ಬೆಳಗಾವಿ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ ರೂ.4 ಕೋಟಿ ವಶ
ಬೆಳಗಾವಿ, ಏಪ್ರಿಲ್ 13: ಚಿಕ್ಕೋಡಿ ಸಮೀಪ ಬೈರಾಫುರ ಚೆಕ್‌ಪೋಸ್ಟ್‌ನಲ್ಲಿ ಕಾರೊಂದರಲ್ಲಿ ಸಾಗಿಸಲಾಗುತ್ತಿದ್ದ ರೂ.4 ಕೋಟಿ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಹಣವನ್ನು ಸಮರ್ಪಕ ದಾಖಲೆಗಳಿಲ್ಲದೆ ಕಾರಿನಲ್ಲಿ ಸಾಗಿಲಾಗುತ್ತಿತ್ತು ಹಾಗಾಗಿ ಚುನಾವಣಾಧಿಕಾರಿಗಳು ಮತ್ತು ಪೊಲೀಸರು ಹಣ ಜಪ್ತು ಮಾಡಿದ್ದಾರೆ.
Recommended Video

ಗೋಕಾಕನಲ್ಲಿ 28,29ರಂದು ಜಿಲ್ಲಾ ಸಾಹಿತ್ಯ ಸಮ್ಮೇಳನ
ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಹಂಚಲು ಹಣ ಸಾಗಿಸಲಾಗುತ್ತಿತ್ತು ಎಂದು ಶಂಕಿಸಲಾಗಿದೆ. ಆದರೆ ಕಾರಿನಲ್ಲಿದ್ದವರು ವಿಚಾರಣೆ ವೇಳೆ ಬೇರೆಯದೇ ಕಾರಣ ನೀಡಿದ್ದಾರೆ.

ಹಣವು ಮಹಾರಾಷ್ಟ್ರದ ಕೊಲ್ಲಾಪುರದ ಡಿಸಿಸಿ ಬ್ಯಾಂಕ್‌ಗೆ ಸೇರಿದ್ದು ಎಂದು ಕಾರಿನಲ್ಲಿದ್ದವರು ಹೇಳಿದ್ದಾರೆ. ಹಣವನ್ನು ಮಹಾರಾಷ್ಟ್ರದ ಹಡಹಿಂಗ್ಲಂಜ್‌ನ ಡಿಸಿಸಿ ಬ್ಯಾಂಕ್ ಎಪಿಎಂಸಿ ಬ್ರಾಂಚ್‌ಗೆ ಸಾಗಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
ಹಣಕ್ಕೆ ಸೂಕ್ತ ದಾಖಲೆಗಳನ್ನು ನೀಡಿದ ಬಳಿಕ ಹಣವನ್ನು ವಾಪಾಸ್ ಮಾಡುವುದಾಗಿ ಚುನಾವಣಾಧಿಕಾರಿಗಳು ಹೇಳಿದ್ದಾರೆ.












Click it and Unblock the Notifications