ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೀಣ್ಯ ಇಂಡಸ್ಟ್ರಿ-ನಾಗಸಂದ್ರ ಮೆಟ್ರೋ ಪ್ರಯಾಣದರ ಪಟ್ಟಿ

|
Google Oneindia Kannada News

ಬೆಂಗಳೂರು, ಏ. 29 : ಪೀಣ್ಯ ಇಂಡಸ್ಟ್ರಿ ಮತ್ತು ನಾಗಸಂದ್ರ ನಡುವಿನ ನಮ್ಮ ಮೆಟ್ರೋ ರೈಲು ಸಂಚಾರಕ್ಕೆ ಮೇ 1 ರಂದು ಚಾಲನೆ ದೊರೆಯಲಿದೆ. ಪ್ರತಿ ಹತ್ತು ನಿಮಿಷಕ್ಕೊಂದು ರೈಲು ಈ ಮಾರ್ಗದಲ್ಲಿ ಬೆಳಗ್ಗೆ 6 ರಿಂದ ರಾತ್ರಿ 10ರವರೆಗೆ ಸಂಚಾರ ನಡೆಸಲಿದೆ.

ಮೇ 1ರ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಅವರು ಬೆಳಗ್ಗೆ 9.45ಕ್ಕೆ ನಾಗಸಂದ್ರ ನಿಲ್ದಾಣದಲ್ಲಿ ನಮ್ಮ ಮೆಟ್ರೋ ರೈಲಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ. ಸಂಜೆ ರೀಚ್ 3ಬಿ ಮಾರ್ಗವು ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಲಿದೆ. [ಪೀಣ್ಯ ಇಂಡಸ್ಟ್ರಿ-ನಾಗಸಂದ್ರ ಮೆಟ್ರೋ ಸಂಚಾರ ಮೇ 1ರಿಂದ]

ಮಲ್ಲೇಶ್ವರಂ ಸಂಪಿಗೆ ರಸ್ತೆಯ ನಿಲ್ದಾಣದಿಂದ ಹೊರಡುವ ಎಲ್ಲಾ ಮೆಟ್ರೋ ರೈಲುಗಳು ನಾಗಸಂದ್ರವರೆಗೆ ಸಂಚರಿಸಲಿವೆ. ಬೆಳಗ್ಗೆ 6 ಗಂಟೆಯಿಂದ ರಾತ್ರಿ 10ರವರೆಗೆ ಪ್ರತಿ ಹತ್ತು ನಿಮಿಷಕ್ಕೊಂದು ರೈಲು ಈ ಮಾರ್ಗದಲ್ಲಿ ಸಂಚಾರ ನಡೆಸಲಿದೆ. ಈ ಮಾರ್ಗದಲ್ಲಿ ಗರಿಷ್ಠ 23 ರೂ., ಕನಿಷ್ಠ 10 ರೂ. ಪ್ರಯಾಣದರವಿದೆ.

ಸಂಪಿಗೆ ರಸ್ತೆ-ಪೀಣ್ಯನಡುವಿನ ಮೆಟ್ರೋ ರೈಲು ಸೇವೆಗೆ 2014ರ ಫೆ.28ರಂದು ಚಾಲನೆ ಸಿಕ್ಕಿತ್ತು. ಇದೇ ಮಾರ್ಗದಲ್ಲಿ ಪೀಣ್ಯ ಇಂಡಸ್ಟ್ರಿಯಿಂದ ನಾಗಸಂದ್ರದವರೆಗಿನ ಸೇವೆಗೆ ಈಗ ಚಾಲನೆ ದೊರೆಯುತ್ತಿದೆ. ಪೂರ್ಣ ವಿವರ ಚಿತ್ರಗಳಲ್ಲಿ ನೋಡಿ

ಸಾರ್ವಜನಿಕ ಸೇವೆಗೆ ಮುಕ್ತವಾಗಲಿದೆ ರೀಚ್‌ 3ಬಿ

ಸಾರ್ವಜನಿಕ ಸೇವೆಗೆ ಮುಕ್ತವಾಗಲಿದೆ ರೀಚ್‌ 3ಬಿ

ಪೀಣ್ಯ ಇಂಡಸ್ಟ್ರಿ ಮತ್ತು ನಾಗಸಂದ್ರದ ನಡುವಿನ ನಮ್ಮ ಮೆಟ್ರೋ ರೀಚ್‌ 3ಬಿ ಹಸಿರು ಮಾರ್ಗ ಸಾರ್ವಜನಿಕ ಸೇವೆಗೆ ಮುಕ್ತವಾಗಲು ಸಿದ್ಧವಾಗಿದೆ. ಬೆಳಗ್ಗೆ 6 ರಿಂದ ರಾತ್ರಿ 10ರವರೆಗೆ ಈ ಮಾರ್ಗದಲ್ಲಿ ಮೆಟ್ರೋ ರೈಲು ಸಂಚರಿಸಲಿದೆ.

