ಬೆಳಗಾವಿಗೆ ಯಡಿಯೂರಪ್ಪ ಸಂಧಾನ ಮಾಡಲು ಬಂದಿಲ್ಲ: ರಮೇಶ್ ಕತ್ತಿ

ಬೆಂಗಳೂರು, ಏ.1: ಯಡಿಯೂರಪ್ಪ ಅವರು ಬೆಳಗಾವಿಗೆ ಸಂಧಾನಕ್ಕೆಂದು ಬಂದಿಲ್ಲ ಪಕ್ಷದ ಅಭ್ಯರ್ಥಿ ಗೆಲುವಿನ ಬಗ್ಗೆ ಸಿದ್ಧತೆ ಮಾಡಲು ಬಂದಿದ್ದಾರೆ ಎಂದು ಮಾಜಿ ಸಂಸದ ರಮೇಶ್ ಕತ್ತಿ ಹೇಳಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿಕ್ಕೋಡಿ ಲೋಕಸಭೆ ಚುನಾವಣೆ ಟಿಕೆಟ್ ಕೈತಪ್ಪಿದೆ ಎಂದು ಬಿಜೆಪಿ ವಿರುದ್ಧ ಬಂಡಾಯ ಏಳುವ ಮಾತೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಏಪ್ರಿಲ್ 4ರಂದು ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾಗಿದೆ. ಈ ಸಂದರ್ಭದಲ್ಲಿ ಪಕ್ಷ ಏನಾದರೂ ಬದಲಾವಣೆ ಮಾಡಬಹುದು ಅಥವಾ ಅದಕ್ಕೆ ಪರಿಹಾರ ಕೊಡಬಹುದು. ಸಹೋದರ ಉಮೇಶ್ ಕತ್ತಿ ಯುಗಾದಿಗೆ ರಾಜಕೀಯದಲ್ಲಿ ಬದಲಾವಣೆಯಾಗುತ್ತದೆ ಎಂದು ಹೇಳಿದರು.. ಈ ಬಗ್ಗೆ ಪಕ್ಷ ಏನು ನಿರ್ಧಾರ ತೆಗೆದುಕೊಳ್ಳುತ್ತದೆ ಅದಕ್ಕೆ ನಾವು ಬದ್ಧ ಎಂದು ರಮೇಶ್ ಕತ್ತಿ ತಿಳಿಸಿದರು.

BS Yeddyurappa is not came for any negotiation

ಈಗಾಗಲೇ ನಾವು ಹೈಕಮಾಂಡಿಗೆ ಮನವಿ ಮಾಡಿದ್ದೇವೆ. ಅವರು ಮರು ಪರಿಶೀಲನೆ ಮಾಡುತ್ತಿದ್ದು, ಯಾರು ಸೂಕ್ತ ಎಂದು ಅಧ್ಯಯನ ಮಾಡಿ ಅಭ್ಯರ್ಥಿಯನ್ನು ಹೈಕಮಾಂಡ್ ಆಯ್ಕೆ ಮಾಡುತ್ತದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ನಾನು ಚಿಕ್ಕೋಡಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಆದರೆ ಟಿಕೆಟ್ ಕೈ ತಪ್ಪಿದ್ದರಿಂದ ನಿರಾಸೆಯಾಗಿಲ್ಲ. ಕಾರ್ಯಕರ್ತರ ನೋವು ಸ್ವಾಭಾವಿಕವಾಗಿದ್ದು, ಇದನ್ನು ಬಿಜೆಪಿ ಪಕ್ಷ ಸರಿಪಡಿಸಲಿದೆ ಹಾಗೆಂದ ಮಾತ್ರ ಬಿಜೆಪಿ ವಿರುದ್ಧವೇ ಬಂಡಾಯ ಏಳುವುದಿಲ್ಲ ಎಂದೂ ಬಿಜೆಪಿ ತೊರೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+