ಬೆಂಗಳೂರಿನಲ್ಲಿ ಆಂಧ್ರ ಮೂಲದ ಉದ್ಯಮಿ ಕೊಲೆ

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 31: ಆಂಧ್ರಪ್ರದೇಶ ಮೂಲದ ಉದ್ಯಮಿಯೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಸಂಜಯ್ ನಗರದ ಅಪಾರ್ಟ್ಮೆಂಟ್ ಬಳಿ ಉದ್ಯಮಿ ಪರಚೂರಿ ಸುರೇಂದ್ರ ಎಂಬುವವರನ್ನು ದುಷ್ಕರ್ಮಿಗಳು ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ.

ಪರಚೂರಿ ಸುರೇಂದ್ರ ಅವರ ಮನೆ ಎದುರೇ ಸುಮಾರು ಆರು ಸುತ್ತು ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಶನಿವಾರ ರಾತ್ರಿ ಪಟಾಕಿ ಸದ್ದಿನ ನಡುವೆ ಪಲ್ಸರ್ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಈ ಕೃತ್ಯ ಎಸಗಿ ಪರಾರಿಯಾಗಿದ್ದಾರೆ. ರಿಯಲ್ ಎಸ್ಟೇಟ್ ವ್ಯವಹಾರ, ಹಣಕಾಸು ಲೇವಾದೇವಿಯೇ ಈ ಕೊಲೆ ಕಾರಣ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಸಂಜಯನಗರ ಪೋಲೀಸರು ತನಿಖೆ ಕೈಗೊಂಡಿದ್ದಾರೆ.

Realtor from Andrapradesh killed in Sanjay Nagar Bengaluru

ದೀಪಾವಳಿ ಪ್ರಯುಕ್ತ ತೋಟದ ಮನೆಗೆ ತೆರಳಿದ್ದ ಪರಚೂರಿ ಸುರೇಂದ್ರ ಅವರ ಕುಟುಂಬ ಶನಿವಾರ ರಾತ್ರಿ ತಮ್ಮ ಸಂಜಯ್ ನಗರದ ನಿವಾಸಕ್ಕೆ ಹಿಂತಿರುಗಿದ್ದರು. ಈ ಸಮಯದಲ್ಲಿ ಪಲ್ಸರ್ ಬೈಕ್ ನಲ್ಲಿ ಹಿಂಬಾಲಿಸಿ ಬಂದ ದುಷ್ಕರ್ಮಿಗಳು, ಸುರೇಂದ್ರ ಅವರ ಮೇಲೆ ಮನೆಯ ಗೇಟ್ ನ ಬಳಿಯೇ ಆರು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದಾರೆ.

ತಕ್ಷಣವೇ ಸುರೇಂದ್ರ ಅವರಮ್ಮಿ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ತಲೆಗೆ ಒಂದು, ಕತ್ತಿನ ಭಾಗದಲ್ಲಿ 2 ಮತ್ತು ಎದೆಯ ಭಾಗದಲ್ಲಿ ಮೂರು ಗುಂಡುಗಳು ತಗುಲಿರುವುದು ಕಂಡು ಬಂದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The Bengaluru police have launched an investigation after a businessman was shot dead in the city late on Sunday night. Surinder Kumar a resident of Sanjaynagar was shot dead by three unidentified assailants at 10 PM on Sunday.
Please Wait while comments are loading...