ಗಾಲಿ ರೆಡ್ಡಿ ಮಗಳ ಮದುವೆಯಲ್ಲಿ ಕಂಡ ಮುಖಗಳು

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 16: ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಮಗಳ ಮದುವೆಯನ್ನು ನೂರಾರು ಕೋಟಿ ರು ವೆಚ್ಚ ಮಾಡಿ ವೈಭೋಗದಿಂದ ನೆರವೇರಿಸಿದ್ದಾರೆ. ಬುಧವಾರ ಧಾರಾ ಮುಹೂರ್ತ ಸಂಪ್ರದಾಯ ವಿಧಿ ವಿಧಾನಗಳೊಂದಿಗೆ ಸಂಪನ್ನವಾಗಿದೆ.

ಈ ನಡುವೆ ಮಂಗಳವಾರ ರಾತ್ರಿ ನಡೆದ ಆರತಕ್ಷತೆ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೇರಿದಂತೆ ಅನೇಕ ರಾಜಕೀಯ ಮುಖಂಡರು ಪಾಲ್ಗೊಂಡಿದ್ದರು.[ರೆಡ್ಡಿ ಮಗಳ ಅದ್ಧೂರಿ ಮದುವೆ: ಐಟಿಯಲ್ಲಿ ದೂರು]

ಬಿಜೆಪಿ ಹೈಕಮಾಂಡ್ ನ ಅನಧಿಕೃತ ನಿರ್ಬಂಧ ಆದೇಶ ಮೀರಿ ಬಿಜೆಪಿ ಮುಖಂಡರು ಪಾಲ್ಗೊಂಡಿದ್ದರು. ವಿವಾಹ ಮಹೋತ್ಸವದಲ್ಲಿ ವಿವಿಧ ಪಕ್ಷಗಳ ರಾಜಕೀಯ ಮುಖಂಡರು, ವಾಣಿಜ್ಯೋದ್ಯಮಿಗಳು, ಸಿನಿಮಾ ನಟರು, ಗಣ್ಯರು ವಿವಾಹ ಮಹೋತ್ಸವದಲ್ಲಿ ಭಾಗವಹಿಸಿದ್ದರು.

ಗಣ್ಯಾತಿಗಣ್ಯರ ಆಗಮನ: ಕರ್ನಾಟಕ ರಾಜ್ಯ ಬಿಜೆಪಿ ಅಧ್ಯಕ್ಷ ಬಿಎಸ್ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಸಿಟಿ ರವಿ ಮದುವೆ ಸಮಾರಂಭದಲ್ಲಿ ಕಾಣಿಸಿಕೊಂಡರು.

ಯಡಿಯೂರಪ್ಪಅವರ ಪರಿವಾರ

ಯಡಿಯೂರಪ್ಪಅವರ ಪರಿವಾರ

ಕರ್ನಾಟಕ ರಾಜ್ಯ ಬಿಜೆಪಿ ಅಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಚೆಲುವರಾಯ ಸ್ವಾಮಿ ಹಾಗೂ ಜಮೀರ್ ಅಹ್ಮದ್ ಖಾನ್ ಜತೆ ಉಭಯ ಕುಶಲೋಪರಿ ಮಾತುಕತೆ.

 ಜೆಡಿಎಸ್ ನ ರೆಬೆಲ್ ನಾಯಕರನ್ನು ಸ್ವಾಗತಿಸಿದ ರಾಮುಲು

ಜೆಡಿಎಸ್ ನ ರೆಬೆಲ್ ನಾಯಕರನ್ನು ಸ್ವಾಗತಿಸಿದ ರಾಮುಲು

ಜೆಡಿಎಸ್ ನ ರೆಬೆಲ್ ನಾಯಕರಾದ ಜಮೀರ್ ಅಹ್ಮದ್ ಖಾನ್, ಚೆಲುವರಾಯಸ್ವಾಮಿ ಅವರು ಕಾಣಿಸಿಕೊಂಡರು. ಎಲ್ಲರನ್ನು ಬಿಜೆಪಿ ಮುಖಂಡ ಶ್ರೀರಾಮುಲು ಅವರು ಸ್ವಾಗತಿಸಿದರು.

ಅದ್ದೂರಿ ಮದುವೆ ವಿರೋಧಿಸುವ ಕಾಂಗ್ರೆಸ್ಸಿಗರು

ಅದ್ದೂರಿ ಮದುವೆ ವಿರೋಧಿಸುವ ಕಾಂಗ್ರೆಸ್ಸಿಗರು

ಅದ್ದೂರಿ ಮದುವೆ ವಿರೋಧಿಸುವ ಕಾಂಗ್ರೆಸ್ ನಿಂದಲೂ ಅನೇಕ ಮುಖಂಡರು ಮದುವೆಗೆ ಆಗಮಿಸಿದ್ದರು. ರಮೇಶ್ ಕುಮಾರ್ ನೇರವಾಗಿ ಅದ್ದೂರಿ ಮದುವೆ ವಿರೋಧಿಸಿದ್ದರು. ಆದರೆ, ಇಂಧನ ಸಚಿವ ಡಿಕೆ ಶಿವಕುಮಾರ್, ಗೃಹ ಸಚಿವ ಜಿ ಪರಮೇಶ್ವರ ಅವರು ಮದುವೆ ಮನೆ ಸಂಭ್ರಮದಿಂದ ಪಾಲ್ಗೊಂಡಿದ್ದರು.

ಸುಮಾರು 60 ಸಾವಿರ ಮಂದಿಗೆ ಊಟ

ಸುಮಾರು 60 ಸಾವಿರ ಮಂದಿಗೆ ಊಟ

ಗಣ್ಯಾತಿಗಣ್ಯರು ಸೇರಿದಂತೆ ಆಹ್ವಾನ ಪತ್ರಿಕೆ ಪಡೆದು ಮದುವೆಗೆ ಬಂದಿರುವ ಸುಮಾರು 60 ಸಾವಿರ ಮಂದಿಗೆ ಊಟಕ್ಕೆ ವ್ಯವಸ್ಥೆ ಮಾಡಲಾಗಿದೆ, ವಿವಿಐಪಿಗಳಿಗೆ ಪ್ರತ್ಯೇಕ ವ್ಯವಸ್ಥೆ ಸಾರ್ವಜನಿಕರಿಗೆ ಪ್ರತ್ಯೇಕ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಲಾಗಿದೆ. ಊಟದ ಮೆನುವಿನಲ್ಲಿ 16 ಬಗೆಯ ಸಿಹಿ ತಿಂಡಿಗಳು, ಉತ್ತರ ಭಾರತ, ದಕ್ಷಿಣ ಭಾರತದ ಎಲ್ಲಾ ಬಗೆಯ ವಿಶೇಷ ಭಕ್ಷ್ಯಗಳನ್ನು ಮಾಡಲಾಗಿದೆ.

ವಿಜಯನಗರ ಮರು ನಿರ್ಮಾಣ

ವಿಜಯನಗರ ಮರು ನಿರ್ಮಾಣ

ಕೃಷ್ಣದೇವರಾಯ ಜಯಂತಿ ಸಂದರ್ಭದಲ್ಲಿ ತಮ್ಮನ್ನು ತಾವು ಅಭಿನವ ಶ್ರೀಕೃಷ್ಣದೇವರಾಯ ಎಂದು ಕರೆದುಕೊಂಡಿದ್ದ ಗಾಲಿ ಜನಾರ್ದನ ರೆಡ್ಡಿ ಈಗ ತಮ್ಮ ಮಗಳ ಮದುವೆಗೆ ಹಂಪಿಯ ಐತಿಹಾಸಿಕ ವಿಜಯ ವಿಠಲನ ನಕಲಿ ಮಂಟಪವೇ ನಾಚುವಂತೆ ವಿಜಯನಗರ ಸಾಮ್ರಾಜ್ಯದ ಪ್ರಮುಖ ಕಟ್ಟಡಗಳನ್ನು ಅರಮನೆ ಮೈದಾನದಲ್ಲಿ ಮರುಸೃಷ್ಟಿಸಿದ್ದಾರೆ.

