ಬಿಜೆಪಿ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ: ರಮೇಶ ಜಾರಕಿಹೊಳಿ

ಬೆಳಗಾವಿ, ಜೂನ್ 30: ಬಿಜೆಪಿಯವರ ಜೊತೆ ಕಾಂಗ್ರೆಸ್‌ ಶಾಸಕರು ಸಂಪರ್ಕದಲ್ಲಿ ಇಲ್ಲಾ. ಬಿಜೆಪಿಯವರೇ ನಮ್ಮ ಸಂಪರ್ಕದಲ್ಲಿ ಇದ್ದಾರೆ ಎಂದ ಸಚಿವ ರಮೇಶ ಜಾರಕಿಹೊಳಿ ಎಂದು ಹೇಳಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಧರ್ಮಸ್ಥಳಕ್ಕೆ ನಮ್ಮ ನಾಯಕರ ಆರೋಗ್ಯ ವಿಚಾರಿಸಲು ಹೋಗಿದ್ದೆ. ರಾಜಕೀಯದ ಉದ್ದೇಶ ಇದರ ಹಿಂದಿಲ್ಲ ಎಂದು ಅವರು ಹೇಳಿದರು.

 BJP MLAs were in our contact: Ramesh Jarakiholi

ಡಿ.ಕೆ.ಶಿವಕುಮಾರ್ ಅವರು ವ್ಯಕ್ತಿ ಪೂಜೆಗಿಂತ ಪಕ್ಷ ಪೂಜೆ ಮುಖ್ಯ ಅಂತಾ ಹೇಳಿರುವುದು ಅವರ ವೈಯಕ್ತಿಕ ಅಭಿಪ್ರಾಯ ಯಾರು ನಮಗೆ ಉಪಕಾರ ಮಾಡ್ತಾರೆ ಅವರನ್ನ ನೆನಪಿಸಬೇಕು. ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷಕ್ಕೆ ಉಪಕಾರ ಮಾಡಿದ್ದಾರೆ ಅವರನ್ನ ನೆನಿಸುವುದು ನಮ್ಮ ಕರ್ತವ್ಯ ಎಂದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನ ಉತ್ತರ ಕರ್ನಾಟಕ ಸಿಗಬೇಕು ಎಂಬುದು ನಮ್ಮ ಒತ್ತಾಯ. ಆದರೆ ಕೊನೆಗೆ ಹೈಕಮಾಂಡ್ ತೀರ್ಮಾನ ಒಪ್ಪುತ್ತೇವೆ. ಉತ್ತರ ಕರ್ನಾಟಕದಿಂದ ಸತೀಶ ಜಾರಕಿಹೊಳಿ, ಎಚ್‌.ಕೆ.ಪಾಟೀಲ್, ಎಂ.ಬಿ.ಪಾಟೀಲ್ ಯಾರು ಬೇಕಾದವರು ಕೆಪಿಸಿಸಿ ಅಧ್ಯಕ್ಷ ಆಗಲಿ ಎಂದರು.

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ವಿಚಾರ ಪ್ರತಿಕ್ರಿಯೇ ನಿಡಿದ ಸಚಿವರು ನನ್ನದು ಅಖಂಡ ಕರ್ನಾಟಕ ಇರಬೇಕು ಎಂಬ ಉದ್ದೇಶ , ಉತ್ತರ ಕರ್ನಾಟಕಕ್ಕೆ ಆಗಿರುವ ಅನ್ಯಾಯ ನಮ್ಮ ನಾಯಕರು ಸರಿ ಮಾಡುತ್ತಾರೆ. ಎಲ್ಲದಕ್ಕೂ ಕಾಲಕೂಡಿ ಬರಬೇಕು ಎಂ.ಬಿ.ಪಾಟೀಲರಿಗೆ ಖಂಡಿತವಾಗಿ ಸಚಿವ ಸ್ಥಾನ ಸಿಗುತ್ತೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+