ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಪರೇಷನ್ ಕಮಲ : ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ!

|
Google Oneindia Kannada News

Recommended Video

ಆಪರೇಷನ್ ಕಮಲ : ಸತೀಶ್ ಜಾರಕಿಹೊಳಿ ಸ್ಪೋಟಕ ಹೇಳಿಕೆ! | Oneindia Kannada

ಬೆಳಗಾವಿ, ಡಿಸೆಂಬರ್ 03 : ರಾಜ್ಯ ರಾಜಕಾರಣದಲ್ಲಿ 'ಆಪರೇಷನ್ ಕಮಲ'ದ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಇದರ ನಡುವೆಯೇ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರು ಸ್ಫೋಟಕ ಹೇಳಿಕೆ ನೀಡಿದ್ದು, ಕುತೂಹಲಕ್ಕೆ ಕಾರಣವಾಗಿದೆ.

ಬೆಳಗಾವಿಯಲ್ಲಿ ಸೋಮವಾರ ಮಾತನಾಡಿದ ಯಮಕನಮರಡಿ ಶಾಸಕ ಸತೀಶ್ ಜಾರಕಿಹೊಳಿ ಅವರು, 'ಬಿಜೆಪಿ ಮೊದಲಿನಿಂದಲೂ ನಮ್ಮ ಶಾಸಕರನ್ನು ಸೆಳೆಯಲು ಪ್ರಯತ್ನ ನಡೆಸುತ್ತಿದೆ. 24 ಶಾಸಕರು ಅಲ್ಲ, 7 ರಿಂದ 8 ಶಾಸಕರು ಬಿಜೆಪಿಗೆ ಹೋಗಬಹುದು' ಎಂದರು.

ಡಿ.5ರಂದು ಸಂಪುಟ ವಿಸ್ತರಣೆ ದಿನಾಂಕ ಅಂತಿಮ : ಸಿದ್ದರಾಮಯ್ಯಡಿ.5ರಂದು ಸಂಪುಟ ವಿಸ್ತರಣೆ ದಿನಾಂಕ ಅಂತಿಮ : ಸಿದ್ದರಾಮಯ್ಯ

ಕರ್ನಾಟಕ ಬಿಜೆಪಿ ಆಪರೇಷನ್ ಕಮಲಕ್ಕೆ ಮತ್ತೆ ಕೈ ಹಾಕಿದೆ. ಸಚಿವ ಸ್ಥಾನ ಸಿಗದೇ ಅಸಮಾಧಾನಗೊಂಡಿರುವ ಶಾಸಕರನ್ನು ಪಕ್ಷಕ್ಕೆ ಸೆಳೆಯಲು ಮುಂದಾಗಿದೆ ಎಂಬ ಸುದ್ದಿ ಹಬ್ಬಿದೆ. ಇಂತಹ ಸಂದರ್ಭದಲ್ಲಿಯೇ ಸತೀಶ್ ಜಾರಕಿಹೊಳಿ ಅವರು ಸ್ಫೋಟಕ ಹೇಳಿಕೆ ಕೊಟ್ಟಿದ್ದಾರೆ.

ಸಂಪುಟ ವಿಸ್ತರಣೆಗೆ ಬೇಡಿಕೆ ಇಟ್ಟ ಎಂ.ಬಿ.ಪಾಟೀಲ್ಸಂಪುಟ ವಿಸ್ತರಣೆಗೆ ಬೇಡಿಕೆ ಇಟ್ಟ ಎಂ.ಬಿ.ಪಾಟೀಲ್

ಖಾನಾಪುರ ತಾಲೂಕಿನ ಕಣಕುಂಬಿ ಬಳಿ ಇರುವ ರೆಸಾರ್ಟ್‌ಗೆ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಭೇಟಿ ನೀಡಿದ್ದು ಕುತೂಹಲಕ್ಕೆ ಕಾರಣವಾಗಿದೆ. ಅತೃಪ್ತ ಶಾಸಕರನ್ನು ಅವರು ರೆಸಾರ್ಟ್‌ಗೆ ಕರೆದುಕೊಂಡು ಹೋಗಲಿದ್ದಾರೆಯೇ? ಎಂಬ ಅನುಮಾನ ಹುಟ್ಟುಹಾಕಿದೆ....

