ಬೆಳಗಾವಿ: ನೀರಿನ ಸಂಪ್‌ಗೆ ಬಿದ್ದು 2 ವರ್ಷದ ಮಗು ಸಾವು
ಬೆಳಗಾವಿ, ಮೇ, 27: ಆಟವಾಡುತ್ತಿದ್ದ ವೇಳೆ ಸಂಪ್ (ನೀರಿನ ತೊಟ್ಟಿ)ಗೆ ಬಿದ್ದು 2 ವರ್ಷದ ಮಗು ಸಾವನ್ನಪ್ಪಿರುವ ಘಟನೆ ಬೆಳಗಾವಿಯ ಕಂಗ್ರಾಳ ಗಲ್ಲಿಯಲ್ಲಿ ನಡೆದಿದೆ.
ಸಾಯೀಶಾ ಸಂದೀಪ್ ಬಡವನಾಚೆ(2) ಸಾವನ್ನಪ್ಪಿದ ಮಗು. ಬೆಳಗಾವಿಯ ಕಂಗ್ರಾಳ ಗಲ್ಲಿಯ ಮನೆಯೊಂದರಲ್ಲಿ ನೀರು ತುಂಬಿಸುವುದಕ್ಕೆ ಮಾಡಿದ್ದ ಸಂಪ್‌ಗೆ ಬಿದ್ದು ಈ ಮಗು ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.

ಆಟವಾಡುತ್ತಿದ್ದ ವೇಳೆ ಕಣ್ಮರೆಯಾಗಿದ್ದ ಮಗುವಿಗಾಗಿ ಪೋಷಕರು ತುಂಬಾ ಪರದಾಡಿದ್ದಾರೆ. ಎಷ್ಟೇ ಹುಡುಕಿದರೂ ಕಾಣದಿದ್ದಾಗ ಸಂಪ್ ಒಪನ್ ಮಾಡಿದಾಗ ಮಗು ಸಾಯೀಶಾ ಅದರಲ್ಲಿ ಬಿದ್ದಿರುವುದು ಕಂಡುಬಂದಿದ್ದು, ಪೋಷಕರು ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ದದ್ದಾರೆ. ಆದರೆ ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಮಗು ಸಾವನ್ನಪ್ಪಿದ ಬಗ್ಗೆ ವೈದ್ಯೆ ಮಾಹಿತಿ ನೀಡಿದ್ದಾರೆ. ಇನ್ನಯ ಖಡೇ ಬಜಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ಶಸ್ತ್ರಚಿಕಿತ್ಸೆ ಯಶಸ್ವಿ: ಗರ್ಭಾಶಯ ಗಡ್ಡೆ ಮೂತ್ರಕೋಶದ ತನಕ ಬೆಳೆದು ಯಾತನೆ ಪಡುತ್ತಿದ್ದ ಮಹಿಳೆಯ ನೋವಿಗೆ ಗುಂಡ್ಲುಪೇಟೆ ತಾಲೂಕಿನ ಕಬ್ಬಹಳ್ಳಿ ಸಮುದಾಯ ಆರೋಗ್ಯ ಕೇಂದ್ರವು ಮುಕ್ತಿ ಕೊಟ್ಟಿದೆ.
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ 45 ವರ್ಷದ ಪುಟ್ಟಮ್ಮ ಎಂಬವರು ಯಶಸ್ವಿ ಶಸ್ತ್ರಚಿಕಿತ್ಸೆಗೊಳಗಾದ ಮಹಿಳೆ. ಸಾಮಾನ್ಯವಾಗಿ ಗರ್ಭಕೋಶದ ಹೊರಮೈ ಹಾಗೂ ಒಳಗಡೆ ಗೆಡ್ಡೆ ಬೆಳೆಯಲಿದೆ. ಆದರೆ, ಈ ಮಹಿಳೆಗೆ ಗರ್ಭಕೋಶ ಹಾಗೂ ಮೂತ್ರಕೋಶದ ನಡುವೆ ಗೆಡ್ಡೆ ಬೆಳೆದು ಎರಡು ಅಂಟುಕೊಂಡಿದ್ದವು.
ವೈದ್ಯಕೀಯ ಲೋಕದಲ್ಲಿ ಅಪರೂಪವಾದ ಈ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿದ ಕಬ್ಬಹಳ್ಳಿ ಸಮುದಾಯದ ಆರೋಗ್ಯ ಕೇಂದ್ರದ ವೈದ್ಯ ಡಾ.ವೆಂಕಟಸ್ವಾಮಿ 2.5 ತಾಸು ಶಸ್ತ್ರಚಿಕಿತ್ಸೆ ನಡೆಸಿ, 4.5 ಕೆಜಿ ತೂಕದ ಗೆಡ್ಡೆಯನ್ನು ಹೊರತೆಗೆದಿದ್ದಾರೆ.
ಅಪರೂಪವಾದ ಈ ಪ್ರಕರಣದಲ್ಲಿ ಗೆಡ್ಡೆ ತೆಗೆಯುವುದೇ ಕಷ್ಟವಾಗಿತ್ತು. ಸದ್ಯ, ಮಹಿಳೆ ಆರೋಗ್ಯವಾಗಿದ್ದಾರೆ. ಕಬ್ಬಹಳ್ಳಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಈ ರೀತಿ ಕಠಿಣ ಶಸ್ತ್ರಚಿಕಿತ್ಸೆ ಇದೇ ಮೊದಲು ಎಂದರು.












Click it and Unblock the Notifications