Physically Harassment: ಬಿಜೆಪಿ ಮುಖಂಡನ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ!
ಬೆಳಗಾವಿ ಆಗಸ್ಟ್ 23: ಬೆಳಗಾವಿಯಲ್ಲಿ ಬಿಜೆಪಿ ಮುಖಂಡನ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದೆ. ಬಿಜೆಪಿ ಮುಖಂಡ ಪೃಥ್ವಿಸಿಂಗ್ ಲುಧಾರ ಹಾಗೂ ಅವರ ಪುತ್ರ ಜಶ್ವಿರ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಲಾಗಿದೆ. ತಂದೆ ತೀರಿ ಹೋದ ಮೇಲೆ ಜವಾಬ್ದಾರಿ ತೆಗೆದುಕೊಳ್ಳುವ ಭರವಸೆ ನೀಡಿ ಸಂತ್ರಸ್ತೆಯನ್ನು ಮನೆಗೆ ಕರೆತಂದಿದ್ದ ಪೃಥ್ವಿಸಿಂಗ್ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.
ಸಂತ್ರಸ್ತೆ ಹೇಳಿಕೆ ಆಧಾರದ ಮೇಳೆ ಖಡೇಬಜಾರ್ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 2019ರಿಂದ ಪೃಥ್ವಿಸಿಂಗ್ ಲುಧಾರ ಹಾಗೂ ಸಂತ್ರಸ್ತೆ ಪರಿಚಯಸ್ತರು. ಹೀಗಾಗಿ ಸಂತ್ರಸ್ತೆಯ ತಂದೆ ತೀರಿ ಹೋದ ಸಂದರ್ಭದಲ್ಲಿ ಪೃಥ್ವಿಸಿಂಗ್ ಲುಧಾರ ಸಂತ್ರಸ್ತೆಯನ್ನು ನೋಡಿಕೊಳ್ಳುವ ಭರವಸೆ ನೀಡಿದ್ದರು. ಕಳೆದ ಕೆಲ ತಿಂಗಳ ಹಿಂದೆ ಆಕೆಗೆ ಮದುವೆ ಮಾಡಿದ್ದರು.

ಆದರೆ ಸಂತ್ರಸ್ತೆಯ ಪತಿ ಹಾಗೂ ಆಕೆಯ ಅತ್ತೆಗೆ ಪೃಥ್ವಿಸಿಂಗ್ ಲುಧಾರ ಅವಾಚ್ಯ ಶಬ್ದಗಳಿಂದ ಬೈದಿದ್ದಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ. ಅಲ್ಲದೆ ಆತ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆಂದು ಆಕೆ ದೂರಿದ್ದಾಳೆ. ಬೆಳಗಾವಿಯ ಜಯನಗರದ ಮನೆಯಲ್ಲಿ ಸಂತ್ರಸ್ತೆಯ ಮೈಮುಟ್ಟಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಅಲ್ಲದೆ ಸಂತ್ರಸ್ತೆಗೆ ಬಲವಂತವಾಗಿ ವಿಷ ನೀಡಿ ಆಸ್ಪತ್ರೆಗೆ ದಾಖಲಾಗಿರುವಾಗ, ಈ ಸ್ಥಿತಿಗೆ ಗಂಡ ಅತ್ತೆ ಕಾರಣ ಎಂದು ಹೇಳಲು ಪೃಥ್ವಿಸಿಂಗ್ ಲುಧಾರ ಸಂತ್ರಸ್ತೆಗೆ ಒತ್ತಾಯಿಸಿದ್ದಾರೆ ಎಂದು ಆರೋಪ ಮಾಡಲಾಗಿದೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಮನೆ ಕರೆದುಕೊಂಡು ಹೋಗಿ ಸಂತ್ರಸ್ತೆ ಮೇಲೆ ಹಲ್ಲೆ ಮಾಡಿ, ಬಳಿಕ ಬಂದೂಕು ತೋರಿಸಿ ಆಕೆಯನ್ನು ಹೆದರಿಸಿದ ಪೃಥ್ವಿಸಿಂಗ್ ಲುಧಾರ ಪುತ್ರ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ಆರೋಪ ಮಾಡಿದ್ದಾಳೆ.
