• search
  • Live TV
ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಳ್ಳಂಬೆಳಗ್ಗೆ ವಿವಿಧ ಜಿಲ್ಲೆಗಳಲ್ಲಿ ಎಸಿಬಿ ದಾಳಿ, ಅಧಿಕಾರಿಗಳಿಗೆ ಶಾಕ್!

|

ಬೆಳಗಾವಿ, ಅಕ್ಟೋಬರ್ 06: ಬೆಳ್ಳಂಬೆಳಗ್ಗೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದ ಅಧಿಕಾರಿಗಳು ವಿವಿಧ ಜಿಲ್ಲೆಗಳಲ್ಲಿ ದಾಳಿ ನಡೆಸಿದ್ದಾರೆ.

ಬೆಳಗಾವಿಯ ಖಾನಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿಬಿ ಪಾಟೀಲ್ ಅವರ ಮನೆ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಬೆಳಗಾವಿಯ ರಾಮತೀರ್ಥನಗರದಲ್ಲಿರುವ ಅವರ ಮನೆ ಮೇಲೆ ದಾಳಿ ನಡೆದಿದೆ.

ಬಾಗಲಕೋಟೆ ಜಿಲ್ಲೆಯಲ್ಲೂ ಕೆಲವೆಡೆ ಎಸಿಬಿ ದಾಳಿ ನಡೆದಿದೆ. ಸಿಬಿ ಪಾಟೀಲ್ ಅವರ ಸಹೋದರರ ಬೈಲಹೊಂಗಲದ ನಿವಾಸದ ಮೇಲೂ ದಾಳಿ ನಡೆಸಲಾಗಿದೆ.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಉಪ ಆಯುಕ್ತ ಚಿದಾನಂದ ಮಿಂಚಿನಾಳ ಅವರ ಬಾಗಲಕೋಟೆಯ ಕಚೇರಿ ಮೇಲೆ ದಾಳಿ ನಡೆದಿದೆ.

ದಾಳಿಯ ಕುರಿತು ಸಂಪೂರ್ಣ ಮಾಹಿತಿ ಇನ್ನೂ ಲಭ್ಯವಾಗಿಲ್ಲ.

ಬೆಂಗ್ಳೂರಲ್ಲಿ ಎಸಿಬಿಗೆ ಸಿಕ್ಕಿದ್ದು ಕೇಜಿಗಟ್ಟಲೆ ಚಿನ್ನ, ಮೂಟೆಗಟ್ಟಲೆ ದುಡ್ಡು

ಶುಕ್ರವಾರ ರಾಜಧಾನಿ ಬೆಂಗಳೂರಿನಲ್ಲೂ ಗಳಿಕೆ ಮೀರಿ ಆಸ್ತಿ ಸಂಪಾದಿಸಿದ ಆರೋಪದ ಮೇಲೆ ಎಸಿಬಿ ತಂಡ ಹಲವು ಅಧಿಕಾರಿಗಳ ನಿವಾಸ ಮತ್ತು ಕಚೇರಿ ಏಲೆ ದಾಳಿ ನಡೆಸಿತ್ತು.

ಬಿಡಿಎ ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ: 5 ಕೋಟಿ ನಗದು ಪತ್ತೆ

ಸುಮಾರು ಎಂಟು ಸ್ಥಳಗಳಲ್ಲಿ ನಡೆದ ದಾಳಿಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಪತ್ತೆಯಾಗಿತ್ತು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಇಂಜಿನಿಯರ್ ಎನ್ ಜಿ ಗೌಡಯ್ಯ ಅವರ ನಿವಾಸದ ಮೇಲೆ, ಕೆಐಎಡಿಬಿ ಮುಖ್ಯ ಅಭಿವೃದ್ಧಿ ಅಧಿಕಾರಿ ಟಿ ಆರ್ ಸ್ವಾಮಿ ಸೇರಿದಂತೆ ಹಲವು ಅಧಿಕಾರಿಗಳ ನಿವಾಸದ ಮೇಲೆ ಎಸಿಬಿ ಪೊಲೀಸರು ದಾಳಿ ನಡೆಸಿದ್ದರು.

ಇಂದು ನಡೆದ ಎಸಿಬಿ ದಾಳಿಯ ವಿವರ ಇಲ್ಲಿದೆ:

* ಶ್ರೀ ಚಂದ್ರೇ ಗೌಡ ಬಿ.ಪಾಟೀಲ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಖಾನಾಪುರ ಉಪ ವಿಭಾಗ, ಬೆಳಗಾವಿ ಜಿಲ್ಲೆ.

ಇವರ ರಾಮತೀರ್ಥನಗರ, ಬೆಳಗಾವಿಯಲ್ಲಿನ ವಾಸದ ಮನೆ, ಇವರ ಸಂಬಂಧಿಕರ ಬೈಲಹೊಂಗಲ, ಬೆಳಗಾವಿ ಜಿಲ್ಲೆಯಲ್ಲಿನ ವಾಸದ ಮನೆ ಹಾಗೂ ಇವರು ಕರ್ತವ್ಯ ನಿರ್ವಹಿಸುತ್ತಿರುವ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಖಾನಾಪುರ ಉಪ ವಿಭಾಗ, ಬೆಳಗಾವಿಯ ಕಛೇರಿ.

* ಶ್ರೀ ಚಿದಾನಂದ ಬಿ.ಮಿಂಚಿನಾಳ್, ಎಇಇ, ಗ್ರಾಮೀಣ ಕುಡಿಯುವ ನೀರು ಸರಬರಾಜು ವಿಭಾಗ, ಬಾಗಲಕೋಟೆ ಉಪ ವಿಭಾಗ, ಬಾಗಲಕೋಟೆ ಜಿಲ್ಲೆ.

ಇವರ ವಿಜಯಪುರ ನಗರದಲ್ಲಿನ ಎರಡು ವಾಸದ ಮನೆ ಮತ್ತು ಇವರು ಕರ್ತವ್ಯ ನಿರ್ವಹಿಸುತ್ತಿರುವ ಸಹಾಯಕ ಕಾರ್ಯಪಾಲಕ ಅಭಿಯಂತರರ ಕಛೇರಿ, ಗ್ರಾಮೀಣ ಕುಡಿಯುವ ನೀರು ಸರಬರಾಜು, ಬಾಗಲಕೋಟೆ ಉಪ ವಿಭಾಗ, ಬಾಗಲಕೋಟೆ ಜಿಲ್ಲೆ.

ವಿವಿಧ ಎಸಿಬಿ ತಂಡಗಳಿಂದ ಮೇಲ್ಕಂಡ ಆರೋಪಿತ ಸರ್ಕಾರಿ ನೌಕರರ ವಿರುದ್ಧ ದಾಳಿ ಮುಂದುವರೆದಿದ್ದು, ಸದರಿ ಸರ್ಕಾರಿ ನೌಕರರು ಹೊಂದಿರುವ ಆಸ್ತಿ-ಪಾಸ್ತಿಗಳ ಮೂಲದ ಬಗ್ಗೆ ತನಿಖೆ ಹಾಗೂ ದಾಖಲೆಗಳ ಪರಿಶೀಲನಾ ಕಾರ್ಯ ಹಾಗೂ ಸಂಬಂಧಪಟ್ಟ ಇನ್ನು ಹೆಚ್ಚಿನ ಸ್ಥಳಗಳ ಮಾಹಿತಿ ಸಂಗ್ರಹಣೆ ಮುಂದುವರೆದಿದೆ.

English summary
Anti corruption Board officials attack many government offficers in Belagavi and Bagalkot district. More details awaited.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X