ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೊಲೀಸ್ ಪೇದೆ ಮೇಲೆ ಶಾಸಕ ಭೈರತಿಯಿಂದ ಹಲ್ಲೆ

|
Google Oneindia Kannada News

ಬೆಂಗಳೂರು, ಜೂ. 27 : ಟ್ರಾಫಿಕ್ ಜಾಮ್ ನಿಂದ ಕೋಪಗೊಂಡ ಕಾಂಗ್ರೆಸ್ ಶಾಸಕರೊಬ್ಬರು ಸಂಚಾರಿ ಪೊಲೀಸ್ ಪೇದೆಯ ಮೇಲೆ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಶಾಸಕ ಭೈರತಿ ಬಸವರಾಜು ಪೊಲೀಸ್ ಪೇದೆ ಮೇಲೆ ಹಲ್ಲೆ ಮಾಡಿದ ಶಾಸಕರು.

ಶುಕ್ರವಾರ ಸಂಜೆ ಈ ಘಟನೆ ಫ್ರೇಜರ್ ಟೌನ್ ನ ಐಟಿಸಿ ಬ್ರಿಡ್ಜ್ ಬಳಿ ನಡೆದಿದೆ. ಕೆ.ಆರ್.ಪುರಂ ಕ್ಷೇತ್ರದ ಕಾಂಗ್ರೆಸ್ ಶಾಸಕ ಭೈರತಿ ಬಸವರಾಜು ಅವರು ಐಟಿಸಿ ಬ್ರಿಡ್ಜ್ ಬಳಿ ಸಾಗುತ್ತಿದ್ದಾಗ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇದರಿಂದ ಕೋಪಗೊಂಡ ಶಾಸಕರು ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಪೇದೆಯ ಮೇಲೆ ಹಲ್ಲೆ ಮಾಡಿದ್ದಾರೆ.

Byrati Basavaraj

ಶಾಸಕರು ಹಲ್ಲೆ ಮಾಡಿದ ಪೇದೆಯನ್ನು ಭೀಮಾನಾಯಕ್ ಲಾಮಾಣಿ ಎಂದು ಗುರುತಿಸಲಾಗಿದ್ದು, ಫ್ರೇಜರ್ ಟೌನ್ ಸಂಚಾರಿ ಪೊಲೀಸ್ ಠಾಣೆಯವರು ಎಂದು ತಿಳಿದುಬಂದಿದೆ. [ಟ್ರಾಫಿಕ್ ಪೊಲೀಸು ಕೆಲಸ ಯಾರಿಗೆ ಬೇಕು ಹೇಳಿ?]

ಲಾರಿ ಕೆಟ್ಟುನಿಂತಿತ್ತು : ಫ್ರೇಜರ್ ಟೌನ್ ನ ಐಟಿಸಿ ಬ್ರಿಡ್ಜ್ ಬಳಿ ಲಾರಿಯೊಂದು ದಾರಿಯಲ್ಲಿ ಕೆಟ್ಟುನಿಂತಿತ್ತು. ಆದ್ದರಿಂದ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಸ್ಥಳಕ್ಕೆ ಆಗಮಿಸಿದ ಶಾಸಕ ಭೈರತಿ ಬಸವರಾಜು ಪೊಲೀಸ್ ಪೇದೆ ಭೀಮಾನಾಯಕ್ ಬಳಿ ಈ ಕುರಿತು ಕೇಳಿದ್ದಾರೆ. ಲಾರಿ ಕೆಟ್ಟುನಿಂತ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ.

ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರೂ ಸಂಚಾರ ವ್ಯವಸ್ಥೆ ಸುಗಮಗೊಳಿಸಲು ಸಾಧ್ಯವಾಗಲಿಲ್ಲವೇ? ಎಂದು ಪೇದೆಯ ಮೇಲೆ ಕೋಪಗೊಂಡ ಶಾಸಕರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

English summary
Bangalore K.R.Pura Assembly Constituency Congress MLA Byrati Basavaraj betas traffic police constable who failed to control traffic jam near ITC Bridge Frazer in Town Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X