ಅಮಿತ್ ಶಾ ಅವರ ಮುಂಬಯಿ ಕರ್ನಾಟಕ ಪ್ರವಾಸ ರದ್ದು

ಬೆಳಗಾವಿ, ಏಪ್ರಿಲ್ 02: ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಮುಂಬಯಿ ಕರ್ನಾಟಕ ಪ್ರವಾಸ ಸದ್ಯಕ್ಕೆ ರದ್ದಾಗಿದೆ. ಸೋಮವಾರ (ಏಪ್ರಿಲ್ 02)ಬೆಳಗಾವಿ ಜಿಲ್ಲೆಯಿಂದ ಚುನಾವಣಾ ಪ್ರಚಾರ ಕಾರ್ಯದಲ್ಲಿ ಅಮಿತ್ ಶಾ ತೊಡಗಿಕೊಳ್ಳಬೇಕಾಗಿತ್ತು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು

ಆದರೆ, ರಾಜ್ಯಸಭಾ ಕಲಾಪದಲ್ಲಿ ಭಾಗಿಯಾಗಬೇಕಾಗಿರುವ ಹಿನ್ನೆಲೆ ಇಂದಿನ ಕಾರ್ಯಕ್ರಮ ಮುಂದೂಡಲಾಗಿದೆ ಎಂದು ಬಿಜೆಪಿ ಪ್ರಕಟಿಸಿದೆ.ಸುಪ್ರಿಂಕೋರ್ಟ್ ಸಿಜೆಐ ವಿರುದ್ಧ ಮಹಾಭಿಯೋಗ ಕಾರಣದಿಂದ ರಾಜ್ಯಸಭೆಯಲ್ಲಿ ಅಮಿತ್ ಶಾ ಅವರ ಉಪಸ್ಥಿತಿ ಅನಿವಾರ್ಯವಾಗಿರುವ ಹಿನ್ನೆಲೆ,ಮುಂಬೈ ‌ಕರ್ನಾಟಕ ಭಾಗದ ಅಮಿತ್ ಶಾ ಪ್ರವಾಸ ಕಾರ್ಯಕ್ರಮವನ್ನು ಸದ್ಯಕ್ಕೆ ರದ್ದುಪಡಿಸಲಾಗಿದೆ.

ಏಪ್ರಿಲ್ 12 ಮತ್ತು 13 ರಂದು ರಾಜ್ಯಕ್ಕೆ ಬರಲಿರುವ ಅಮಿತ್ ಶಾ, ಬೆಳಗಾವಿಯ ಚಿಕ್ಕೋಡಿ, ನಿಪ್ಪಾಣಿ ಹಾಗೂ ನಂತರ, ಗೋಕಾಕದ ನಡೆಯುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ಬೆಳಗಾವಿಯ ಬಿಜೆಪಿ ಗ್ರಾಮೀಣ ಘಟಕದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ನಡೆಸಿದ ಬಿಜೆಪಿ ವಿಭಾಗೀಯ ಪ್ರಭಾರಿ ಈರಣ್ಣ ಕಡಾದಿ ಹೇಳಿದರು.

Amit Shah Bombay Karnataka tour re scheduled

ಬೆಳಗಾವಿಯ ಕೆಎಲ್ಇ ಕಾಲೇಜಿನಲ್ಲಿ ಸಂವಾದ, ನಿಪ್ಪಾಣಿಯಲ್ಲಿ ಜೈನ ಸಮುದಾಯದ ಜತೆ ಚರ್ಚೆ, ಮಹಿಳಾ ಕಾರ್ಮಿಕರ ಜತೆ ಸಂವಾದ, ಗೋಕಾಕದಲ್ಲಿ ರೋಡ್ ಶೋ ನಡೆಸಲಿದ್ದಾರೆ. ನಂತರ ಬಾಗಲಕೋಟೆಗೆ ತೆರಳಿ ಮುಷ್ಟಿ ಧಾನ್ಯ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲಿಂದ ಕೂಡಲಸಂಗಮ ಹಾಗೂ ಕಾಗಿನೆಲೆ ಕನಕಪೀಠಕ್ಕೆ ಭೇಟಿ ನೀಡಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+