ಕುಮಾರಸ್ವಾಮಿ ಸಾರಥ್ಯದ 'ನಮ್ಮ ಟೈಗರ್' ಕ್ಯಾಬ್ ಲೋಕಾರ್ಪಣೆ

Posted By:
Subscribe to Oneindia Kannada
   'ನಮ್ಮ ಟೈಗರ್' ಕ್ಯಾಬ್ ಡ್ರೈವರ್ ಮನದಾಳದ ಮಾತು | Oneindia Kannada

   ಬೆಂಗಳೂರು, ನವೆಂಬರ್ 29 : ಮೊಬೈಲ್ ಆ್ಯಪ್ ಆಧಾರಿತ ಕ್ಯಾಬ್ ಸೇವೆ ನೀಡುತ್ತಿರುವ ಓಲಾ ಹಾಗೂ ಊಬರ್ ಸಂಸ್ಥೆಗಳಿಗೆ ಸೆಡ್ಡು ಹೊಡೆದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಚಾಲಕರೇ ಆರಂಭಿಸಿರುವ 'ನಮ್ಮ ಟೈಗರ್' (Namma TYGR) ಕ್ಯಾಬ್ ಸೇವೆ ಇಂದು (ಬುಧವಾರ) ಲೋಕಾರ್ಪಣೆಗೊಂಡಿದೆ.

   ಬೆಂಗಳೂರಿನ ಪುಟ್ಟಣಶೆಟ್ಟಿ ಪುರಭವನ (ಟೌನ್ ಹಾಲ್)ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಎಚ್. ಡಿ ದೇವೇಗೌಡ ಅವರು 'ನಮ್ಮ ಟೈಗರ್' ಕ್ಯಾಬ್ ಸೇವೆಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, "ದುಡಿಯುವ ಕೈಗಳಿಗೆ ಸಹಾಯ ಮಾಡಿದ ಎಲ್ಲಾ ಯುವಕರಿಗೆ, ಈ ಕ್ಯಾಬ್ ಅನ್ನು ಹೊರತರಲು ಸಾಕಷ್ಟು ಶ್ರಮಿಸಿದವರಿಗೆ ಒಳ್ಳೆಯದು ಆಗಲಿ, 'ನಮ್ಮ ಟೈಗರ್ ಕ್ಯಾಬ್' ಯಶಸ್ಸು ಕಾಣಲಿ ಹಾರೈಸಿದರು.

   ನಗರದಲ್ಲಿ ಜನರು ಎದುರಿಸುತ್ತಿರುವ ಸಂಚಾರ ದಟ್ಟಣೆ ಹಾಗೂ ಸಂಚಾರ ಕಿರಿಕಿರಿಗಳನ್ನು ನಿವಾರಿಸಲು ಮಹತ್ತರ ಗುರಿಯೊಂದಿಗೆ ಈ ಟೈಗರ್ ಕ್ಯಾಬ್ ಸೇವೆಯನ್ನು ತರಲಾಗಿದೆ. 'ನಮ್ಮ ಟೈಗರ್' ಕ್ಯಾಬ್ ಸೇವೆಗೆ ಗ್ರಾಹಕರಿಗೆ ತಡೆರಹಿತ ಸೇವೆ ನೀಡಲಿದ್ದು, ಜನಸ್ನೇಹಿ ಕೊಡುಗೆಗಳನ್ನು ಹಾಗೂ ಉನ್ನತ ಮಟ್ಟದ ಸ್ಥಿರತೆ, ಬಹು ಆಯಾಮಗಳ ಪಾವತಿ ವ್ಯವಸ್ಥೆ ಹಾಗೂ ಆದ್ಯಾತೆ ಪಿಕಪ್ ಗಳನ್ನು ಒದಗಿಸಲಿದೆ.

   'ಸದ್ಯಕ್ಕೆ ಅಪ್ಲಿಕೇಷನ್ ಮೂಲಕವೇ ಬುಕಿಂಗ್ ಮಾಡಿಸಿಕೊಳ್ಳಲಾಗುತ್ತಿದೆ. ರಸ್ತೆಯಲ್ಲಿ ನಿಂತು ಲಿಫ್ಟ್‌ ನೀಡಿ ಎಂದು ಕೇಳಿದರೂ ಸೇವೆ ನೀಡಬೇಕು ಎಂದು ತೀರ್ಮಾನಿಸಲಾಗಿದೆ. ಕೆಲ ತಿಂಗಳು ಕಳೆದ ನಂತರ ಇಂತಹ ಸೇವೆಯನ್ನು ಪರಿಚಯಿಸಲಾಗುತ್ತದೆ ಚಾಲಕರ ಮುಖಂಡ ತನ್ವೀರ್ ಪಾಷಾ ತಿಳಿಸಿದರು.