ಸದ್ಯಕ್ಕೆ ಸಚಿವ ಸಂಪುಟ ವಿಸ್ತರಣೆ ಆಗೋಲ್ಲ : 5 ಕಾರಣಗಳು!ಸದ್ಯಕ್ಕೆ ಸಚಿವ ಸಂಪುಟ ವಿಸ್ತರಣೆ ಆಗೋಲ್ಲ : 5 ಕಾರಣಗಳು!

ಅಸಮಾಧಾನ ಇರುವುದು ನಿಜ

ಅಸಮಾಧಾನ ಇರುವುದು ನಿಜ

'ಕಾಂಗ್ರೆಸ್‌ನಲ್ಲಿ 7 ರಿಂದ 8 ಶಾಸಕರು ಅಸಮಾಧಾನಗೊಂಡಿರುವುದು ನಿಜ. ಆದರೆ, ಅವರು ಯಾರೂ ಪಕ್ಷ ಬಿಟ್ಟು ಹೋಗುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಒಂದು ವೇಳೆ ಇಷ್ಟು ಶಾಸಕರು ಹೋದರೋ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ' ಎಂದು ಸತೀಶ್ ಜಾರಕಿಹೊಳಿ ಹೇಳಿದರು.

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಎಚ್ಡಿಕೆ! ಏನಿದರ ಮರ್ಮ? ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಎಚ್ಡಿಕೆ! ಏನಿದರ ಮರ್ಮ?

6 ತಿಂಗಳಿನಿಂದ ಆಮಿಷ

6 ತಿಂಗಳಿನಿಂದ ಆಮಿಷ

'ಬಿಜೆಪಿಯವರು ಕಳೆದ 6 ತಿಂಗಳಿನಿಂದ ಆಮಿಷವನ್ನು ವೊಡ್ಡುತ್ತಿದ್ದಾರೆ. ಅದಕ್ಕೆ ಹೆಚ್ಚಿನ ಮಹತ್ವವನ್ನು ಕೊಡುವುದು ಬೇಡ. ನಾನಂತೂ ಎಲ್ಲಿಯೂ ಹೋಗುವುದಿಲ್ಲ. ಆದ್ದರಿಂದ, ಇವುಗಳಿಗೆ ಹೆಚ್ಚಿನ ಮಹತ್ವ ನೀಡುವುದಿಲ್ಲ' ಎಂದು ಹೇಳಿದರು.

ಮೊದಲಿನಿಂದಲೂ ಪ್ರಯತ್ನ

ಮೊದಲಿನಿಂದಲೂ ಪ್ರಯತ್ನ

'ಶಾಸಕರನ್ನು ಸಳೆಯಲು ಬಿಜೆಪಿ ಮೊದಲಿನಿಂದಲೂ ಪ್ರಯತ್ನವನ್ನು ನಡೆಸುತ್ತಿದೆ. 24 ಶಾಸಕರು ಬಿಜೆಪಿಗೆ ಹೋಗುವುದಿಲ್ಲ. 7 ರಿಂದ 8 ಶಾಸಕರು ಹೋಗಬಹುದು' ಎಂದು ಸತೀಶ್ ಜಾರಕಿಹೊಳಿ ಹೇಳಿದರು.

ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ

ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ

'ಬೆಳಗಾವಿ ಅಧಿವೇಶನಕ್ಕೂ ಮೊದಲು ಸಂಪುಟ ವಿಸ್ತರಣೆ ಆಗಬಹುದು. ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಒಂದೇ ಮನೆಯಲ್ಲಿ ಇಬ್ಬರಿಗೆ ಸಚಿವ ಸ್ಥಾನ ಕೊಡುವುದು ಇಲ್ಲ. ಶಾಸಕನಾಗಿದ್ದುಕೊಂಡು ಸಚಿವರಿಗಿಂತಲೂ ಹೆಚ್ಚು ಕೆಲಸವನ್ನು ಮಾಡಿಸಿಕೊಳ್ಳುತ್ತೇನೆ' ಎಂದು ಹೇಳಿದರು.

English summary
Former minister Satish Jarkiholi said that 7 to 8 Congress MLAs may join BJP. Satish Jarkiholi statement raised the question that Karnataka BJP started the Operation Kamala.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X