ಬುಗುರಿ, ಗೋಲಿ, ಗಿಲ್ಲಿದಾಂಡು ಆಡುತ್ತ ಮ್ಯಾರಥಾನ್ ಓಡಿ

Written By:
Subscribe to Oneindia Kannada

ಬೆಂಗಳೂರು.ಮೇ, 26: ಬುಗುರಿ, ಗೋಲಿ, ಗಿಲ್ಲಿದಾಂಡು ಆಡುತ್ತ, ಚೌಕಾಬಾರಾ, ಚಿನ್ನಿ ಮಣೆ, ಸ್ಕಿಪ್ಪಿಂಗ್ ನಲ್ಲಿ ಕಾಲ ಕಳೆಯುತ್ತ ಮೈಮರೆಯಲು ಜತೆಗೆ ಸಮಾಜದ ಒಳಿತೆಗೆ ಹೆಜ್ಜೆ ಹಾಕಲು ನಿಮಗೊಂದು ಅವಕಾಶ ಒದಗಿ ಬಂದಿದೆ.

ಯುನೈಟೆಡ್ ವೇ ಬೆಂಗಳೂರು ಆಶ್ರಯದಲ್ಲಿ "ನಂದಿ ಹಿಲ್ಲಥಾನ್ " ಜೂನ್ 12 ಭಾನುವಾರ ನಡೆಯಲಿದೆ. ಪರಿಸರ ಸಮತೋಲನ, ಜಾಗೃತಿ, ಕಸ ವಿಲೇವಾರಿ, ಸುಂದರ ರಸ್ತೆಗಳು ಎಂಬ ಪರಿಕಲ್ಪನೆ ಆಧಾರದಲ್ಲಿ ಮ್ಯಾರಥಾನ್ ನಡೆಯಲಿದೆ.[ಅಂತಾರಾಷ್ಟ್ರೀಯ ಅಥ್ಲಿಟ್ ಬೆನ್ನತ್ತಿದ ಬೆಂಗಳೂರು ಶ್ವಾನ!]

marathon

ಜೂನ್ 12 ರಂದು 7 ಗಂಟೆಗೆ ಮ್ಯಾರಥಾನ್, 8 ಗಂಟೆಗೆ ವಾಕಥಾನ್ ಮತ್ತು 8 ರಿಂದ 11 ಗಂಟೆ ನಡುವೆ ಫ್ಯಾಮಿಲಿ ಫನ್ ಝೋನ್ ಕಾರ್ಯಕ್ರಮ ನಡೆಯಲಿದೆ. ಎರಡು ಓಟದ ಸ್ಪರ್ಧೆ ಮತ್ತು ಒಂದು ಫನ್ ರೇಸ್ ಮ್ಯಾರಥಾನ್ ನ ವಿಶೇಷ.[ನಂದಿ ಬೆಟ್ಟ ಉಳಿಸಲು ಮ್ಯಾರಥಾನ್ ನಲ್ಲಿ ಭಾಗವಹಿಸಿ]

ಎಲ್ಲಿಂದ ಆರಂಭ? ಸುಲ್ತಾನ ಪೇಟ್ ಸಮೀಪದ ಕಣಿವೆ ನಂದೀಶ್ವರ ದೇವಾಲಯದ ಸಮೀಪದ ಡಿಸ್ಕವರಿ ವಿಲೇಜ್ ಬಳಿಯಿಂದ ಮ್ಯಾರಥಾನ್ ಆರಂಭವಾಗಲಿದೆ. 21 ಕಿಮೀ ವ್ಯಾಪ್ತಿಯಲ್ಲಿ ಮ್ಯಾರಥಾನ್ ನಡೆಯಲಿದೆ.[ನಂದಿ ಬೆಟ್ಟಕ್ಕೆ ಹೋಗುವುದು ಹೇಗೆ?]]

nandi

ಸರ್ಕಾರಿ ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು ಮ್ಯಾರಥಾನ್ ಗೆ ಬೆಂಬಲ ನೀಡಿದ್ದು ಭಾಗವಹಿಸಲಿವೆ. ನೋಂದಣಿ ಮಾಡಿಕೊಳ್ಳಲು www.nandihillathon.in. ಗೆ ಭೇಟಿ ನೀಡಬಹುದು. ಹೆಚ್ಚಿನ ಮಾಹಿತಿಗೆ ಈ ಲಿಂಕ್ www.uwbengaluru.orgಪ್ರವೇಶ ಮಾಡಬಹುದು.

ಯಾರು ಭಾಗವಹಿಸಬಹುದು?
* ಬೆಂಗಳೂರು ಮತ್ತು ಪರಿಸರ ಕಾಪಾಡುವ ಇಚ್ಛೆ ಹೊಂದಿರುವ ಯಾರೂ ಬೇಕಾದರೂ ಪಾಲ್ಗೊಳ್ಳಬಹುದು.
* ಸಂಸ್ಥೆಗಳು, ಕ್ಲಬ್ ಗಳ ಸದಸ್ಯರು ಭಾಗವಹಿಸಬಹುದು, ಭಾಗವಹಿಸುವಿಕೆ ಮುನ್ನ ಕೆಲ ಮಾಹಿತಿಯನ್ನು ಸಲ್ಲಿಕೆ ಮಾಡಬೇಕಾಗುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Nandi Hillathon is the first of its kind marathon and walkathon organised in the seat of pride of Bengaluru, in picturesque locale of Nandi Hills. It is a unique marathon where the entire proceeds collected from the marathon and walkathon will be used to help in the restoration of Nandi Hills and also support the cause selected by your neigborhood of choice.
Please Wait while comments are loading...