೆ. ಏನಾಗುತ್ತಿದೆಯೆಂದು ಅವರು ಅರಿಯುವ ಹೊತ್ತಿಗೆ ಅವರ ಕೈಯಲ್ಲಿದ್ದ 12 ಲಕ್ಷ ರುಪಾಯಿ ಇರುವ ಹಣದ ಚೀಲವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಈ ಘಟನೆಯಿಂದ ತೀವ್ರ ಆಘಾತಗೊಂಡಿರುವ ಅನಿಲ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಕೇಳ್ಕರ್ ಬಾಗ್ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಅನಿಲ್ ಪೋರ್ವಲ್ ಅವರು ಅಷ್ಟೊಂದು ಹಣವನ್ನು ಅಂಗಡಿಯಲ್ಲಿ ಏಕೆ ಇಟ್ಟುಕೊಂಡಿದ್ದರೋ ಇನ್ನೂ ತಿಳಿದುಬಂದಿಲ್ಲ. [ಕುಡಚಿ ಠಾಣೆ ಪಿಎಸ್ ಐ ವಿರುದ್ಧ ಲೈಂಗಿಕ ಕಿರುಕುಳ ಆರೋಪ]












Click it and Unblock the Notifications