Get Updates
Get notified of breaking news, exclusive insights, and must-see stories!

ಮಕ್ಕಳಿಗೆ ಉಚಿತ ಐಸ್‌ಕ್ರೀಮ್: ಹೀಗೊಂದು ಆಫರ್ ಕೊಟ್ಟ ಬೆಳಗಾವಿ ಶಾಸಕ

ಬಿಜೆಪಿ ಶಾಸಕ ಅಭಯ ಪಾಟೀಲ ಈಗ ಬೆಳಗಾವಿಯಲ್ಲಿ ಶಾಲೆಗೆ ಹೋಗುವ ಮಕ್ಕಳಿಗೆ ಉಚಿತ ಐಸ್ ಕ್ರೀಮ್ ನೀಡುತ್ತಿದ್ದಾರೆ.

ಬೆಳಗಾವಿ ಮಾರ್ಚ್ 14: ರಾಜ್ಯ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಪ್ರಬಲ ಪಕ್ಷಗಳಿಂದ ಭರದ ಸಿದ್ಧತೆ ನಡೆದಿದೆ. ಈ ನಡುವೆ ಬೆಳಗಾವಿ ಬಿಜೆಪಿ ಶಾಸಕರೊಬ್ಬರು ಶಾಲೆಗೆ ಹೋಗುವ ಮಕ್ಕಳಿಗೆ ಉಚಿತ ಐಸ್ ಕ್ರೀಮ್ ನೀಡುವ ಉತ್ಸವ ಆಯೋಜನೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಸಾಮಾನ್ಯವಾಗಿ ಚುನಾವಣೆಗಳಲ್ಲಿ ಮದ್ಯ, ಹಣ, ಸೀರೆ, ಆಹಾರದ ಕಿಟ್, ಮತ್ತಿತರ ಆಮಿಷಗಳನ್ನ ಒಡ್ಡಿ ಮತ ಗಿಟ್ಟಿಸಿಕೊಳ್ಳುವುದನ್ನು ನಾವೆಲ್ಲರೂ ನೋಡಿದ್ದೇವೆ. ಆದರೆ ಈ ಬಾರಿಯ ಚುನಾವಣೆ ತುಂಬಾ ವಿಭಿನ್ನವಾದಂತೆ ತೋರುತ್ತಿದೆ. ಬಿಜೆಪಿ ಶಾಸಕ ಅಭಯ ಪಾಟೀಲ ಈಗ ಬೆಳಗಾವಿಯಲ್ಲಿ ಶಾಲೆಗೆ ಹೋಗುವ ಮಕ್ಕಳಿಗೆ ಉಚಿತ ಐಸ್ ಕ್ರೀಮ್ ನೀಡುತ್ತಿದ್ದಾರೆ.

BJP MLA Abhay Patil offering free ice cream to Students in Belagavi on March 14 and 15

ಶಾಸಕ ಅಭಯ ಪಾಟೀಲ್ ಅವರು ಬೆಳಗಾವಿಯಲ್ಲಿ ಐಸ್‌ ಕ್ರೀಮ್ ಉತ್ಸವವನ್ನು ಇಂದು ಮತ್ತು ನಾಳೆ (ಮಾರ್ಚ್ 14 ಮತ್ತು 15) ಆಯೋಜಿಸಿದ್ದಾರೆ. ಬೆಳಿಗ್ಗೆ 9.30ಕ್ಕೆ ಆರಂಭವಾಗುವ ಈ ಉತ್ಸವ ಸಂಜೆ 7ರವರೆಗೆ ನಡೆಯಲಿದೆ. ಉತ್ಸವದಲ್ಲಿ ಭಾಗವಹಿಸಲು ಮಕ್ಕಳಿಗೆ ಉಚಿತ ಪಾಸ್‌ಅನ್ನು ನೀಡಲಾಗುತ್ತದೆ. ಪಾಸ್‌ ಅನ್ನು ಅಂಗಡಿಯಲ್ಲಿ ತೋರಿಸಿದರೆ ಉಚಿತವಾಗಿ ಐಸ್‌ ಕ್ರೀಮ್ ಪಡೆಯಬಹುದು. ಪಾಸ್‌ ಹೊಂದಿದ ಮಕ್ಕಳಿಗೆ ಮಾತ್ರ ಉಚಿತ ಐಸ್‌ ಕ್ರೀಮ್ ನೀಡಲಾಗುತ್ತದೆ. ಉತ್ಸವದಲ್ಲಿ ಎಲ್‌ಕೆಜಿಯಿಂದ 10ನೇ ತರಗತಿ ಮಕ್ಕಳು ಮಾತ್ರ ಭಾಗವಹಿಸಬೇಕು.

ಪಾಸ್‌ ಪಡೆದವರು ನಿಗದಿತ ಅಥವಾ ಪಾಸ್‌ನಲ್ಲಿ ನೀಡಲಾದ ವಿಳಾಸದ ಐಸ್‌ ಕ್ರೀಮ್ ಪಾರ್ಲರ್‌ನಲ್ಲಿ ಮಾತ್ರ ಉಚಿತ ಐಸ್‌ ಕ್ರೀಮ್ ಸಿಗುತ್ತದೆ. ಪಾಸ್‌ನಲ್ಲಿ ಐಸ್‌ ಕ್ರೀಮ್ ಪಾರ್ಲರ್ ಹೆಸರು ಮತ್ತು ಅದರ ವಿಳಾಸ ಕೂಡ ನೀಡಲಾಗಿದೆ. ಈ ಮೂಲಕ ಮತದಾರರನ್ನು ಸೆಳೆಯಲು ಅಭಯ ಪಾಟೀಲ ಮುಂದಾಗಿದ್ದಾರೆ.

BJP MLA Abhay Patil offering free ice cream to Students in Belagavi on March 14 and 15

ಒಟ್ಟು ಒಂಬತ್ತು ಐಸ್‌ ಕ್ರೀಮ್ ಪಾರ್ಲರ್ ಹೆಸರುಗಳು ಇಲ್ಲಿದೆ:

1.Angolkar parlour- plot No 20(Ioc)pump congress road tilakwadi belagavi.

2.Bhagya nagar parlour- shop num 1 plot no 86/13/1 4th cross bhagya nagar angol belagavi.

3.Hari mandir parlour- shop no 3 mutakekar complex gadgil buss stop main road angol belagavi.

4.RPD collage belagavi- shop no.5 opposite rpd college gate tilakwadi belagavi.

5. RPD cross hindawadi parlour- 74/5 cts no 2808 hindwadi vadgaon belagavi.

6.RPD cross parlour- opp.Hotel Uday Bhavan 52 A somwar peth tilakwadi belagavi

7. Khavu kata- tinisu katte basaveswar circle khanapur road belagavi

8. uppin 1st stage corner- mandoli road near 1st railway gate tilakwadi belagavi.

9. Zatpat colony parlour- R.s.no 744/3 Shivshakti Nagar Angol Belagavi.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+