ಎಸ್.ಎಲ್.ಭೈರಪ್ಪಗೆ ಬೆಟಗೇರಿ ಕೃಷ್ಣಶರ್ಮ ಪ್ರಶಸ್ತಿ

ಬೆಳಗಾವಿ, ಜು. 23 : ಡಾ.ಬೆಟಗೇರಿ ಕೃಷ್ಣಶರ್ಮ ಪ್ರತಿಷ್ಠಾನದಿಂದ ನೀಡುವ ಕಾದಂಬರಿ ಪ್ರಶಸ್ತಿಗೆ ಖ್ಯಾತ ಸಾಹಿತಿ ಎಸ್.ಎಲ್.ಭೈರಪ್ಪ ಅವರನ್ನು ಆಯ್ಕೆ ಮಾಡಲಾಗಿದೆ. ಜು.30ರಂದು ಬೆಳಗಾವಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ 2014ನೇ ಸಾಲಿನ ಕಾದಂಬರಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ.

ಬೆಳಗಾವಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಬೆಟಗೇರಿ ಕೃಷ್ಣಶರ್ಮ ಪ್ರತಿಷ್ಠಾನದ ಅಧ್ಯಕ್ಷ ರಾಘವೇಂದ್ರ ಪಾಟೀಲ ಅವರು, ಡಾ.ಬೆಟಗೇರಿ ಕೃಷ್ಣಶರ್ಮ ಅವರ ಹೆಸರಿನಲ್ಲಿ ನೀಡುವ ಕಾದಂಬರಿ ಪ್ರಶಸ್ತಿಗೆ ಡಾ.ಎಸ್.ಎಲ್.ಭೈರಪ್ಪ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದರು. [ಭೈರಪ್ಪನವರ ಹೊಸ ಕಾದಂಬರಿ 'ಯಾನ' ಪ್ರೀ ಬುಕ್ಕಿಂಗ್]

S.L.Bhyrappa

ಕಾದಂಬರಿ ಕೃಷಿಯಲ್ಲಿ ಹೆಸರುವಾಸಿಯಾದ ಭೈರಪ್ಪ ಅವರಿಗೆ 2014ನೇ ಸಾಲಿನ ಕಾದಂಬರಿ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ. ಜು.30ರಂದು ಬೆಳಗಾವಿಯ ಕುಮಾರ ಗಂಧರ್ವ ರಂಗಮಂದಿರದಲ್ಲಿ ನಡೆಯುವ ಸಮಾರಂಭದಲ್ಲಿ ಹಿರಿಯ ಸಾಹಿತಿ ಚನ್ನವೀರ ಕಣವಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ತಿಳಿಸಿದರು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಎನ್.ಜಯರಾಂ, ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಬಿ.ಆರ್. ಅನಂತನ್ ಮುಂತಾದವರು ಉಪಸ್ಥಿತರಿರುವರು. ಪ್ರಶಸ್ತಿಯು ಒಂದು ಲಕ್ಷ ರೂ. ಮೌಲ್ಯ ಒಳಗೊಂಡಿದೆ ಎಂದು ರಾಘವೇಂದ್ರ ಪಾಟೀಲ ಹೇಳಿದರು.

ಬಸವರಾಜ ಕಲ್ಗುಡಿ, ಎಚ್.ಎಸ್.ರಾಘವೇಂದ್ರರಾವ್ ಹಾಗೂ ಒ.ಎಸ್.ನಾಗಭೂಷಣ ಅವರನ್ನು ಒಳಗೊಂಡ ಸಮಿತಿಯನ್ನು ಪ್ರಶಸ್ತಿಗಾಗಿ ಅರ್ಹರನ್ನು ಆಯ್ಕೆ ಮಾಡಲು ಟ್ರಸ್ಟ್ ರಚಿಸಿತ್ತು. ಸಮಿತಿಯ ಒಮ್ಮತದ ತೀರ್ಮಾನದಂತೆ ಎಸ್.ಎಲ್.ಭೈರಪ್ಪ ಅವರನ್ನು 2014ನೇ ಸಾಲಿನ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ ಎಂದರು. [ಮಾಹಿತಿ : ಕರ್ನಾಟಕ ವಾರ್ತೆ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+