ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಎಸ್ಸಾರ್ಟಿಸಿಗೆ ಗ್ರೀನ್‌ಟೆಕ್ ಎಚ್‌ಆರ್ ಪ್ರಶಸ್ತಿ

By Mahesh
|
Google Oneindia Kannada News

ಬೆಂಗಳೂರು, ಜೂ.1: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಸಾರ್ಟಿಸಿ)ಗೆ ರಾಷ್ಟ್ರೀಯ ಗ್ರೀನ್‌ಟೆಕ್ ಎಚ್‌ಆರ್ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಕೆಎಸ್ಸಾರ್ಟಿಸಿ ನಿಗಮದಲ್ಲಿ ಅನುಷ್ಠಾನಗೊಳಿಸಿರುವ ಸ್ಟಾಫ್ ಡ್ಯೂಟಿ ರೋಟಾ ಸಿಸ್ಟಮ್ ಉಪಕ್ರಮದ ಯಶಸ್ಸಿಗೆ ಮಾನವ ಸಂಪನ್ಮೂಲ ವಿಭಾಗದ ಅತ್ಯುತ್ತಮ ಉಪಕ್ರಮ ಎಂದು ಎಚ್‌ಆರ್ ವರ್ಗದಲ್ಲಿ ಪ್ಲಾಟಿನಂ ಪ್ರಶಸ್ತಿ ನೀಡಲಾಗಿದೆ.

ನಗರದಲ್ಲಿ ನಡೆದ ಸಮಾರಂಭದಲ್ಲಿ ಕೆಎಸ್‌ಆರ್‌ಟಿಸಿಗೆ ಎಕ್ಸಲೆನ್ಸ್ ಇನ್ ಎಚ್‌ಆರ್ ವರ್ಗದಲ್ಲಿ ಪ್ಲಾಟಿನಂ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಗ್ರೀನ್‌ಟೆಕ್ ಎಚ್‌ಆರ್ ಪ್ರಶಸ್ತಿಯನ್ನು ದೇಶದ ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಸಂಸ್ಥೆಯ ಸಿಬ್ಬಂದಿಗಳ ಹಿತದೃಷ್ಟಿಯಿಂದ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಅಭಿವೃದ್ಧಿಪಡಿಸಿರುವ ಅತ್ಯುತ್ತಮ ಉಪಕ್ರಮಗಳನ್ನು ಗುರುತಿಸಿ ಗೌರವಿಸುವ ಪ್ರಸಸ್ತಿ ಇದಾಗಿದೆ.

KSRTC conferred National Greentech HR Award

ಸ್ಟಾಫ್ ಡ್ಯೂಟಿ ರೋಟಾ ಸಿಸ್ಟಮ್ : ಸಿಬ್ಬಂದಿಗಳ ಸೇವಾ ಹಿರಿತನ ಆಧಾರದ ಮತ್ತು ಸಮಾಲೋಚನೆಯ ಮೇಲೆ ಪ್ರತಿ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸುವ ವ್ಯವಸ್ಥೆಯಾಗಿರುತ್ತದೆ. ಇದರಿಂದ ಪಕ್ಷಪಾತವಿಲ್ಲದೆ, ಪಾರದರ್ಶಕವಾಗಿ ಸಿಬ್ಬಂದಿಗಳಿಗೆ ಆಡಳಿತ ವ್ಯವಸ್ಥೆ ದೊರಕುತ್ತದೆ ಮತ್ತು ದಿಢೀರ್ ಮಾರ್ಗ ರದ್ಧತಿಗೆ ಅವಕಾಶವಿಲ್ಲದಂತೆ ಪ್ರಯಾಣಿಕರಿಗೆ ಸಮರ್ಥ ಸೇವೆ ಒದಗಿಸಲು ಸಹಕಾರಿಯಾಗಿರುತ್ತದೆ.

ನಿಗಮವು ಒಂದು ಕಾರ್ಮಿಕ ಸಮೂಹವನ್ನು ಹೊಂದಿರುವ ಸಂಸ್ಥೆಯಾಗಿದ್ದು, ಸುಮಾರು 37,381 ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕರ್ತವ್ಯ ನಿಯೋಜನೆ ಮತ್ತು ರಜೆ ನಿರ್ವಹಣೆ ಹಂಚಿಕೆಯು ಬಹಳ ಸೂಕ್ಷ್ಮವಾದ ವಿಷಯವಾಗಿದ್ದು, ಅತ್ಯಂತ ಪಾರದರ್ಶಕತೆಯಿಂದ ಮತ್ತು ವಸ್ತುನಿಷ್ಠವಾಗಿ ನಿಭಾಯಿಸುವ ವಿಷಯವಾಗಿರುತ್ತದೆ.

ಗ್ರೀನ್ ಟೆಕ್ ನಿಂದ ಎಚ್ ಆರ್ ವಿಭಾಗ, ಸಿಎಸ್ ಆರ್, ಪರಿಸರ, ಸುರಕ್ಷತೆ, ಆರೋಗ್ಯ ಸೇರಿದಂತೆ ಹಲವು ವಿಭಾಗಗಳಲ್ಲಿ ವಾರ್ಷಿಕ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಸುರಕ್ಷತೆ ಹಾಗೂ ಪರಿಸಹ ಸ್ನೇಹಿ ಸಂಸ್ಥೆ ಎಂದು ಕೆಎಸ್ಸಾರ್ಟಿಸಿ ಈ ಹಿಂದೆ ಪ್ರಶಸ್ತಿ ಪಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
The Karnataka State Road Transport Corporation (KSRTC) has bagged the ‘Genentech HR’ award for its novel initiative ‘Staff Duty Rota System’.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X