ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಯಾ ತೀರ್ಪಿಗೆ ಟ್ವೀಟೋತ್ತರ : ಈ ದೇಶವನ್ನು ಆ ದೇವರೇ ಕಾಪಾಡಬೇಕು!

By Prasad
|
Google Oneindia Kannada News

ಬೆಂಗಳೂರು, ಮೇ. 11 : "ಈ ದೇಶವನ್ನು ಆ ದೇವರೇ ಕಾಪಾಡಬೇಕು!"

ಇದು, ಅಕ್ರಮ ಆಸ್ತಿ ಪ್ರಕರಣದಲ್ಲಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ನಿರ್ದೇಷಿ ಎಂದು ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ ತೀರ್ಪು ನೀಡುತ್ತಿದ್ದಂತೆ, ಭಾರತೀಯ ನಾಗರಿಕರೊಬ್ಬರಿಂದ ಬಂದಂತಹ ಒಂದು ಪ್ರತಿಕ್ರಿಯೆ.

ಜಯಯಲಿತಾ ಅವರು ತಮ್ಮ ಅಧಿಕಾರಾವಧಿಯಲ್ಲಿ 66.65 ಕೋಟಿ ರು. ಅಕ್ರಮ ಆಸ್ತಿ ಗಳಿಸಿದ್ದಾರೆ ಎಂದು ಡಾ. ಸುಬ್ರಮಣಿಯಂ ಸ್ವಾಮಿ ಅವರು 18 ವರ್ಷಗಳ ಹಿಂದೆ ಹೂಡಿದ್ದ ಕೇಸಿನ ತೀರ್ಪು ಸೋಮವಾರ ಪ್ರಕಟವಾಗಿದ್ದು, ಜಯಲಲಿತಾ, ಶಶಿಕಲಾ, ಇಳವರಸಿ ಮತ್ತು ದಿನಕರನ್ ಅವರು ಯಾವುದೇ 'ಅಕ್ರಮ' ಆಸ್ತಿ ಗಳಿಸಿಲ್ಲ ಎಂಬುದು ಸಾಬೀತಾಗಿದೆ.

ಈ ತೀರ್ಪು ಹೊರಬೀಳುತ್ತಿದ್ದಂತೆ ದಿಗ್ಭ್ರಮೆಗೊಳಗಾಗಿರುವ ನೆಟ್ಟಿಗರು ಟ್ವಿಟ್ಟರಲ್ಲಿ ತರಹೇವಾರಿ ಅಭಿಪ್ರಾಯಗಳನ್ನು ಮಂಡಿಸುತ್ತಿದ್ದು, ತೀರ್ಪನ್ನು ಸ್ವೀಕರಿಸುವ ಸ್ಥಿತಿಯಲ್ಲಿ ಬಹುಪಾಲು ಜನರು ಇಲ್ಲ ಎಂಬುದು ವ್ಯಕ್ತವಾಗುತ್ತಿದೆ. ಏನೇ ಆಗಲಿ, ನ್ಯಾಯಾಲಯದ ತೀರ್ಪಿಗೆ ತಲೆಬಾಗಲೇಬೇಕು. ಹೇಗಿದ್ದರೂ ಈ ತೀರ್ಪನ್ನು ಪ್ರಶ್ನಿಸಲು ಅವಕಾಶವಿದ್ದೇ ಇದೆಯಲ್ಲ! ನ್ಯಾಯಾಲಯದ ಮೇಲೆ ನಂಬಿಕೆ ಇಡುತ್ತ, ಟ್ವಿಟ್ಟಿಗರ ಟ್ವೀಟುಗಳನ್ನು ನೋಡೋಣ... ['ಅಕ್ರಮ ಆಸ್ತಿ ಪ್ರಕರಣ: ಜಯಲಲಿತಾ ನಿರ್ದೋಷಿ']

ಟ್ವೀಟುಗಳನ್ನೋದುವ ಮುನ್ನ

ಟ್ವೀಟುಗಳನ್ನೋದುವ ಮುನ್ನ

ಟ್ವೀಟುಗಳನ್ನೋದುವ ಮುನ್ನ ಈ ಚಿತ್ರದೆಡೆಗೆ ಒಮ್ಮೆ ಕಣ್ಣು ಹಾಯಿಸಿ. ಜಯಲಲಿತಾರನ್ನು ತಮಿಳುನಾಡಿಗರು ಯಾವ ಸ್ಥಾನದಲ್ಲಿಟ್ಟಿದ್ದಾರೆ ಎಂಬುದು ಮನವರಿಕೆಯಾಗುತ್ತದೆ. ಅದಕ್ಕೇ ಟ್ವಿಟ್ಟಿಗರೊಬ್ಬರು ಉದ್ಗರಿಸಿದ್ದು, "ಆ ದೇವರೇ ನಮ್ಮ ದೇಶವನ್ನು ಕಾಪಾಡಬೇಕು!"

ಜಯಾ ತೀರ್ಪಿಗೆ ಕಿರಣ್ ಕುಮಾರ್ ಎಸ್ ವಕ್ರಟ್ವೀಟೋಕ್ತಿ

ಜಯಾ ತೀರ್ಪು ಕ್ರಿಕೆಟಿನಲ್ಲಾಗಿದ್ದರೆ ಹೇಗಿರುತ್ತಿತ್ತು.
ಹೌಜಾಟ್?
ಅಂಪೈರ್ : ಎಲ್ಬಿಡಬ್ಲ್ಯೂ, ಔಟ್.
ಮೂರನೇ ಅಂಪೈರ್‌ಗೆ ಮೇಲ್ಮನವಿ.
ಮೂರನೇ ಅಂಪೈರ್ : ವಿಕೆಟ್ ಮುಂದೆ ಜಯಾ ಕಾಲು ಇರಲಿಲ್ಲ, ಕಾಲಿನ ನಂತರ ವಿಕೆಟ್ ಇತ್ತ. ಸೋ, ನಾಟೌಟ್!

ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ಅವರ ಚಾಟಿ

ಉನ್ನತ ಕೋರ್ಟಿಗಳಲ್ಲಿ ವಿಚಾರಣಾ ಕೋರ್ಟ್ ನ್ಯಾಯಾಧೀಶರಿಗೆ ತಾವೇ ನೀಡಿದ ತೀರ್ಪನ್ನು ಡಿಫೆಂಡ್ ಮಾಡಿಕೊಳ್ಳಲು ಅವಕಾಶವಿರುತ್ತಿದ್ದರೆ... ಸುಮ್ನೆ ಕೇಳ್ತಿದ್ದೀನಿ.

ಶಕುಂತಲಾ ಅಯ್ಯರ ಅವರ ನೇರ ಪ್ರಶ್ನೆ

ಈ ತೀರ್ಪು ಪೋಸ್ಟ್ ಪೇಯ್ಡಾ, ಪ್ರಿಪೇಯ್ಡಾ? ಶಕುಂತಲಾ ಅಯ್ಯರ ಅವರ ನೇರ ಪ್ರಶ್ನೆಗೆ ನೇರ ಉತ್ತರ ನೀಡುವವರು ಯಾರು?

ಟಿನು ಚೆರಿಯನ್ ಮಾತಲ್ಲಿ ಹುರುಳಿದೆ

ಸಲ್ಮಾನ್ ಖಾನ್ ಮತ್ತು ಜಯಲಲಿತಾ ತೀರ್ಪುನ್ನು ನೋಡುತ್ತಿದ್ದರೆ, ದಾವೂದ್ ಇಬ್ರಾಹಿಂ ಭಾರತಕ್ಕೆ ಮರಳಲು ನಿರ್ಧರಿಸಿರಬಹುದು. ಚಿಂತೆಗೆ ಕಾರಣವಾದರೂ ಏನಿದೆ?

ಯಾವುದು ಸರಿ, ಯಾವುದು ತಪ್ಪು, ಮಧುರ್ ತೀರ್ಪು

ಕುಡಿದು ವಾಹನ ಚಲಾಯಿಸುವುದು ಸರಿ, ಫುಟ್ ಪಾತ್ ಮೇಲೆ ಮಲಗುವುದು ಅಪರಾಧ, ರಾಜಕೀಯದಲ್ಲಿ ಭ್ರಷ್ಟಾಚಾರ ನಡೆಸುವುದು ಜನ್ಮಸಿದ್ಧ ಹಕ್ಕು ಮತ್ತು ಶ್ರದ್ಧೆಯಿಂದ ಕೆಲಸ ಮಾಡುವುದು ಮಹಾಪರಾಧ.

ಸಂಜಯ್ ಒಬ್ಬನೇ ಜೈಲಲ್ಲಿ ಇರಬೇಕು?

ಭಾರತದ ನ್ಯಾಯಾಂಗ ಮೇಲೆ ನನಗೆ ಸಂಪೂರ್ಣ ನಂಬಿಕೆ ಬಂದಿದೆ. ಇನ್ನು ಸಂಜಯ್ ದತ್ ನನ್ನು ಜೈಲಿನಿಂದ ಬಿಡುಗಡೆ ಮಾಡಲು ಪ್ರಚಾರ ಆರಂಭಿಸಬೇಕು. ಆತನೊಬ್ಬನೇ ಏಕೆ ಜೈಲಿನಲ್ಲಿ ಇರಬೇಕು?

ಜಯಾಗೆ ಅತ್ಯಂತ ಪ್ರಾಮಾಣಿಕ ಸಿಎಂ ಪ್ರಶಸ್ತಿ

ಸಲ್ಮಾನ್ ಖಾನ್‌ಗೆ ಅತ್ಯಂತ ಸುರಕ್ಷಿತ ವಾಹನ ಚಾಲಕ ಪ್ರಶಸ್ತಿ, ಜಯಲಲಿತಾಗೆ ಅತ್ಯಂತ ಪ್ರಾಮಾಣಿಕ ಸಿಎಂ ಪ್ರಶಸ್ತಿ ನೀಡಬೇಕು.

233 ಜನರ ಪ್ರಾಣ ಉಳಿಸಿದ್ದಕ್ಕೆ ಹೈಕೋಗೆ ಧನ್ಯವಾದ

ಜಯಲಲಿತಾ ಕೇಸಲ್ಲಿ ಕೆಟ್ಟದ್ದಕ್ಕಿಂತ ಒಳ್ಳೆಯದೇ ಆಗಿದೆ. ಅದು 233 ಜನರ ಪ್ರಾಣ ಉಳಿಸಿದೆ! ಜನರ ಪ್ರಾಣ ಉಳಿಸಿದ್ದಕ್ಕೆ ಕರ್ನಾಟಕ ಹೈಕೋರ್ಟಿಗೆ ಧನ್ಯವಾದಗಳು!

English summary
Tweeples react to verdict given by Karnataka high court on Monday, May 11 in an appeal related to disproportionate assets case filed against Tamil Nadu former CM Jayalalithaa by Dr Subramanian swamy. Some are funny, some are harsh, some reflect the harsh reality.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X