ಬರ್ತ್ ಡೇ: ಬೆಳಗಾವಿಯಲ್ಲಿ ಕೊರೊನಾಕೃತಿ ಕೇಕ್ ಕಟ್
ಬೆಳಗಾವಿ, ಮೇ 10: ಬೆಳಗಾವಿ ಜಿಲ್ಲೆಯ ವ್ಯಕ್ತಿಯೊಬ್ಬ ಕೊರೊನಾ ವೈರಸ್ ಮಾದರಿಯ ಕೇಕ್ ಕತ್ತರಿಸಿ ತನ್ನ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾನೆ.
ಕೊರೊನಾ ವೈರಸ್ ಆಕೃತಿಯ ಕೇಕ್ ತಯಾರಿಸಿ, ಬರ್ತ್ ಡೇ ಆಚರಣೆ ಮಾಡಿಕೊಂಡಿದ್ದಾನೆ. ಕೇಕ್ ಕತ್ತರಿಸಿ ಅದನ್ನು ಜನರಿಗೆ ತಿನ್ನಿಸಿದ ಈ ವ್ಯಕ್ತಿ ಈಗ ಎಲ್ಲರ ಗಮನ ಸೆಳೆದಿದ್ದಾನೆ.
"ಗೋ ಕೊರೊನಾ, ಕೊರೊನಾ ಖಲ್ಲಾಸ್' ಎಂದು ಈ ವ್ಯಕ್ತಿ ತಿನ್ನಿಸಿದ್ದು, ಆ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾನೆ. ಮಲ್ಲಿಕಾರ್ಜುನ ಚೌಕಾಶಿ ಎಂಬಾತನೇ ಕೊರೊನಾ ವೈರಸ್ ಮಾದರಿಯ ಕೇಕ್ ಕತ್ತರಿಸಿ ಬರ್ತ್ ಡೇ ಆಚರಿಸಿಕೊಂಡಿರುವ ವ್ಯಕ್ತಿಯಾಗಿದ್ದಾನೆ.

ಬೆಳಗಾವಿ ಜಿಲ್ಲೆ ಘಟಪ್ರಭಾದ ಈ ವ್ಯಕ್ತಿ, ಜನರು ಕೇಕ್ ತಿಂದಂತೆ ಕೊರೊನಾ ವೈರಸ್ ಕೂಡಾ ಕರಗಿ ಹೋಗಲಿ ಎಂಬ ಆಶಯದೊಂದಿಗೆ ಬರ್ತ್ ಡೇ ಆಚರಿಸಿಕೊಂಡಿದ್ದಾನೆ. ಹಾಸ್ಯಗಾರ ಸಂಜು ಬಸಯ್ಯ, ಚಿತ್ರನಟ ಪ್ರಕಾಶ ಸಿಂದಿಕುರಬೆಟ್ಟ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.












Click it and Unblock the Notifications