ಮೊದಲಿನಿಂದಲೂ ನಾನು ಬಿಜೆಪಿ ಮುಖಂಡ ಪೃಥ್ವಿ ಸಿಂಗ್ ಫೌಂಡೇಶನ್ ನಲ್ಲಿ ಕೆಲಸ ಮಾಡುತ್ತಿದ್ದೆ. ಕೆಲವು ನಕಲಿ ಪ್ರಭಾವಿ ವ್ಯಕ್ತಿಗಳನ್ನು ಬಳಸಿಕೊಂಡು ನನಗೆ ಹಿಂಸೆ ಕೊಟ್ಟಿದ್ದ. ಬಳಿಕ ನನ್ನನ್ನು ಅವನ ಮನೆಯಲ್ಲಿ ನನ್ನನ್ನು ಟ್ರಾಪ್ ಮಾಡಿ, ಹೇಳಿದ ಹಾಗೆ ನಾನು ಕೇಳದೆ ಇದ್ದರೆ ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದ. ನನ್ನ ಗಂಡ ಬುದ್ಧಿವಾದ ಹೇಳಿದರೂ ನನ್ನನ್ನು ಬಿಡುತ್ತಿರಲಿಲ್ಲ ಎಂದು ಸಂತ್ರಸ್ತೆ ದೂರಿದ್ದಾಳೆ.
ಆತ ನನ್ನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿದ್ದ ನನ್ನ ಗೆಳೆಯನೊಂದಿಗೆ ನನಗೆ ಮದುವೆ ಮಾಡಿಸಿ ಹಳೆಯ ಫೋಟೊ ಗಮಡನ ತಂದೆ ತಾಯಿಗೆ ತೋರಿಸಿ ನನ್ನ ದುರುಪಯೋಗಪಡಿಸಿಕೊಂಡಿದ್ದಾನೆ. ರಕ್ಷಾ ಬಮಧನದ ದಿನ ಮನೆಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ನಮ್ಮ ಮನೆಯವರ ಮೇಲೆ ದೂರು ಕೊಡಿಸಿ ಆತನೇ ಸಂಧಾನ ಮಾಡಿ ಹಣ ಮಾಡುವ ದುರುದ್ದೇಶ ಹೊಂದಿದ್ದ ಎಂದು ದೂರಿದ್ದಾರೆ.
ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆದರೆ ತಮ್ಮ ಮೇಲಿನ ಆರೋಪದ ಬಗ್ಗೆ ಬಿಜೆಪಿ ಮುಖಂಡ ಪೃಥ್ವಿಸಿಂಗ್ ಲುಧಾರ ಆಗಲಿ ಅಥವಾ ಅವರ ಪುತ್ರ ಜಶ್ವಿರ್ ಸಿಂಗ್ ಆಗಲಿ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.
ಆದರೆ ಕೆಲ ದಿನಗಳ ಹಿಂದೆ ಪತಿ ಹಾಗೂ ಮಾವನ ವಿರುದ್ಧ ವರದಕ್ಷಿಣೆ ಕಿರುಕುಳ, ಲೈಂಗಿಕ ದೌರ್ಜನ್ಯ ಆರೋಪ ಮಾಡಿ ವಿಷ ಸೇವಿಸಿ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಇದೀಗ ಉಲ್ಟಾ ಹೊಡೆದಿದ್ದು, ಬಿಜೆಪಿ ಮುಖಂಡ ಹಾಗೂ ಅವರ ಪುತ್ರ ಆಕೆಯನ್ನು ಕೂಡಿಹಾಕಿ ದೌರ್ಜನ್ಯ ಎಸಗಿದ್ದಾರೆ ಎಂದು ಸಂತ್ರಸ್ತೆ ಉಲ್ಟಾ ಹೊಡೆದಿದ್ದಾಳೆ ಎಂದು ಆರೋಪಿಸಲಾಗಿದೆ.












Click it and Unblock the Notifications