ಬೆಳಗಾವಿ: ಅಕ್ರಮ ಮರಳು ಗಣಿಗಾರಿಕೆ, ಲಾರಿ ಜಪ್ತಿ

ಬೆಳಗಾವಿ, ಆಗಸ್ಟ್ 21: ಇಲ್ಲಿನ ಮುದ್ದೇಬಿಹಾಳ ತಾಲೂಕಿನ ಕಪನೂರ ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 13 ಲೋಡ್ ಮರಳನ್ನು ತಹಸೀಲ್ದಾರ್ ನೇತೃತ್ವದಲ್ಲಿ ದಾಳಿ ನಡೆಸಿ ಜಪ್ತಿ ಮಾಡಲಾಗಿದೆ.

ಸರ್ವೆ ನಂ. 57ರ ಸರಕಾರ ಜಾಗದಲ್ಲಿ ಈ ಮರಳನ್ನು ರಾಶಿ ಹಾಕಲಾಗಿತ್ತು. ಇಲ್ಲಿಂದ ಈ ಮರಳನ್ನು ಅಕ್ರಮವಾಗಿ ಸಾಗಣೆ ಮಾಡಲಾಗುತ್ತಿದೆ ಎಂಬ ಆರೋಪದ ಮೇಲೆ ಸ್ಥಳಕ್ಕೆ ತಹಶೀಲ್ದಾರ್ ಎಂ.ಎಸ್ ಬಾಗವಾನ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿ ಮರಳು ವಶಕ್ಕೆ ಪಡೆದುಕೊಂಡಿದೆ.

13 loads of illegal Sand seized in Belagavi

ವಶಪಡಿಸಿಕೊಂಡ ಮರಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಹಸ್ತಾಂತರಿಸಲಾಗುವುದು. ಇದನ್ನು ಸರಕಾರಿ ಕಾಮಗಾರಿಗಳಿಗೆ ಬಳಸುವಂತೆ ತಿಳಿಸಲಾಗುತ್ತದೆ. ಇಲ್ಲಿ ಮರಳು ಸಾಗಾಟ ಮಾಡಿದವರು ಯಾರು ಎಂಬ ಬಗ್ಗೆ ಮಾಹಿತಿ ಇಲ್ಲ. ಹೀಗಾಗಿ ಅನಾಮಧೇಯ ವ್ಯಕ್ತಿಗಳ ಹೆಸರಿನಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವುದಾಗಿ ತಹಶೀಲ್ದಾರ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+