ಮೇ 1ರಂದು ಹಸಿರು ಮಾರ್ಗದ ರೈಲಿಗೆ ಚಾಲನೆ

ಮೇ 1ರಂದು ಹಸಿರು ಮಾರ್ಗದ ರೈಲಿಗೆ ಚಾಲನೆ

ಮೇ 1ರ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಅವರು ಬೆಳಗ್ಗೆ 9.45ಕ್ಕೆ ನಾಗಸಂದ್ರದ ನಿಲ್ದಾಣದಲ್ಲಿ ನಮ್ಮ ಮೆಟ್ರೋ ರೈಲಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ. ಸಂಜೆ ಸಾರ್ವಜನಿಕ ಸಂಚಾರ ಆರಂಭವಾಗಲಿದೆ.

10 ನಿಮಿಷಕ್ಕೊಂದು ರೈಲು

10 ನಿಮಿಷಕ್ಕೊಂದು ರೈಲು

3.7 ಕಿ.ಮೀ ಉದ್ದದ ರೀಚ್ 3ಬಿ ಹಸಿರು ಮಾರ್ಗದಲ್ಲಿ ಬೆಳಗ್ಗೆ 6 ರಿಂದ ರಾತ್ರಿ 10ರವರೆಗೆ ಮೆಟ್ರೋ ರೈಲು ಸಂಚರಿಸಲಿದೆ. ಮಲ್ಲೇಶ್ವರಂ ಸಂಪಿಗೆ ರಸ್ತೆಯ ನಿಲ್ದಾಣದಿಂದ ಹೊರಡುವ ಎಲ್ಲಾ ರೈಲುಗಳು ನಾಗಸಂದ್ರವರೆಗೆ ಸಂಚರಿಸಲಿವೆ.

ಈ ಮಾರ್ಗದಲ್ಲಿ 3 ನಿಲ್ದಾಣಗಳಿವೆ

ಈ ಮಾರ್ಗದಲ್ಲಿ 3 ನಿಲ್ದಾಣಗಳಿವೆ

ಪೀಣ್ಯ-ನಾಗಸಂದ್ರ ನಡುವಿನ ಮಾರ್ಗದಲ್ಲಿ ಜಾಲಹಳ್ಳಿ, ಟಿ.ದಾಸರಹಳ್ಳಿ ಮತ್ತು ನಾಗಸಂದ್ರ ನಿಲ್ದಾಣಗಳಿವೆ. ಸಂಪಿಗೆ ರಸ್ತೆಯಿಂದ ಹೊರಡುವ ರೈಲು ಕುವೆಂಪು ರಸ್ತೆ, ಶ್ರೀರಾಂಪುರ, ರಾಜಾಜಿನಗರ, ಮಹಾಲಕ್ಷ್ಮಿ ಲೇಔಟ್, ಸ್ಯಾಂಡಲ್ ಸೋಪ್ ಕಾರ್ಖನೆ, ಯಶವಂತಪುರ, ಪೀಣ್ಯ, ಪೀಣ್ಯ ಇಂಡಸ್ಟ್ರೀ, ಜಾಲಹಳ್ಳಿ, ಟಿ.ದಾಸರಹಳ್ಳಿ ಮೂಲಕ ನಾಗಸಂದ್ರ ತಲುಪಲಿದೆ.

ಪ್ರಯಾಣದರ ಹೀಗಿದೆ

ಪ್ರಯಾಣದರ ಹೀಗಿದೆ

ನಾಗಸಂದ್ರ- ದಾಸರಹಳ್ಳಿ 10 ರೂ.
ನಾಗಸಂದ್ರ- ಜಾಲಹಳ್ಳಿ 13 ರೂ.
ನಾಗಸಂದ್ರ- ಪೀಣ್ಯ ಇಂಡಸ್ಟ್ರಿ 14 ರೂ.
ಸಂಪಿಗೆ ರಸ್ತೆ- ಪೀಣ್ಯ ಇಂಡಸ್ಟ್ರಿ 23 ರೂ.

ಮೆಟ್ರೋ ಉದ್ಘಾಟನೆಗೆ ಬನ್ನಿ

ನಮ್ಮ ಮೆಟ್ರೋ ಉದ್ಘಾಟನೆಗೆ ಬನ್ನಿ

English summary
Commercial operations of Namma Metro between Peenya Industry and Nagasandra will commence on May 1, 2015. Here is fare list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X