ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಗರ ಪೊಲೀಸ್ ಆಯುಕ್ತ ರಾಘವೇಂದ್ರ ವರ್ಗ

By Mahesh
|
Google Oneindia Kannada News

ಬೆಂಗಳೂರು, ಜು.21: ನಗರದಲ್ಲಿ ಹೆಚ್ಚುತ್ತಿರುವ ಮಹಿಳೆಯರ ಮೇಲಿನ ಅತ್ಯಾಚಾರ, ಕ್ರೈಂ ಪ್ರಕರಣಗಳನ್ನು ಹತ್ತಿಕ್ಕಲಾಗದೆ ಹೆಣಗುತ್ತಿರುವ ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರ್ಕಾರ ಪೊಲೀಸ್ ಇಲಾಖೆಗೆ ಭರ್ಜರಿ ಸರ್ಜರಿ ಮಾಡಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ಅವರನ್ನು ವರ್ಗ ಮಾಡಲಾಗಿದ್ದು, ಅವರ ಸ್ಥಾನಕ್ಕೆ ಎಂಎನ್ ರೆಡ್ಡಿ ಅವರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ.

ಕಾನೂನು ಸುವ್ಯವಸ್ಥೆ ವಿಚಾರದಲ್ಲಿ ಪ್ರತಿಪಕ್ಷಗಳಿಂದ ತೀವ್ರ ಟೀಕೆಗೆ ಗುರಿಯಾಗಿರುವ ಸರ್ಕಾರ, ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ಅವರನ್ನು ವರ್ಗಾವಣೆ ಮಾಡಿದೆ. ಕಾನೂನು ಸುವ್ಯವಸ್ಥೆ ಎಡಿಜಿಪಿಯಾಗಿರುವ ಎಂ.ಎನ್.ರೆಡ್ಡಿ ಅವರನ್ನು ನೂತನ ಆಯುಕ್ತರನ್ನಾಗಿ ನೇಮಕ ಮಾಡಲಾಗಿದ್ದು, ಈ ಕುರಿತು ಇಂದು ಸಂಜೆ ಅಧಿಕೃತ ಅದೇಶ ಹೊರಡಿಸಲಾಗಿದೆ. ಎಂ.ಎನ್.ರೆಡ್ಡಿ ಅವರ ಸ್ಥಾನಕ್ಕೆ ಕಮ್ಯುನಿಕೇಶನ್ ಮತ್ತು ಲಾಜಿಸ್ಟಿಕ್ಸ್ ಮುಖ್ಯಸ್ಥ ಕಿಶೋರ್ ಚಂದ್ರ ಅವರನ್ನು ನೇಮಕ ಮಾಡಲಾಗಿದೆ.

* ರಾಘವೇಂದ್ರ ಔರಾದ್ಕರ್ ಸ್ಥಾನಕ್ಕೆ ಎಂಎನ್ ರೆಡ್ಡಿ
* ಎಂಎನ್ ರೆಡ್ಡಿ ಅವರ ಸ್ಥಾನಕ್ಕೆ ಕಿಶೋರ್ ಚಂದ್ರ
* ಕಮಲ್ ಪಂಥ್ ಸ್ಥಾನಕ್ಕೆ ಅಲೋಕ್ ಕುಮಾರ್
* ಮಾನವ ಹಕ್ಕುಗಳು ಕುಂದುಕೊರತೆ ವಿಭಾಗದ ಐಜಿಪಿಯಾಗಿ ಕಮಲ್ ಪಂಥ್ ವರ್ಗ

Bangalore city police commissioner Raghavendra H Auradkar replaced by MN Reddy

ರಾಘವೇಂದ್ರ ಔರಾದ್ಕರ್ ಅವರ ವರ್ಗಾವಣೆಗೆ ಕಾರಣವಾದ ಅಂಶಗಳು:
* ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಕಾಫಿ ಶಾಪ್ ನಲ್ಲಿ ಎಡಿಜಿಪಿ- ಕೆಎಸ್ಆರ್ ಪಿ ಡಾ ಪಿ.ರವೀಂದ್ರನಾಥ್ ಯುವತಿಯ ಫೋಟೋ ಕ್ಲಿಕ್ಕಿಸಿದ ಪ್ರಕರಣ.
* ಬೆಂಗಳೂರಿನ ವಿವಿಧೆಡೆ ರಾತ್ರಿ ಅವಧಿ ಹೆಚ್ಚಳಕ್ಕೆ ಹೆಚ್ಚಿನ ಒತ್ತಡ. ರಾತ್ರಿ 1 ಗಂಟೆ ತನಕ ನಿಯಮ ಸಡಿಲಗೊಳಿಸಿದ್ದು,
* ಸರಣಿ ಅತ್ಯಾಚಾರ ಪ್ರಕರಣಗಳು, ಪ್ರಕರಣಗಳ ತನಿಖೆ ಕುಂಠಿತಗೊಂಡಿರುವುದು.
* ಕಾರ್ಪೊರೇಷನ್ ಬ್ಯಾಂಕ್ ಎಟಿಎಂ ಹಲ್ಲೆ ಪ್ರಕರಣದ ಆರೋಪಿ ಬಂಧನವಾಗದಿರುವುದು
English summary
In a major reshuffle of senior police officials, the Congress government, led by Chief Minister Siddarmaiah today announced MN Reddy as Bangalore city police commissioner. He will replace Raghavendra H Auradkar who has been transferred to KSRP
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X