ಮಾಸ್ಕ್ ಧರಿಸಿದವರನ್ನು ಕಂಡ್ರೆ ರಾಮಾಯಣ ನೆನಪಾಗುತ್ತೆ ಅಂದಿದ್ದೇಕೆ ಸಂಸದ ಹೆಗಡೆ?

ಬೆಳಗಾವಿ, ಆಗಸ್ಟ್ 19: ಮಾಸ್ಕ್ ಧರಿಸಿದವರನ್ನು ನೋಡಿದರೆ ನನಗೆ ರಾಮಾಯಣ ನೆನಪಾಗುತ್ತಿದೆ ಎಂದು ಹೇಳುವ ಮೂಲಕ ಮತ್ತೊಮ್ಮೆ ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆ ವಿವಾದದ ಸುಳಿಗೆ ಸಿಲುಕಿದ್ದಾರೆ.

Recommended Video

      ಹೇಳಿದ ಕೆಲಸವನ್ನು ಮೊದಲು ಮಾಡಿ ಎಂದ್ರು ಸುಧಾಕರ್ | Oneindia Kannada

      ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಎಂ.ಕೆ ಹುಬ್ಬಳ್ಳಿ ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೊರೊನಾ ವಿಚಾರದಲ್ಲಿ ನಮಗೆ ಸುಮ್ಮನೆ ಹೆದರಿಸಿದ್ದಾರೆ. ಈ ಕೊರೊನಾ ಅಂಥ ವೈರಾಣು ಏನಲ್ಲ. ತಪ್ಪು ತಿಳಿದುಕೊಳ್ಳಬೇಡಿ ತಮಾಷೆಗೆ ಹೇಳುತ್ತಿರುವೆ ಎಂದರು.

      ಎಲ್ಲರನ್ನು ನೋಡಿದಾಗ ನನಗೆ ತುಂಬಾ ರಾಮಾಯಣ ನೆನಪಾಗುತ್ತೆ, ಮಾಸ್ಕ್ ಹಾಕಿಕೊಂಡವರನ್ನು ಸಂಸದ ಅನಂತಕುಮಾರ್ ಹೆಗಡೆ ಕಪಿಗಳಿಗೆ ಹೋಲಿಸಿದ್ದಾರೆ. ಮಾತು ಮುಂದುವರೆಸಿ, ಕೊರೊನಾ ಬಗ್ಗೆ ಜಾಸ್ತಿ ಹೆದರಬೇಕಿಲ್ಲ. ಅದರ ಜೊತೆಯೇ ಜೀವನ ಮಾಡಬೇಕಿದೆ ಎಂದು ಹೇಳಿದರು.

      Ananth Kumar Hegde Controversial Comment On People Wearing Face Mask

      ಕೊರೊನಾ ಭ್ರಮೆಯಲ್ಲಿ ಬದುಕುವುದು ಬೇಡ. ನೆಗಡಿ, ಕೆಮ್ಮು ಜ್ವರದಂತೆ ಕೊರೊನಾ ಕೂಡ ಒಂದು ರೋಗ. ಕೊರೊನಾ ವೈರಸ್ ಗೆ ಹೆದರಿದರೆ ದೇಶ ಆರ್ಥಿಕವಾಗಿ ದಿವಾಳಿ ಆಗುತ್ತದೆ ಎಂದರು. ಸಂಸದರ ಭಾಷಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+