ಆರೋಗ್ಯ ಕಾಪಾಡುವ ವೈದ್ಯರಿಗೆ ಥ್ಯಾಂಕ್ಸ್ ಹೇಳಿದ ಟ್ವೀಟ್ ಲೋಕ
ಬೆಂಗಳೂರು, ಜು.1: ಭಾರತರತ್ನ ಡಾ.ಬಿದನ್ ಚಂದ್ರ ರಾಯ್ ಅವರ ನೆನಪಿನಲ್ಲಿ ಜು.1ರಂದು ದೇಶದೆಲ್ಲೆಡೆ ರಾಷ್ಟ್ರೀಯ ವೈದರ ದಿನಾಚರಣೆ' ನಡೆಯುತ್ತಿದೆ. ಈ ದಿನ ಮಹಾವೈದ್ಯ ಬಿಸಿ ರಾಯ್ ಅವರ ಜಯಂತಿ ಹಾಗೂ ವರ್ಧಂತಿ ದಿನವಾಗಿರುವುದು ವಿಶೇಷ.
ಪಶ್ಚಿಮ ಬೆಂಗಾಳದ ಮುಖ್ಯಮಂತ್ರಿಯೂ ಆಗಿದ್ದ ಡಾ.ಬಿದನ್ ಚಂದ್ರ ರಾಯ್ ಅವರು ಮಹಾತ್ಮಾ ಗಾಂಧೀಜಿ ಅವರ ಆಪ್ತ ಮಿತ್ರ ಹಾಗೂ ಪರ್ಸನಲ್ ಡಾಕ್ಟರ್ ಆಗಿದ್ದವರು. [ವೈದ್ಯರಿಗೆ ಗ್ರಾಮೀಣ ಸೇವೆ ಕಡ್ಡಾಯ]
ಡಾ.ಬಿದನ್ ಚಂದ್ರ ರಾಯ್ ಅವರು ಲಂಡನ್ನಿನಿಂದ ಎಫ್.ಆರ್.ಸಿ.ಎಸ್ ಹಾಗೂ ಎಂ.ಆರ್.ಸಿ.ಪಿ ಪದವಿ ಪಡೆದ ನಂತರ ಭಾರತದಲ್ಲಿ ವೈದ್ಯ ವೃತ್ತಿ ಆರಂಭಿಸಿದರು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳಾಗಿ 14 ವರ್ಷ ಕರ್ತವ್ಯ ನಿಭಾಯಿಸಿದ ರಾಯ್ ಅವರು ಸಿಎಂ ಆಗಿದ್ದಾಗಲೂ ಪ್ರತಿ ದಿನ ಸುಮಾರು 2 ಗಂಟೆಗಳ ಕಾಲ ರೋಗಿಗಳಿಗೆ ಉಚಿತ ಚಿಕಿತ್ಸೆಯನ್ನು ನೀಡುತ್ತಿದ್ದರು. [ಡಾಕ್ಟರ್ ಕೊಟ್ಟ ಚೀಟಿ ಇನ್ಮುಂದೆ ನಿಮಗೂ ಅರ್ಥವಾಗುತ್ತೆ]
ಡಾ.ಬಿ.ಸಿ.ರಾಯ್ ಅವರ ಜನಸೇವೆಯನ್ನು ಪರಿಗಣಿಸಿ ಜನಸಾಮಾನ್ಯರು ಕೃತಜ್ಞತೆಯನ್ನು ಸಲ್ಲಿಸುವ ದಿನ. ಆಧುನಿಕ ವೈದ್ಯಕೀಯ ಪದ್ಧತಿಯಲ್ಲಿ ವೃತ್ತಿ ನಿರತರಾಗಿರುವ ಎಲ್ಲ ವೈದ್ಯರಿಗೂ ಈ ದಿನ ಸುದಿನದಂದು ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ನಲ್ಲಿರುವ #ThankYouDoctor ಅಡಿಯಲ್ಲಿ ಬಂದಿರುವ ಟ್ವೀಟ್ ಗಳ ಸಂಗ್ರಹ ಇಲ್ಲಿದೆ.

ರೋಗಿಗಳಿಗೆ ಉಚಿತ ಚಿಕಿತ್ಸೆ
ರಾಯ್ ಅವರು ಸಿಎಂ ಆಗಿದ್ದಾಗಲೂ ಪ್ರತಿ ದಿನ ಸುಮಾರು 2 ಗಂಟೆಗಳ ಕಾಲ ರೋಗಿಗಳಿಗೆ ಉಚಿತ ಚಿಕಿತ್ಸೆಯನ್ನು ನೀಡುತ್ತಿದ್ದರು.
|
ನಮ್ಮ ಜೀವನ ಬದಲಾಯಿಸಿದ ವೈದ್ಯರು
ನಮ್ಮ ಜೀವನ ಬದಲಾಯಿಸಿದ ವೈದ್ಯರಿಗೆ ನಮನ,.
|
ನಿಮ್ಮ ವೈದ್ಯರ ಬಗ್ಗೆ ನಾಲ್ಕು ಮೆಚ್ಚುಗೆ ಸೂಸಿ
ನಿಮ್ಮ ವೈದ್ಯರ ಬಗ್ಗೆ ನಾಲ್ಕು ಮೆಚ್ಚುಗೆ ಮಾತುಗಳನ್ನಾಡಿ
|
ವಿವಿಧ ವೈದ್ಯ ಸಂಸ್ಥೆಗಳಿಂದ ಡಾಕ್ಟರ್ಸ್ ಡೇ
ವಿವಿಧ ವೈದ್ಯ ಸಂಸ್ಥೆಗಳಿಂದ ಡಾಕ್ಟರ್ಸ್ ಡೇ ಕುರಿತಂತೆ ಟ್ವೀಟ್.
|
ಹೃದಯ ಬಡಿತ ನಿಮಗೆ ಅರ್ಥವಾಗುತ್ತದೆ
ನಮ್ಮ ಹೃದಯ ಬಡಿತ ನಿಮಗೆ ಅರ್ಥವಾಗುತ್ತದೆ
ಡಾಕ್ಟರ್ಸ್ ಡೇ ಸ್ಪೆಷಲ್ ವಿಡಿಯೋ
ಪ್ರಾಕ್ಟೋ ಕಡೆಯಿಂದ ಡಾಕ್ಟರ್ಸ್ ಡೇ ಸ್ಪೆಷಲ್ ವಿಡಿಯೋ
|
ನಿಮ್ಮ ಬರವಣಿಗೆ ಬದಲಾಗಲಿ
ನಿಮ್ಮ ಬರವಣಿಗೆ ಬದಲಾಗಲಿ ಆರ್ಥವಾಗುವಂತೆ ಬರೀರಿ ಎಂಬ ತಮಾಷೆ ಟ್ವೀಟ್
|
ರಾಷ್ಟ್ರೀಯ ವೈದ್ಯ ದಿನದ ಶುಭ ಹಾರೈಕೆಗಳು
ರಾಷ್ಟ್ರೀಯ ವೈದ್ಯ ದಿನದ ಶುಭ ಹಾರೈಕೆಗಳು, ಡಾ. ಬಿಸಿ ರಾಯ್ ನೆನಪಿಸಿಕೊಳ್ಳೋಣ.












Click it and Unblock the Notifications