ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತರು ಕೇಳಿದಷ್ಟು ಪರಿಹಾರ ಕೊಡಲು ಆಗದು: ಡಿಸಿಎಂ ಲಕ್ಷ್ಮಣ ಸವದಿ

|
Google Oneindia Kannada News

Recommended Video

DCM Laxman Savadi : ರೈತರು ಕೇಳಿದಷ್ಟು ಪರಿಹಾರ ಕೊಡಲು ಆಗದು | Oneindia Kannada

ಬೆಳಗಾವಿ, ಅಕ್ಟೋಬರ್ 04: ರೈತರು ಕೇಳಿದಷ್ಟು ನೆರೆ ಪರಿಹಾರ ನೀಡಲು ಸಾಧ್ಯವಿಲ್ಲವೆಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಹೇಳಿದ್ದಾರೆ.

ಬೆಳಗಾವಿಯಲ್ಲಿ ನೆರೆ ಪರಿಹಾರಕ್ಕೆ ಮನವಿ ಮಾಡಿದ ರೈತರನ್ನು ಭೇಟಿಯಾಗಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಲಕ್ಷ್ಮಣ ಸವದಿ ಅವರು ಹೀಗೆ ಹೇಳಿದ್ದಾರೆ.

ಕರ್ನಾಟಕ ಪ್ರವಾಹ ನಷ್ಟದ ಅಂದಾಜು ವರದಿ ತಿರಸ್ಕರಿಸಿದ ಕೇಂದ್ರಕರ್ನಾಟಕ ಪ್ರವಾಹ ನಷ್ಟದ ಅಂದಾಜು ವರದಿ ತಿರಸ್ಕರಿಸಿದ ಕೇಂದ್ರ

'ರೈತರು ಕೇಳಿದಷ್ಟು ಪರಿಹಾರ ನೀಡಿದರೆ ನಾನೇ 1 ಕೋಟಿ ರೂಪಾಯಿ ಪರಿಹಾರ ತೆಗೆದುಕೊಳ್ಳಬೇಕಾಗುತ್ತದೆ' ಎಂದು ಲಕ್ಷ್ಮಣ ಸವದಿ ಹೇಳಿದ್ದಾರೆ.

Can Not Give Flood Relief As Farmers Asking: DCM Laxman Savadi

'ಎಕರೆಗೆ 50 ಸಾವಿರ, 1 ಲಕ್ಷ ಪರಿಹಾರ ಕೊಡಿ ಎಂದು ರೈತರು ಕೇಳುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೆರ ಪರಿಹಾರ ವಿತರಣೆ ಮಾರ್ಗಸೂಚಿ ತೆಗೆದುಬಿಡಿ ಎಂದು ಕೇಳುತ್ತಿದ್ದಾರೆ. ಎಲ್ಲರಿಗೂ ಗರಿಷ್ಠ ಪರಿಹಾರ ಕೊಟ್ಟುಬಿಡಿ ಎನ್ನುತ್ತಿದ್ದಾರೆ ಇದು ಸಾಧ್ಯವಿಲ್ಲ' ಎಂದು ಸವದಿ ಹೇಳಿದರು.

ಪ್ರತಾಪ್ ಸಿಂಹ, ಐ ವಿಲ್ ಬಿ ಗ್ರೇಟ್ ಫುಲ್ ಟು ಯು ಫಾರೆವರ್ : ಸೂಲಿಬೆಲೆ ಪ್ರತಾಪ್ ಸಿಂಹ, ಐ ವಿಲ್ ಬಿ ಗ್ರೇಟ್ ಫುಲ್ ಟು ಯು ಫಾರೆವರ್ : ಸೂಲಿಬೆಲೆ

ರೈತರು ಹೇಳಿದಂತೆ ಮಾಡಲಾಗುವುದಿಲ್ಲ ಎಂದ ಸವದಿ, ಕೇಂದ್ರವು ಕೊಡುವ ಬೆಳೆ ಪರಿಹಾರದೊಂದಿಗೆ ನಾವೂ ಒಂದಷ್ಟು ಸೇರಿಸಿ ಕೊಡಬೇಕು ಎಂಬ ಚಿಂತನೆ ನಡೆಸಿದ್ದೇವೆ. ರೈತ ಮುಖಂಡರಿಗೆ ಸಮಾಧಾನ ಆಗದೇ ಇದ್ದರೆ ನಾನೇನೂ ಮಾಡಲು ಆಗುವುದಿಲ್ಲ' ಎಂದು ಸವದಿ ಕೈಚೆಲ್ಲಿದರು.

ಜಿಲ್ಲಾ ವಿಭಜನೆ ಬಗ್ಗೆಯೂ ಇದೇ ಸಂದರ್ಭದಲ್ಲಿ ಮಾತನಾಡಿದ ಲಕ್ಷ್ಮಣ ಸವದಿ, 'ಬಳ್ಳಾರಿ, ಬೆಳಗಾವಿ ಸೇರಿದಂತೆ ಯಾವುದೇ ಜಿಲ್ಲೆಗಳ ವಿಭಜನೆ ಸದ್ಯಕ್ಕೆ ಸರ್ಕಾರದ ಮುಂದೆ ಇಲ್ಲ'' ಎಂದು ಹೇಳಿದರು.

English summary
Can not give flood relief money as farmers asking said DCM Laxman Savadi. He said Farmers asking too much money as help.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X