ಶಶಿಕಲಾರನ್ನು ಜೈಲಿನಿಂದ ಹೊರತರಬಲ್ಲೆ : ಡೀಲರ್

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಏಪ್ರಿಲ್ 18: ಎಐಎಡಿಎಂಕೆ ಪಕ್ಷಕ್ಕೆ ಎರಡು ಹಸಿರೆಲೆ ಇರುವ ಪಕ್ಷದ ಚಿಹ್ನೆಯನ್ನು ಕೊಡಿಸುವ ಡೀಲ್ ಒಪ್ಪಿಕೊಂಡಿದ್ದ ಸುಕೇಶ್ ಚಂದ್ರಶೇಖರನ್ ಡೀಲ್ ಗಳ ಕಥೆ ಒಂದೊಂದಾಗಿ ಹೊರ ಬರುತ್ತಿದೆ. ಶಶಿಕಲಾರನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಹೊರ ತರಬಲ್ಲೇ ಎಂದು ಡೀಲ್ ಮಾತನಾಡಿದ್ದ ಎಂಬ ವಿಷಯ ಬಹಿರಂಗಗೊಂಡಿದೆ.

ಎಐಎಡಿಎಂಕೆ ಪಕ್ಷಕ್ಕೆ ಎರಡು ಹಸಿರೆಲೆ ಇರುವ ಪಕ್ಷದ ಚಿಹ್ನೆ ಕೊಡಿಸಲು 50 ಕೋಟಿ ರು ಡೀಲ್ ಮಾಡಿಕೊಂಡು ಸಿಕ್ಕಿಬಿದ್ದಿರುವ ಸುಕೇಶ್, ವಿಚಾರಣೆ ವೇಳೆ ಈ ವಿಷಯ ಬಾಯ್ಬಿಟ್ಟಿದ್ದಾನೆ.[ಎಐಎಡಿಎಂಕೆ ಚಿನ್ಹೆಗಾಗಿ ಲಂಚ: ಯಾರು ಈ ಚಾಲಾಕಿ ಮಧ್ಯವರ್ತಿ?]

ನಾನು ಅತ್ಯಂತ ಪ್ರಭಾವಿ ವ್ಯಕ್ತಿ. ಯಾರನ್ನು ಬೇಕಾದರೂ ಲಂಚ ನೀಡಿ ನನ್ನ ಹಿಡಿತಕ್ಕೆ ತೆಗೆದುಕೊಳ್ಳಬಲ್ಲೆ. ದೆಹಲಿಯಲ್ಲಿ ಚುನಾವಣಾ ಆಯೋಗದ ಅಧಿಕಾರಿಗಳಿಗೆ ಲಂಚ ನೀಡಿ ಚಿಹ್ನೆ ಕೊಡಿಸುತ್ತೇನೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ನಿಮ್ಮ ಸಂಬಂಧಿ ಶಶಿಕಲಾ ನಟರಾಜನ್ ರನ್ನು ಬಿಡಿಸುತ್ತೇನೆ ಎಂದು ಟಿವಿವಿ ದಿನಕರನ್ ಗೆ ಆಶ್ವಾಸನೆ ನೀಡಿದ್ದ ಸುಕೇಶ್ ಸದ್ಯ ದೆಹಲಿ ಪೊಲೀಸರ ವಶದಲ್ಲಿದ್ದು, ವಿಚಾರಣೆಗಾಗಿ ಬೆಂಗಳೂರಿಗೂ ಕರೆ ತರಲಾಗುತ್ತದೆ.

I can even get Sasikala out of jail, conman told TTV Dinakaran

ಎಐಎಡಿಎಂಕೆ ಪಕ್ಷಕ್ಕೆ ಡೀಲ್ ಖುದುರಿಸುವುದಾಗಿ ಹೇಳಿದ್ದ ಸುಕೇಶ್ ಬೆಂಗಳೂರು ಮೂಲದವರು. ದಿನಕರನ್ ಜತೆ 50 ಕೋಟಿ ರು ಡೀಲ್ ಮಾಡಿಕೊಂಡಿದ್ದು, ಅಧಿಕಾರಿಗಳಿಗೆ ಲಂಚ ತಿನ್ನಿಸಿ ಎಐಎಡಿಎಂಕೆ ಚಿಹ್ನೆ ಕೊಡಿಸುವುದಾಗಿ ಸುಕೇಶ್ ಭರವಸೆ ನೀಡಿದ್ದರು.ದೆಹಲಿಯ ಹಯಾತ್ ಹೋಟೆಲ್ ನಲ್ಲಿ ಸುಕೇಶ್ ನನ್ನು ಬಂಧಿಸಿದಾಗ ಹೊಟೆಲ್ ರೂಮಿನಲ್ಲಿ 1.3ಕೋಟಿರು ಹಾಗೂ ಹೊರಗಡೆ ನಿಲ್ಲಿಸಿದ್ದ ಮರ್ಸಿಡೀಸ್ ಬೆಂಜ್ ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.[ತಮಿಳುನಾಡಿನಲ್ಲಿ ಮತ್ತೊಂದು ಹೈಡ್ರಾಮ, ಎಐಎಡಿಎಂಕೆ ಬಣಗಳ ವಿಲೀನ?]

ಎರಡೆಲೆ ಏಕೆ ಬೇಕು: ಎಐಎಡಿಎಂಕೆ ಪಕ್ಷದ ಚಿಹ್ನೆ ಸದ್ಯಕ್ಕೆ ಚುನಾವಣಾ ಆಯೋಗದ ವಶದಲ್ಲಿದೆ. ಪಳನಸ್ವಾಮಿ, ಶಶಿಕಲಾ ಗುಂಪು ಹಾಗೂ ಓ ಪನ್ನೀರ್ ಸೆಲ್ವಂ ಗುಂಪು ಎರಡೆಲೆಗಾಗಿ ಕಿತ್ತಾಡಿದ್ದರಿಂದ ಚಿಹ್ನೆ ಸದ್ಯಕ್ಕೆ ಇಬ್ಬರಿಗೂ ಲಭ್ಯವಿಲ್ಲ.

ಆರ್ ಕೆ ನಗರ ಕ್ಷೇತದ ಉಪ ಚುನಾವಣೆ ಬಾಕಿ ಇರುವುದರಿಂದ ಪಕ್ಷದ ಮೂಲ ಚಿಹ್ನೆ ಮಹತ್ವ ಪಡೆದುಕೊಂಡಿದೆ. ಭ್ರಷ್ಟಾಚಾರದ ಕೂಪವಾಗಿದ್ದ ಆರ್ ಕೆ ನಗರ ಕ್ಷೇತ್ರದಲ್ಲಿ ಚುನಾವಣೆ ದಿನಾಂಕ ಏಪ್ರಿಲ್ 11ರಿಂದ ಮುಂದೂಡಲ್ಪಟ್ಟಿದ್ದು, ಮತ್ತೆ ಯಾವಾಗ ಇನ್ನೂ ತಿಳಿದು ಬಂದಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
He has been in and out of jail several times, but that never deterred him. Addicted to a good life-style and a life of conning people, Sukesh Chandrasekhar was a son who was disowned by his parents. His father who worked at a bank disowned him after realising that his son was a repeat offender.
Please Wait while comments are loading...