ಡಿ.10 ರಿಂದ ಬೆಳಗಾವಿ ಅಧಿವೇಶನ, ಸರ್ಕಾರದ ಮೇಲೆರಗಲು ವಿಪಕ್ಷಕ್ಕೆ ಕಾತರ
ಬೆಂಗಳೂರು, ನವೆಂಬರ್ 14: ಚಳಿಗಾಲದ ಅಧಿವೇಶನ ಅಥವಾ ಬೆಳಗಾವಿ ಅಧಿವೇಶನವು ಡಿಸೆಂಬರ್ 10 ರಿಂದ ಆರಂಭಗೊಳ್ಳಲಿದೆ ಎಂದು ರಾಜ್ಯ ಸರ್ಕಾರ ನಿರ್ಧರಿಸಿದೆ.
ಡಿಸೆಂಬರ್ 10 ರಿಂದ 21 ರ ವರೆಗೆ ಬೆಳಗಾವಿಯ ಸುವರ್ಣಸೌಧದಲ್ಲಿ ಅಧಿವೇಶನ ನಡೆಯಲಿದ್ದು, ರಾಜ್ಯದ ಭವಿಷ್ಯವನ್ನು ರಾಜಕಾರಣಿಗಳು ಚರ್ಚಿಸಲಿದ್ದಾರೆ.
ಮೈತ್ರಿ ಸರ್ಕಾರದ ಟೇಕ್‌ಆಫ್ ಆದ ನಂತರ ಎದುರುಗೊಳ್ಳುತ್ತಿರುವ ಮೊದಲ ಅಧಿವೇಶನ ಇದಾಗಿದ್ದು, ವಿಪಕ್ಷವು ಸರ್ಕಾರದ ಮೇಲೆರಗಲು ತುದಿಗಾಲಲ್ಲಿ ಕಾಯುತ್ತಿದೆ.

ರೈತರ ಸಾಲಮನ್ನಾ, ಅಧಿಕಾರಿಗಳ ವರ್ಗಾವಣೆ, ರೈತರ ಆತ್ಮಹತ್ಯೆ ಇನ್ನೂ ಹಲವು ವಿಷಯಗಳು ಅಧಿವೇಶನದಲ್ಲಿ ಕಾವೇರಿದ ಚರ್ಚೆಗೆ ಒಳಪಡಲಿವೆ. ಬೆಳಗಾವಿಯನ್ನು ಎರಡನೇ ರಾಜಧಾನಿಯನ್ನಾಗಿಸುವ ವಿಷಯವೂ ಚರ್ಚೆಗೆ ಬರಲಿದೆ.
ಋಣಮುಕ್ತ ಮಸೂದೆ ಸೇರಿ ಇನ್ನೂ ಹಲವು ಮಸೂದೆಗಳನ್ನು ಸರ್ಕಾರವು ಅಧಿವೇಶನದಲ್ಲಿ ಮಂಡಿಸಲಿದ್ದು, ಎಷ್ಟು ಮಸೂದೆಗಳಿಗೆ ಒಪ್ಪಿಗೆ ಪಡೆದುಕೊಳ್ಳಲಿದೆ ಎಂಬುದನ್ನು ನೋಡಬೇಕಿದೆ.












Click it and Unblock the Notifications