ಕಸ ವಿಂಗಡನೆ ಮಾಡುವಂತೆ ಪ್ರಚಾರ ಮಾಡ್ತಾರೆ ಪುನೀತ್

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 06 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಸ ವಿಂಗಡನೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಪ್ರಚಾರ ಆಂದೋಲನ ಕೈಗೊಳ್ಳಲಿದೆ. ನಟ ಪುನೀತ್ ರಾಜ್‌ಕುಮಾರ್ ಅವರು ಈ ಆಂದೋಲನದ ರಾಯಭಾರಿಯಾಗಿದ್ದಾರೆ.

ಬಿಬಿಎಂಪಿ ಮೇಯರ್ ಮಂಜುನಾಥ ರೆಡ್ಡಿ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. 'ಮೂಲದಲ್ಲಿಯೇ ಕಸವನ್ನು ವಿಂಗಡೆನೆ ಮಾಡುವ ಕುರಿತು ಜನರಲ್ಲಿ ಅರಿವು ಮೂಡಿಸಲು ಪಾಲಿಕೆ ಪ್ರಚಾರ ಆಂದೋಲನ ನಡೆಸಲಿದೆ. ಪುನೀತ್ ರಾಜ್‌ಕುಮಾರ್ ಅವರು ಇದರ ರಾಯಭಾರಿಯಾಗಿದ್ದು, ಹಲವು ನಟ-ನಟಿಯರು ಈ ಆಂದೋಲನದಲ್ಲಿ ಪಾಲ್ಗೊಳ್ಳಲಿದ್ದಾರೆ' ಎಂದು ಮಂಜುನಾಥ ರೆಡ್ಡಿ ಹೇಳಿದರು. [ಬೆಂಗಳೂರು : ತ್ಯಾಜ್ಯ ವಿಂಗಡನೆ ಕಡ್ಡಾಯ, ತಪ್ಪಿದರೆ ದಂಡ]

puneet rajkumar

ಪಾಲಿಕೆಯ ಆರೋಗ್ಯ ವಿಭಾಗದ ಡಾ.ಯತೀಶ್ ಕುಮಾರ್ ಅವರು ಈ ಆಂದೋಲನದಲ್ಲಿ ಪಾಲ್ಗೊಳ್ಳುವಂತೆ ಪುನೀತ್ ರಾಜ್‌ಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದರು. ಇದಕ್ಕೆ ಅವರು ಒಪ್ಪಿಗೆ ಸೂಚಿಸಿದ್ದು, ಕಸ ವಿಂಗಡೆನೆ ಕುರಿತ ಜಾಹೀರಾತು ಮತ್ತು ಅಭಿಯಾನದಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದಾರೆ. [ಬೆಂಗಳೂರಿಗರೇ ದಾರಿಯಲ್ಲಿ ಕಸ ಕಂಡ್ರೆ ಸೆಲ್ಫಿ ತಗೊಳ್ಳಿ!]

ಪುನೀತ್ ರಾಜ್‌ಕುಮಾರ್ ಅವರು ಈ ಆಂದೋಲನದ ರಾಯಭಾರಿಯಾಗಿದ್ದು, ಹಿರಿಯ ನಟಿ ಮತ್ತು ವಿಧಾನಪರಿಷತ್ ಸದಸ್ಯೆ ಜಯಮಾಲಾ, ತಾರಾ ಮುಂತಾದ ಸಿನಿಮಾ ಮತ್ತು ಕಿರುತೆರೆ ನಟ-ನಟಿಯರು ಆಂದೋಲನದಲ್ಲಿ ಪಾಲ್ಗೊಳ್ಳಲಿದ್ದಾರೆ. [ಕಸ, ಗುಂಡಿ, ಟ್ರಾಫಿಕ್ ಮುಕ್ತ ಮುಕ್ತ ಮುಕ್ತ ನಗರಕ್ಕೆ ರೆಡ್ಡಿ ಸೂತ್ರ]

ಕರ್ನಾಟಕ ಹೈಕೋರ್ಟ್ ಆದೇಶದಂತೆ ಬೆಂಗಳೂರು ನಗರದಲ್ಲಿ 2016ರ ಜನವರಿ 1ರಿಂದಲೇ ಕಸ ವಿಂಗಡಣೆಯನ್ನು ಬಿಬಿಎಂಪಿ ಕಡ್ಡಾಯಗೊಳಿಸಿದೆ. ಮೂಲದಲ್ಲಿಯೇ ಹಸಿ ಮತ್ತು ಒಣ ಕಸವನ್ನು ವಿಂಗಡಣೆ ಮಾಡಿ ಪೌರ ಕಾರ್ಮಿಕರಿಗೆ ನೀಡಬೇಕು ಎಂದು ಹೇಳಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Popular Kannada actor Puneet Rajkumar brand ambassador for the waste segregating awareness campaign of Bruhat Bengaluru Mahanagara Palike (BBMP). Karnataka High Court directed to using two bins and one bag system for Bengaluru garbage issue, it would be mandatory for all categories of waste generators to segregate waste.
Please Wait while comments are loading...