ಹಿಂದೂ-ಮುಸ್ಲಿಂ ದಂಪತಿಗೆ ಬೆಂಗಳೂರಿನಲ್ಲಿ ಹೋಟೆಲ್ ರೂಮ್ ನಿರಾಕರಣೆ

ಬೆಂಗಳೂರು, ಜುಲೈ 4: ಎರಡು ಬೇರೆ ಧರ್ಮದ ದಂಪತಿಗೆ ಬೆಂಗಳೂರಿನಲ್ಲಿ ಹೋಟೆಲ್ ರೂಮ್ ನೀಡಲು ನಿರಾಕರಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಶಫೀಕ್ ಸುಬೈದಾ ಹಕೀಂ ಹಾಗೂ ದಿವ್ಯಾ ದಂಪತಿ ಮೂಲತಃ ಕೇರಳದವರು. ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದಿದ್ದರು. ಇಲ್ಲಿನ ಸುಧಾಮ ನಗರ್ ನ ಅಣ್ಣಿಪುರಂ ಮುಖ್ಯರಸ್ತೆಯಲ್ಲಿರುವ ಆಲಿವ್ ರೆಸಿಡೆನ್ಸಿಯಲ್ಲಿ ರೂಮ್ ನೀಡಲು ನಿರಾಕರಿಸಲಾಗಿದೆ.

‘Hindus don’t marry Muslims’: Prejudiced Bengaluru hotel denies room to Kerala couple

ಅದಕ್ಕೆ ಕಾರಣ ಏನೆಂದರೆ, ಆತ ಮುಸ್ಲಿಂ-ಆಕೆ ಹಿಂದೂ. ಈ ಬಗ್ಗೆ ದ ನ್ಯೂಸ್ ಮಿನಿಟ್ ವರದಿ ಮಾಡಿದೆ. ಹೋಟೆಲ್ ನ ಸ್ವಾಗತಕಾರರು ಐಡಿ ಕಾರ್ಡ್ ನೋಡಿದ ನಂತರ ರೂಮ್ ನೀಡಲು ನಿರಾಕರಿಸಿದರು ಎಂದು ಶಫೀಕ್ ಹೇಳಿದ್ದಾರೆ.

"ಅವರು ನನ್ನ ಹೆಸರು ರಿಜಿಸ್ಟರ್ ನಲ್ಲಿ ದಾಖಲಿಸಿಕೊಂಡರು. ನಾನು ಮುಸ್ಲಿಂ, ನನ್ನ ಪತ್ನಿ ಹಿಂದೂ ಅಂತ ಗೊತ್ತಾಯಿತು. ನೀವಿಬ್ಬರೂ ದಂಪತಿನಾ? ಇಬ್ಬರೂ ಬೇರೆ ಧರ್ಮದವರಿದ್ದೀರಾ ಎಂದರು. ನಾವು ದಂಪತಿ ಎಂದು ಖಾತ್ರಿ ಮಾಡಿದ ನಂತರ ಮುಸ್ಲಿಂ-ಹಿಂದೂ ಒಂದೇ ಕೋಣೆಯಲ್ಲಿರುವುದು ಒಪ್ಪಲು ಸಾಧ್ಯವಿಲ್ಲ" ಎಂದು ಹೇಳಿದ್ದಾಗಿ ಶಫೀಕ್ ಮಾಹಿತಿ ನೀಡಿದ್ದಾರೆ.

ರೂಮ್ ಕೊಡುವುದಕ್ಕೂ ಧರ್ಮಕ್ಕೂ ಏನು ಸಂಬಂಧ ಎಂದು ಶಫೀಕ್ ಕೇಳಿದ್ದಾರೆ. ಆದರೆ ಹೋಟೆಲ್ ನ ಸ್ವಾಗತಕಾರರು ಸರಿಯಾದ ಉತ್ತರ ನೀಡಿಲ್ಲ. ಪೊಲೀಸರಿಗೆ ದೂರು ನೀಡುವುದಾಗಿ ಹೇಳಿದರೂ ಅದಕ್ಕೂ ಸ್ಪಂದಿಸಿಲ್ಲ. ಸಂದರ್ಶನವೊಂದಕ್ಕೆ ಬೆಂಗಳೂರಿಗೆ ಬಂದಿದ್ದರಿಂದ ಪೊಲೀಸರಿಗೆ ದೂರು ನೀಡುವಷ್ಟು ಸಮಯ ಕೂಡ ನಮಗಿರಲಿಲ್ಲ ಎಂದು ಶಫೀಕ್ ಹೇಳಿದ್ದಾರೆ.

ಈ ಬಗ್ಗೆ ಹೋಟೆಲ್ ನ ಸ್ವಾಗತಕಾರರಲ್ಲೇ ವಿಚಾರಿಸಿದಾಗ, ರೂಮ್ ನೀಡಲು ನಿರಾಕರಿಸಿದ್ದು ಹೌದು ಎಂದು ಒಪ್ಪಿಕೊಂಡಿದ್ದಾರೆ. ಅಷ್ಟೇ ಅಲ್ಲ, ನಾವು ಹಿಂದೂ-ಮುಸ್ಲಿಂ ಒಟ್ಟೊಗೆ ಬಂದರೆ ರೂಮು ನೀಡುವುದಿಲ್ಲ. ಒಂದು ವೇಳೆ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡರೆ ನಮಗೆ ಇಲ್ಲದ ಸಮಸ್ಯೆ ಎಂದು ಕೂಡ ಹೇಳಿದ್ದಾರೆ.

ನಾನು ಅವರಿಬ್ಬರೂ ಆತ್ಮಹತ್ಯೆ ಮಾಡಿಕೊಂಡೇ ಮಾಡಿಕೊಳ್ತಾರೆ ಅಂತ ಹೇಳಲ್ಲ. ನಾನು ಹಳ್ಳಿಯಲ್ಲಿ ಬೆಳೆದಿದ್ದು. ಅಲ್ಲೆಲ್ಲ ಹೀಗೆ ಮದುವೆ ಆಗಲ್ಲ ಎಂದಿದ್ದು, ಜತೆಗೆ ಅವರಿಬ್ಬರು ತುಂಬ ಕಡಿಮೆ ಲಗೇಜ್ ತಂದಿದ್ದರಿಂದ ಅನುಮಾನ ಬಂದ ರೂಮ್ ಕೊಡಲಿಲ್ಲ ಎಂದು ಹೋಟೆಲ್ ನ ಸ್ವಾಗತಕಾರರು ಸಮರ್ಥಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+