ಜಾಕೆಟ್ ಕೊಡಿಸಲು ತಡ ಆಗಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಬೆಳಗಾವಿ ಬಾಲಕ
ಬೆಳಗಾವಿ, ಫೆಬ್ರವರಿ 12: ಜಾಕೆಟ್ ಕೊಡಿಸಲು ತಂದೆ ತಡ ಮಾಡಿದ್ದಕ್ಕೆ ಬಾಲಕನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ಬೆಳಗಾವಿಯ ಬಸೂರ್ತೆ ಗ್ರಾಮದಲ್ಲಿ ನಡೆದಿದೆ.
ಶುಭಂ ಗಜಾನನ ಹನ್ನೂರಕರ (15) ಆತ್ಮಹತ್ಯೆ ಮಾಡಿಕೊಂಡಾತ. ಬಸೂರ್ತೆ ಗ್ರಾಮದ ಶುಭಂ ತನ್ನ ತಂದೆಯ ಬಳಿ ಹೊಸ ಜಾಕೆಟ್ ಕೊಡಿಸುವಂತೆ ಕೇಳಿಕೊಂಡಿದ್ದಾನೆ. ಇದಕ್ಕೆ ತಂದೆ ಗಜಾನನ ಆನ್ ಲೈನ್ ನಲ್ಲಿ ಖರೀದಿಸಬೇಡ, ಬೆಳಗಾವಿಯಲ್ಲಿ ನಾನೇ ಖರೀದಿ ಮಾಡಿಕೊಂಡು ಬರುತ್ತೇನೆ ಎಂದು ಹೇಳಿದ್ದಾರೆ.

ಆದರೆ ಗಜಾನನ ಅವರು ಕಾರ್ಖಾನೆಗೆ ಕೆಲಸಕ್ಕೆ ಹೋದಾಗ, ಮನೆಯಲ್ಲಿದ್ದ ಶುಭಂ ತನಗೆ ಈಗಲೇಬೇಕು ಜಾಕೆಟ್ ಕೊಡಿಸು ಎಂದು ಹಟ ಹಿಡಿದಿದ್ದಾನೆ. ಈ ವೇಳೆ ಗಜಾನನ ಅವರು ಗದರಿದ್ದಾರೆ. ಆ ನಂತರ ಬಾಲಕ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications