ವಿಜಯನಗರ: ಯುವಕನ ಮೇಲೆ ಯುವತಿಯಿಂದ Acid ದಾಳಿ

Posted By:
Subscribe to Oneindia Kannada

ಬೆಂಗಳೂರು, ಜನವರಿ 17: ಮದುವೆಯಾಗಲು ಒಲ್ಲೆ ಎಂದ ಯುವಕನ ಮೇಲೆ ಭಗ್ನ ಪ್ರೇಮಿ ಯುವತಿಯೊಬ್ಬಳು ಆಸಿಡ್ ಎರಚಿದ ಘಟನೆ ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ನಡೆದಿದೆ.

ಯುವಕನ ಮೇಲೆ ದಾಳಿ ನಡೆಸಿದ ಯುವತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆಸಿಡ್ ದಾಳಿ ನಡೆಸಿದ ಯುವತಿಯನ್ನು ವಿದ್ಯಾ ಎಂದು ಗುರುತಿಸಲಾಗಿದೆ.

Jilted woman attacks man with acid in Bengaluru

ಮದುವೆಯಾಗುವಂತೆ ಯುವಕನೊಬ್ಬನ ಹಿಂದೆ ಬಿದ್ದಿದ್ದ ವಿದ್ಯಾ ನಿರಾಶೆ ಕಾದಿತ್ತು. ವಿದ್ಯಾ ಸಲ್ಲಿಸಿದ ಮದುವೆ ಆಫರ್ ರಿಜೆಕ್ಟ್ ಆಗಿತ್ತು. ಇದರಿಂದ ಸಿಟ್ಟಿಗೆದ್ದ ಯುವತಿ ಆಸಿಡ್ ದಾಳಿ ನಡೆಸಿದ್ದಲ್ಲದೆ, ಯುವಕನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾಳೆ.

ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿ ವಿದ್ಯಾಳನ್ನು ಸಾರ್ವಜನಿಕರೆ ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಹಲ್ಲೆಗೊಳಗಾಗಿದ್ದ ವಿಜಯ್ ಕುಮಾರ್ ನನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

Jilted woman attacks man with acid in Bengaluru

ಇಬ್ಬರು ಶ್ರೀರಾಮಪುರದ ನಿವಾಸಿಗಳಾಗಿದ್ದು, ಬಹುಕಾಲದಿಂದ ಗೆಳೆತನವಿತ್ತು. ಆದರ್, ವಿದ್ಯಾಳಿಗೆ ವಿಜಯ್ ಕುಮಾರ್ ಮದುವೆಯಾಗುವ ಆಸೆ ಹುಟ್ಟಿತು. ಮದುವೆಯಾಗುವಂತೆ ಕೇಳಿಕೊಂಡಿದ್ದಾಳೆ. ಮದುವೆಗೆ ವಿಜಯ್ ನಿರಾಕರಿಸಿದ್ದಾನೆ.

ಇದರಿಂದ ಸಿಟ್ಟಿಗೆದ್ದ ವಿದ್ಯಾ, ವಿಜಯನಗರ ಬಳಿ ದ್ವಿಚಕ್ರವಾಹನದಲ್ಲಿ ಬಂದು ವಿಜಯ್ ಕುಮಾರ್ ಮೇಲೆ ಆಸಿಡ್ ದಾಳಿ ನಡೆಸಿದ್ದಾಳೆ. ವಾಹನದ ನಂಬರ್ ಪ್ಲೇಟ್ ಕೂಡಾ ಅಳಿಸಿದ್ದ ವಿದ್ಯಾ, ಪರಾರಿಯಾಗಲು ಯೋಜನೆ ಹಾಕಿಕೊಂಡಿದ್ದಳು, ಆದರೆ, ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದು ಈಗ ಪೊಲೀಸರ ಅತಿಥಿಯಾಗಿದ್ದಾಳೆ.(ಒನ್ ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Vijayanagar police in Bengaluru arrested a woman for attacking a man with acid on Tuesday. The woman, identified as Vidya allegedly threw acid at the man for turning down a marriage proposal made by her. Vidya is also accused of assaulting the man with a knife after throwing acid at him.
Please Wait while comments are loading...