ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತೀರ್ಥ ಕುಡಿಯುವಾಗ ಕೃಷ್ಣನ ಮೂರ್ತಿಯನ್ನೇ ನುಂಗಿದ ಭಕ್ತ!

|
Google Oneindia Kannada News

ಬೆಳಗಾವಿ, ಜೂನ್ 23: ವ್ಯಕ್ತಿಯೊಬ್ಬರು ತೀರ್ಥ ಸೇವನೆ ವೇಳೆ ಅಂಗೈನಲ್ಲಿದ್ದ ಬಾಲಕೃಷ್ಣನ ಲೋಹದ ಮೂರ್ತಿಯನ್ನು ನುಂಗಿರುವ ವಿಲಕ್ಷಣ ಘಟನೆ ಬೆಳಗಾವಿಯಲ್ಲಿ ನಡೆದಿದೆ. ದೇವರಿಗೆ ಪೂಜೆ ಮಾಡಿ ಅಂಗೈನಲ್ಲಿ ಬಾಲಕೃಷ್ಣನ ಮೂರ್ತಿ ಇಟ್ಟುಕೊಂಡಿದ್ದ ವ್ಯಕ್ತಿ ಆಕಸ್ಮಿಕವಾಗಿ ತೀರ್ಥದ ಜೊತೆ ಮೂರ್ತಿಯನ್ನು ನುಂಗಿದ್ದಾರೆ.

ಈತ ಪ್ರತಿ ದಿನ ದೇವರ ಪೂಜೆ ಮಾಡಿದ ಬಳಿಕ ತೀರ್ಥ ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡಿದ್ದರು. ಎಂದಿನಂತೆ ಪೂಜೆ ಮಾಡಿದ ಬಳಿಕ ತೀರ್ಥ ಸೇವಿಸುವಾಗ ಈ ಘಟನೆ ನಡೆದಿದೆ. ಬಳಿಕ ಆತನಿಗೆ ಗಂಟಲು ನೋವು ಮತ್ತು ಗಂಟಲು ಊತ ಉಂಟಾಗಿದೆ. ಕೂಡಲೇ ಸ್ಥಳೀಯ ವೈದ್ಯರನ್ನು ಆತ ಸಂಪರ್ಕಿಸಿದ್ದಾರೆ.

ಭದ್ರಾವತಿ; ಕ್ರಿಕೆಟ್ ಆಡುತ್ತಿದ್ದಾಗಲೇ ಯುವಕನಿಗೆ ಹೃದಯಾಘಾತಭದ್ರಾವತಿ; ಕ್ರಿಕೆಟ್ ಆಡುತ್ತಿದ್ದಾಗಲೇ ಯುವಕನಿಗೆ ಹೃದಯಾಘಾತ

ವ್ಯಕ್ತಿಯನ್ನು ಪರಿಶೀಲಿಸಿದ ವೈದರು ಎಕ್ಸ್‌ರೇ ಮಾಡಿಸಲು ಸೂಚಿಸಿದ್ದಾರೆ. ಎಕ್ಸ್‌ರೇ ವರದಿಯಲ್ಲಿ ಬಾಲಕೃಷ್ಣನ ವಿಗ್ರಹ ಗಂಟಲಿನಲ್ಲಿ ಇರುವುದು ಪತ್ತೆಯಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

A Man Swallowed Krishna Idol With Holy Water In Belagavi Doctor Saves Him

ಎಂಡೋಸ್ಕೋಪ್ ಮಾಡಿರುವ ವೈದ್ಯರು ಬಾಲಕೃಷ್ಣನ ಮೂರ್ತಿಯ ಕಾಲು ವ್ಯಕ್ತಿಯ ಆಹಾರ ನಾಳದಲ್ಲಿ ಸಿಲುಕಿಕೊಂಡಿರುವುದನ್ನು ಪತ್ತೆ ಮಾಡಿದ್ದಾರೆ. ನಂತರ ಇಎನ್‌ಟಿ ವಿಭಾಗದ ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಿ ಗಂಟಲಿನಲ್ಲಿ ಸಿಲುಕಿದ್ದ ಕೃಷ್ಣನ ವಿಗ್ರಹವನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ.

ಸವಾಲಾಗಿದ್ದ ಶಸ್ತ್ರಚಿಕಿತ್ಸೆ

ಗಂಟಲಿನಲ್ಲಿ ಸಿಲುಕಿದ್ದ ಕೃಷ್ಣನ ಮೂರ್ತಿಯನ್ನು ಹೊರತೆಗೆಯುವುದು ವೈದ್ಯರಿಗೆ ಸುಲಭದ ಕೆಲಸವಾಗಿರಲಿಲ್ಲ. ಅದರಲ್ಲೂ ಮೂರ್ತಿಯ ಕಾಲು ಆಹಾರ ನಾಳದಲ್ಲಿ ಸಿಲುಕಿತ್ತು.

A Man Swallowed Krishna Idol With Holy Water In Belagavi Doctor Saves Him

ಕೆಎಲ್‌ಇ ಆಸ್ಪತ್ರೆಯ ಇಎನ್‌ಟಿ ವಿಭಾದ ವೈದ್ಯರಾದ ಡಾ.ಪ್ರೀತಿ ಹಜಾರೆ, ಡಾ.ವಿನಿತಾ ಮೆಡಗುಡ್ಡಮಠ, ಅರವಳಿಕೆ ವೈದ್ಯ ಡಾ. ಚೈತನ್ಯ ಕಾಮತ್ ಸಿಬ್ಬಂದಿ ಸಹಾಯದಿಂದ ರೋಗಿಯ ಗಂಟಲಿನಲ್ಲಿ ಸಿಲುಕಿದ್ದ ಕೃಷ್ಣನ ವಿಗ್ರಹವನ್ನು ಶಸ್ತ್ರಚಿಕಿತ್ಸೆ ನಡೆಸಿ ಯಶಸ್ವಿಯಾಗಿ ಹೊರ ತೆಗೆದಿದ್ದಾರೆ. ಸದ್ಯ ವ್ಯಕ್ತಿ ಆರೋಗ್ಯವಾಗಿದ್ದು ಚೇತರಿಸಿಕೊಳ್ಳುತ್ತಿದ್ದಾನೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

English summary
A 45-year-old man swallowed a metal idol of Lord Krishna along with holy water. The man was then taken to KLE hospital in Belgavi where the lodged idol was surgically removed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X