Bomb Threat: ಈ ಶ್ರೀರಾಮ ಮಂದಿರ ಬ್ಲಾಸ್ಟ್ ಮಾಡುವುದಾಗಿ ಬೆದರಿಕೆ ಪತ್ರ
ಬೆಳಗಾವಿ, ಮಾರ್ಚ್ 09: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಉದ್ಘಾಟನೆ ಆಗಿ ಶ್ರಿರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆ ಬಳಿಕ ದೇಶಾದ್ಯಂತ ರಾಮಜಪ ಶುರುವಾಗಿದೆ. ಆದರೆ ಇದನ್ನು ಸಹಿಸದ ಕೆಲವು ಭಯೋತ್ಪಾದಕರು ಬೆದರಿಕೆ ಒಡ್ಡಿದ್ದಾರೆ.
ಹೌದು, ಬೆಳಗಾವಿ ಜಿಲ್ಲೆಯ ನಿಪ್ಪಾಣಿಯ ಪುರಾಣ ಪ್ರಸಿದ್ಧ ಶ್ರೀರಾಮ ಮಂದಿರ ಸ್ಫೋಟಿಸುವುದಾಗಿ ಬೆದರಿಕೆ ಒಡ್ಡಲಾಗಿದೆ. ಈ ಕುರಿತು ಅನ್ಯಕೋಮಿನ ದುಷ್ಕರ್ಮಿಗಳಿಂದ ರಾಮಮಂದಿರಕ್ಕೆ ಪತ್ರ ಬರೆಯಲಾಗಿದೆ.

ಹಿಂದಿ/ ಉರ್ದು ಭಾಷೆಯಲ್ಲಿ ಅಲ್ಲಾಹು ಅಕ್ಬರ್ ಶಿರ್ಷಿಕೆಯ ಪತ್ರದಲ್ಲಿ ಬೆದರಿಕೆ ಒಡ್ಡಿರುವ ಪತ್ರ ಪತ್ತೆಯಾಗಿದೆ. ಪತ್ರದ ಉದ್ದಕ್ಕೆ ದುಷ್ಕರ್ಮಿಗಲು ಎರಡು ಭಾಷೆಯಲ್ಲಿ ಬೆದರಿಕೆ ಒಡ್ಡಿದ್ದಾರೆ.
ಮೋದಿ..ಮೋದಿ ಎನ್ನುತ್ತಿದ್ದೀರಿ
ಪತ್ರದಲ್ಲಿ ಅಯೋಧ್ಯೆ ರಾಮ ಮಂದಿರ ಕಟ್ಟಿರುವುದಕ್ಕೆ ಅಸಮಧಾನ ವ್ಯಕ್ತಪಡಿಸಿದ್ದಾರೆ. ನಾವೇಕೆ ಸುಮ್ಮನಿರಬೇಕು ಎಂದು ಪ್ರಶ್ನಿಸಿದ್ದಾರೆ. ಶ್ರೀ ರಾಮ ಜಯರಾಮ ಎಂದು ಕೂಗಾಡಿ ದೇಶದಲ್ಲಿ ಮುಸ್ಲಿಂ ಸಮಾಜವನ್ನು ಹೀಯಾಳಿಸುತ್ತಿದ್ದೀರಿ, ಮೋದಿ... ಮೋದಿ ಎಂದು ಏನು ಕೂಗುತ್ತಿದ್ದೀರಿ.
ರಾಷ್ಟ್ರೀಯ ಸ್ವಯ ಸೇವಕ ಸಂಘ (RSS) ಹಾಗೂ BJPಯನ್ನೂ ಸಹ ಪತ್ರದಲ್ಲಿ ತರಾಟೆಗೆ ತೆಗೆದುಕೊಂಡಿರುವ ದುಷ್ಕರ್ಮಿಗಳು ಬೆಳಗಾವಿಯ ನಿಪ್ಪಾಣಿಯಲ್ಲಿನ ಹಿಂದೂಗಳ ಆರಾಧ್ಯ ಶ್ರೀ ರಾಮಮಂದಿರ ದೊಡ್ಡ ಪ್ರಮಾಣದಲ್ಲಿ ಬಾಂಬ್ ಇಟ್ಟು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾರೆ.

ನಿಪ್ಪಾಣಿ ಠಾಣೆಯಲ್ಲಿ ಪ್ರಕರಣ ದಾಖಲು
ಈ ಕುರಿತು ಸ್ಥಳೀಯ ನಿಪ್ಪಾಣಿ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿರುವ ಪೊಲೀಸರು ಈ ಪತ್ರ ಎಲ್ಲಿಂದ ಬಂದಿದೆ. ಯಾರು ಬರೆದಿದ್ದಾರೆ ಎಂದೆಲ್ಲ ತನಿಖೆ ಶುರು ಮಾಡಿದ್ದಾರೆ. ಅಲ್ಲದೇ ನಿಪ್ಪಾಣಿಯಲ್ಲಿ ಮುಂಜಾಗ್ರತೆ ಕ್ರಮವಾಗಿ ಜನರ ಹಿತ ದೃಷ್ಟಿಯಿಂದ ಡಿಎಆರ್ ಪೊಲೀಸ್ ತುಕುಡಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ ಎಂದು ತಿಳಿದು ಬಂದಿದೆ.
ಸಿಎಂ ಸೇರಿ ಮೂವರಿಗೆ ಬೆದರಿಕೆ ಇ-ಮೇಲ್
ಇನ್ನೂ ಮೊನ್ನೆಯಷ್ಟೇ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಗೃಹಸಚಿವ ಜಿ. ಪರಮೇಶ್ವರ್ ಅವರು ಸಹ ಬಾಂಬ್ ಬೆದರಿಕೆ ಮೇಲ್ ಅನ್ನು ಸ್ವೀಕರಿಸಿದ್ದಾರೆ. ಬೆದರಿಕೆಯ ಮೇಲ್ ಮಾಡಿರುವ ಪ್ರಕರಣ ಸಂಬಂಧ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಪ್ರೋಟಾನ್ ಇ-ಮೇಲ್ ವಿರುದ್ಧ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿಲ್ಲ. ಇದಕ್ಕೆ ಕಡಿವಾಣ ಹಾಕಬೇಕಿದೆ. ಬಂದ ಇಮೇಲ್ ಪ್ರೋಟಾನ್ ನಲ್ಲಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ ಪ್ರತಿಕ್ರಿಯಿಸಿದ್ದರು.











Click it and Unblock the Notifications