ಭೀಮಾತೀರದ ಚಡಚಣ ಹತ್ಯೆ ಆರೋಪಿಗಳ ಜಾಮೀನು ರದ್ದುಪಡಿಸಲು ಮನವಿ

ಬೆಳಗಾವಿ, ಜುಲೈ 25: ಭೀಮಾತೀರದ ಚಡಚಣನ ತಾಯಿ ವಿಮಲಾಬಾಯಿ ಚಡಚಣ ಅಜ್ಞಾತ ಸ್ಥಳವೊಂದರಿಂದ ವಿಡಿಯೋ ಬಿಡುಗಡೆ ಮಾಡಿದ್ದು, "ನನಗೆ ಜೀವ ಭಯ ಇದೆ. ನನ್ನ ಮಗನ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಿ. ನನಗೆ ರಕ್ಷಣೆ ನೀಡಬೇಕು ಹಾಗೂ ಚಡಚಣ ಹತ್ಯೆಯ ಆರೋಪಿಗಳಾದ ಸಿಪಿಐ ಎಂ.ಬಿ. ಅಸೋಡೆ ಹಾಗೂ ಪಿಎಸ್ ಐ ಗೋಪಾಲ ಹಳ್ಳೂರರ ಜಾಮೀನು ರದ್ದು ಮಾಡಬೇಕು" ಎಂದು ಮನವಿ ಮಾಡಿದ್ದಾರೆ.

ಚಡಚಣ ಸಹೋದರರ ಹತ್ಯೆ ಪ್ರಕರಣದಲ್ಲಿ ಆರೋಪಿಗಳಾದ ಅಸೋಡೆ ಹಾಗೂ ಗೋಪಾಲ ಹಳ್ಳೂರ ಈಚೆಗೆ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದರು. ಚಡಚಣ ಹತ್ಯೆಯ ಪ್ರಮುಖ ಆರೋಪಿ ಮಹದೇವ ಸಾಹುಕಾರನ ಜನ್ಮ ದಿನದ ಕಾರ್ಯಕ್ರಮದಲ್ಲಿ ಎಂ.ಬಿ. ಅಸೋಡೆ ಹಾಗೂ ಗೋಪಾಲ ಹಳ್ಳೂರ ಭಾಗಿ ಆಗಿದ್ದರು.

ಈ ಮೂವರು ಮತ್ತೆ ಒಟ್ಟಾಗಿರುವುದರಿಂದ ಚಡಚಣ ಕುಟುಂಬ ಹಾಗೂ ಸಹೋದರರಿಗೆ ಭಯ ಉಂಟು ಮಾಡಿದೆ ಎನ್ನಲಾಗುತ್ತಿದೆ. ಆದ್ದರಿಂದ ಚಡಚಣ ತಾಯಿ ವಿಮಲಾ ಬಾಯಿ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಮಹದೇವ ಸಾಹುಕಾರ, ಅಸೋಡೆ ಹಾಗೂ ಹಳ್ಳೂರರಿಂದ ನನಗೆ ಹಾಗೂ ನನ್ನ ಕುಟುಂಬಕ್ಕೆ ಜೀವ ಭಯವಿದೆ ಎಂದು ಹೇಳಿದ್ದಾರೆ.

chadachana mother Vimalabhai requested to hand over her son case to cbi

ಈ ಆರೋಪಿಗಳ ಜಾಮೀನು ರದ್ದುಪಡಿಸಬೇಕು, ಹತ್ಯೆಯ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ವಿಮಲಾಬಾಯಿ ಮನವಿ ಮಾಡಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+