ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಲೆ ಕುಸಿತ: ಬೆಳಗಾವಿಯಲ್ಲಿ ಕೋಳಿಗಳ ಮಾರಣಹೋಮ

|
Google Oneindia Kannada News

ಬೆಳಗಾವಿ ಮಾರ್ಚ್ 10: ಕೊರೊನಾ ವೈರಸ್ ನಿಂದ ಮಾಂಸದ ಬೆಲೆ ಕಡಿಮೆಯಾಗಿದೆ. ಕೊರೊನಾ ಭೀತಿ ಮಾಂಸಹಾರ ಸೇವನೆಯನ್ನು ಕಡಿಮೆ ಮಾಡಿದೆ. ಹೀಗಾಗಿ ಕೋಳಿಗಳ ಬೇಡಿಕೆಯೂ ಇಳಿಕೆಯಾಗಿದೆ.

ಬೆಳಗಾವಿಯ ಗೋಕಾಕ್ ತಾಲ್ಲೂಕಿನ ಲೋಳಸೂರ ಗ್ರಾಮದಲ್ಲಿ ಜೀವಂತ ಕೋಳಿಯನ್ನು ಸಮಾಧಿ ಮಾಡಲಾಗಿದೆ. ಬೆಲೆ ಇಳಿಕೆ ಕಾರಣದಿಂದ ಕೋಳಿಗಳ ಮಾರಣ ಹೋಮ ನಡೆಲಾಗಿದೆ.

ಕಾಶಿಯ ವಿಶ್ವನಾಥನಿಗೂ ಕೊರೊನಾ ಭಯ: ದೇವರಿಗೂ ಬಂತು ಮಾಸ್ಕ್ಕಾಶಿಯ ವಿಶ್ವನಾಥನಿಗೂ ಕೊರೊನಾ ಭಯ: ದೇವರಿಗೂ ಬಂತು ಮಾಸ್ಕ್

ನಜೀರ್ ಎಂಬುವವರು ತಮಗೆ ಸೇರಿದ ನೂರಕ್ಕೂ ಹೆಚ್ಚು ಕೋಳಿಗಳನ್ನು ಬದುಕಿದ್ದಾಗಲೇ ಸಮಾಧಿ ಮಾಡಿದ್ದಾರೆ. ಜೆಸಿಪಿಯಿಂದ ದೊಡ್ಡ ಹಳ್ಳ ತೊಡಿ, ಟ್ಯಾಕ್ಟರ್ ನಲ್ಲಿ ಕೋಳಿಯನ್ನು ತುಂಬಿಕೊಂಡು ಹಳ್ಳಕ್ಕೆ ಬೀಳಿಸಲಾಗಿದೆ. ಹಣಕಾಸಿನ ನಷ್ಟ ಎದುರಾಗಿದ್ದು, ಈ ನಿರ್ಧಾರ ತೆಗೆದುಕೊಳ್ಳಲು ಕಾರಣವಾಗಿದೆ.

Mass Chicken Culling In Belagavi

ಕೊರೊನಾದಿಂದ ಕೋಳಿಗಳ ಬೆಲೆ ಕುಸಿದಿದೆ. ಒಂದು ಕೆಜಿಗೆ 8 ರಿಂದ 10 ರೂಪಾಯಿ ಕಡಿಮೆಯಾಗಿದೆ. ಹೀಗಾಗಿ, ಒಂದು ಕೋಳಿಗೆ 40 ರಿಂದ 50 ರೂಪಾಯಿ ಇಳಿಕೆಯಾಗಿದೆ. ಈ ಬೆಲೆಗೆ ಮಾರಾಟ ಮಾಡುವುದು ಕಷ್ಟವಾಗಿದೆ.

ನಾನ್ ವೆಜ್ ಪ್ರಿಯರ ಜೇಬಿಗೆ ಬರೆ: ಮಟನ್, ಫಿಶ್ ಬೆಲೆ ಗಗನಕ್ಕೆ!ನಾನ್ ವೆಜ್ ಪ್ರಿಯರ ಜೇಬಿಗೆ ಬರೆ: ಮಟನ್, ಫಿಶ್ ಬೆಲೆ ಗಗನಕ್ಕೆ!

ಕಡಿಮೆ ಬೆಲೆಗೆ ಮಾರಾಟದ ಜೊತೆಗೆ ಕೋಳಿಗಳ ಆರೈಕೆಗೆ ಖರ್ಚು ತಗುಲುತ್ತದೆ. ಇದರಿಂದ ಬೇಸರಗೊಂಡ ನಜೀರ್ ತಮ್ಮ ಕೋಳಿಗನ್ನು ಜೀವಂತ ಸಮಾಧಿ ಮಾಡಿದ್ದಾರೆ.

English summary
Coronavirus care: Mass Chicken Culling In Belagavi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X