ಕಲಾ ವಿನ್ಯಾಸ ಜವಾಬ್ದಾರಿ

ಕಲಾ ವಿನ್ಯಾಸ ಜವಾಬ್ದಾರಿ

ಕಲಾ ವಿನ್ಯಾಸ ಜವಾಬ್ದಾರಿ ಕರ್ನಾಟಕ ಹೆಸರಾಂತ ಕಲಾವಿದ ಶಶಿಧರ್ ಅಡಪ ಹಾಗೂ ಅವರ ತಂಡ ವಹಿಸಿಕೊಂಡಿದೆ. ಶಶಿಧರ ಅಡಪ ಅಲ್ಲದೆ ಬಾಲಿವುಡ್ ನ ಶ್ರೀರಾಮ್ ಅಯ್ಯಂಗಾರ್, ಸುರ್ಜಿತ್ ಸಾವಂತ್ ಅವರು ಹಂಪಿಯ ಗತ ವೈಭವ ಸೆಟ್ ನಿರ್ಮಿಸಿದ್ದಾರೆ.ಮದುವೆ ಮಂಟಪವನ್ನು ವಿಶೇಷ ಕಾಳಜಿ ವಹಿಸಿ ಶಾಸ್ತ್ರೋಕ್ತವಾಗಿ ನಿರ್ಮಿಸಲಾಗಿದೆ.

ಧನುರ್‌ಲಗ್ನದಲ್ಲಿ ಮದುವೆ

ಧನುರ್‌ಲಗ್ನದಲ್ಲಿ ಮದುವೆ

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಿರ್ಮಿಸಿರುವ ಅದ್ಧೂರಿ ಮದುವೆ ಮಂಟಪದಲ್ಲಿ ಬೆಳಗ್ಗೆ 9.30 ರಿಂದ 10.30 ವರೆಗಿನ ಧನುರ್‌ಲಗ್ನದಲ್ಲಿ ಬ್ರಹ್ಮಿಣಿಗೆ ರಾಜೀವ್‌ ರೆಡ್ಡಿ ಅವರು ಮಾಂಗಲ್ಯಧಾರಣೆ ನೆರವೇರಿಸಿದರು. ಹೈದ್ರಾಬಾದ್ ಮೂಲದ ಉದ್ಯಮಿಯಾಗಿದ್ದು ದುಬೈನಲ್ಲಿ ನೆಲೆಸಿರುವ ರಾಜೀವ್ ರೆಡ್ಡಿ ಅವರು ಗಾಲಿ ಜನಾರ್ದನ ರೆಡ್ಡಿ ಪುತ್ರಿ ಬ್ರಹ್ಮಣಿಯನ್ನು ವರಿಸಿದರು.

ಬಳ್ಳಾರಿಯಲ್ಲಿ ಬರ, ಬೆಂಗಳೂರಲ್ಲಿ ಆಡಂಬರ

ಬಳ್ಳಾರಿಯಲ್ಲಿ ಬರ, ಬೆಂಗಳೂರಲ್ಲಿ ಆಡಂಬರ

ಬಳ್ಳಾರಿಯ ಏಳು ತಾಲೂಕುಗಳಲ್ಲಿ ಭೀಕರ ಬರ ಪರಿಸ್ಥಿತಿ ಇದೆ, ಬಳ್ಳಾರಿ ನಗರದ ಬಜೆಟ್ 200 ಕೋಟಿ ರು ಒಳಗಿದೆ. ರೆಡ್ಡಿ ಮಗಳ ಮದುವೆ ಬಜೆಟ್ ಮೀರಿ ಸಾಗಿದೆ. ಗಾಲಿ ರೆಡ್ಡಿ ಅವರ ಪುತ್ರಿಯ ದುಂದು ವೆಚ್ಚದ ಮದುವೆ ವಿರುದ್ಧ ಆದಾಯ ತೆರಿಗೆ ಇಲಾಖೆಗೆ ದೂರು ನೀಡಲಾಗಿದೆ.

ಸಿನಿಮಾ ತಾರೆಗಳ ದಂಡು

ಸಿನಿಮಾ ತಾರೆಗಳ ದಂಡು

ಹಿರಿಯ ನಟಿ ಜಯಂತಿ, ನಟ ಶ್ರೀನಾಥ್, ದ್ವಾರಕೀಶ್, ತೆಲುಗು ಚಿತ್ರರಂಗದ ಶರತ್ ಬಾಬು, ತಮಿಳು ಚಿತ್ರರಂಗದ ವಿಶಾಲ್ ಸೇರಿದಂತೆ ಅನೇಕ ತಾರೆಗಳು ನೂತನ ವಧು ವರರಿಗೆ ಶುಭ ಕೋರಿದರು.
ಚಿತ್ರಕೃಪೆ: ಇಂಟರ್ನೆಟ್

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Politicians cutting across party lines attended the wedding celebrations of Gali Janardhana Reddy's daughter at palace grounds on November 15 and 16. Despite an unofficial diktat of sorts from its central leadership, prominent leaders of the BJP were seen at the wedding
Please Wait while comments are loading...