ಕರ್ಫ್ಯೂ ಹೇಗಿತ್ತು?, ಜನರನ್ನು ವ್ಯಾಪಾರಿಗಳು ಸುಲಿಗೆ ಮಾಡಿದ್ರಾ?

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 14 : ಸೋಮವಾರ ನಡೆದ ಗಲಭೆ ಬಳಿಕ ಬೆಂಗಳೂರಿನ 16 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ಇಂದು ಸಹ ಕರ್ಫ್ಯೂ ಜಾರಿಯಲ್ಲಿದ್ದು, ಅದನ್ನು ತೆರವುಗೊಳಿಸುವ ಬಗ್ಗೆ ಸಂಜೆ ನಿರ್ಧಾರ ಕೈಗೊಳ್ಳಲಾಗುತ್ತದೆ.

ನಗರದ ರಾಜಗೋಪಾಲನಗರ, ಕಾಮಾಕ್ಷಿಪಾಳ್ಯ, ವಿಜಯನಗರ, ಬ್ಯಾಟರಾಯನಪುರ, ಕೆಂಗೇರಿ, ಮಾಗಡಿ ರೋಡ್, ರಾಜಾಜಿನಗರ, ರಾಜರಾಜೇಶ್ವರಿ ನಗರ, ಕೆಪಿ ಅಗ್ರಹಾರ, ಚಂದ್ರಾಲೇಔಟ್, ಯಶವಂತಪುರ, ಮಹಾಲಕ್ಷೀ ಲೇಔಟ್, ಪೀಣ್ಯ, ಆರ್ ಎಂಸಿ ಯಾರ್ಡ್. ನಂದಿನಿ ಲೇಔಟ್, ಜ್ಞಾನ ಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕರ್ಫ್ಯೂ ಜಾರಿಯಲ್ಲಿದೆ.[ಗಲಭೆ: ಬೆಂಗಳೂರಿಗೆ 25 ಸಾವಿರ ಕೋಟಿ ರು ನಷ್ಟ!]

How Bengaluru coped with the curfew

ಇವುಗಳಲ್ಲಿ ಹಲವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇದೇ ಮೊದಲ ಬಾರಿಗೆ ಕರ್ಫ್ಯೂ ಜಾರಿಗೊಳಿಸಲಾಗಿದೆ. ಹಲವು ಬಡಾವಣೆಗಳಲ್ಲಿ ರಸ್ತೆಗಳು ಖಾಲಿಯಾಗಿದ್ದವು, ಜನರು ರಸ್ತೆಗೆ ಬಾರದೆ ಮನೆಯಲ್ಲಿಯೇ ಕುಳಿತಿದ್ದರು. ಬೆಳಗ್ಗೆ 9 ಗಂಟೆ ವೇಳೆಗೆ ರಸ್ತೆಗೆ ಬಂದ ಕೆಲವರನ್ನು ಪೊಲೀಸರು ಮನೆಗೆ ವಾಪಸ್ ಕಳಿಸಿದರು.[ಕಾವೇರಿ ಕಿಚ್ಚು : ಸಿದ್ದರಾಮಯ್ಯ ಪತ್ರಿಕಾಗೋಷ್ಠಿ ವಿವರ]

ಕರ್ಫ್ಯೂ ಯಾವಾಗ ಜಾರಿಯಲ್ಲಿದೆ?, ಯಾವಾಗ ತೆರವುಗೊಳಿಸಲಾಗುತ್ತದೆ? ಎಂಬುದರ ಬಗ್ಗೆ ಜನರಿಗೆ ಹಲವಾರು ಗೊಂದಲಗಳಿವೆ. ಕೆಲವು ಬಡಾವಣೆಗಳಲ್ಲಿ ಸಂಜೆ 6 ರಿಂದ 9ರ ತನಕ ಕರ್ಫ್ಯೂ ತೆರವುಗೊಳಿಸಿ ಜನರು ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ಅವಕಾಶ ನೀಡಲಾಯಿತು.[ಕಾವೇರಿ ಕಿಚ್ಚು : ಬೆಂಗಳೂರಲ್ಲಿ 312 ಮಂದಿ ಬಂಧನ]

ಕರ್ಫ್ಯೂ ಜಾರಿಗೊಳಿಸಿದ ಮೇಲೆ ಹಲವು ಬಡಾವಣೆಗಳಲ್ಲಿ ಪರಿಸ್ಥಿತಿ ಹತೋಟಿಗೆ ಬಂದಿತು. ಸೋಮವಾರ ಗೋಲಿಬಾರ್ ನಡೆದಿದ್ದ ಹೆಗ್ಗನಹಳ್ಳಿ ಮತ್ತು ವಿಜಯನಗರದಲ್ಲಿ ಮಂಗಳವಾರವೂ ಕೆಲವು ಕಾಲ ಪ್ರಕ್ಷುಬ್ಧ ಪರಿಸ್ಥಿತಿ ಇತ್ತು. 16 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕರ್ಫ್ಯೂ ತೆರವುಗೊಳಿಸುವ ಬಗ್ಗೆ ಇಂದು ನಿರ್ಧಾರ ಕೈಗೊಳ್ಳಲಾಗುತ್ತದೆ.

ವ್ಯಾಪಾರಿಗಳ ಸುಲಿಗೆ : ಮುಂಜಾನೆ ಅಗತ್ಯ ವಸ್ತುಗಳನ್ನು ತರಲು ಹೋದ ಜನರನ್ನು ವ್ಯಾಪಾರಿಗಳು ಸುಲಿಗೆ ಮಾಡಿದರು ಎಂಬ ಆರೋಪವೂ ಇದೆ. ಬೆಳಗ್ಗೆ ಕೆಲವು ಹೋಟೆಲ್‌ಗಳು ಬಾಗಿಲು ತೆರೆದಿದ್ದವು. ನಂತರ ಬಾಗಿಲು ಮುಚ್ಚಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Curfew was imposed in 16 areas of Bengaluru due to the Cauvery water protests that hit the city on Monday and Tuesday. For many in the above mentioned areas, curfew was something new.
Please Wait while comments are loading...