   ಕಿ.ಮೀ.ಗೆ 12.50 ರೂ.

   ಕಿ.ಮೀ.ಗೆ 12.50 ರೂ.

   ''ನಮ್ಮ ಟೈಗರ್‌ನಲ್ಲಿ ಸದ್ಯಕ್ಕೆ ಎರಡು ಬಗೆಯ ಕ್ಯಾಬ್ ಗಳನ್ನು ಪರಿಚಯಿಸಲಾಗಿದೆ. ಮಿನಿ ಕ್ಯಾಬ್ ಗೆ ಪ್ರತಿ ಕಿ.ಮೀ.ಗೆ 12.50 ರೂ., ಸೆಡಾನ್ ನಲ್ಲಿ 14.50 ರೂ., ಹಾಗೂ ಎಸ್‌ಯುವಿನಲ್ಲಿ 18.50 ರೂ. ದರವಿದೆ. ಓಲಾ, ಉಬರ್ ನಲ್ಲಿ ಹಲವು ವಿಭಾಗಗಳಂತೆ ಕಿ.ಮೀ.ಗೆ 6 ರೂ., 8 ರೂ., 10 ರೂ. ದರವಿದೆ. ಆದರೆ ಇಲ್ಲಿ ಗುಣಮಟ್ಟಕ್ಕೆ ಹಾಗೂ ಜನರ ಸೇವೆಗೆ ಆದ್ಯತೆ ನೀಡಲಾಗಿದೆ,'' ಎಂದು ಚಾಲಕರ ಮುಖಂಡ ತನ್ವೀರ್ ಪಾಷಾ ತಿಳಿಸಿದರು.

   10 ಸಾವಿರ ಕ್ಯಾಬ್ ಗಳು ಸಿದ್ಧ

   10 ಸಾವಿರ ಕ್ಯಾಬ್ ಗಳು ಸಿದ್ಧ

   ಈಗಾಗಲೇ 'ನಮ್ಮ ಟೈಗರ್‌' ಆ್ಯಪ್ ಅನ್ನು ಪ್ಲೇಸ್ಟೋರ್ ನಲ್ಲಿ ಬಿಡುಗಡೆ ಮಾಡಲಾಗಿದ್ದು, ಇಂದು ಸಾಂಕೇತಿಕವಾಗಿ ದೇವೇಗೌಡ ಅವರು ಚಾಲನೆ ನೀಡಿದರು. ಮೊಬೈಲ್ ಆಧಾರಿತ ಜನರ ಅಗತ್ಯತೆಗಳನ್ನು ಪೂರೈಸಲು ಸುಸ್ಥಿಯಲ್ಲಿರುವ ಹತ್ತು ಸಾವಿರ ಕ್ಯಾಬ್ ಗಳು ಸಿದ್ಧವಾಗಿದ್ದು, ಅನಗತ್ಯ ಸಂಚಾರ ಕಿರಿಕಿರಿ ಹಾಗೂ ಸಂಚಾರ ದಟ್ಟಣೆಯನ್ನು ಇದು ಸಹಕಾರಿಯಾಗಲಿದೆ ಎಂದು ನಮ್ಮ ಟೈಗರ್ ಕ್ಯಾಬ್ ನ ಸಂಸ್ಥಾಪಕ ಹಾಗೂ ಸಿಇಒ ಆದಿತ್ಯ ಪೊದ್ದರ್ ಹೇಳಿದರು.

   ಟೈಗರ್ ಕ್ಯಾಬ್ ಚಾಲಕರಿಗೆ ವಿಶೇಷ ಸೌಲಭ್ಯಗಳು

   ಟೈಗರ್ ಕ್ಯಾಬ್ ಚಾಲಕರಿಗೆ ವಿಶೇಷ ಸೌಲಭ್ಯಗಳು

   ಟೈಗರ್ ಕ್ಯಾಬ್ ಚಾಲಕರಿಗೆ ವಿಶೇಷ ಸೌಲಭ್ಯಗಳನ್ನು ನೀಡಲಾಗಿದೆ. ಉಚಿತ ಆರೋಗ್ಯ ಸೇವೆ, ಅಪಘಾತ ಮತ್ತು ಜೀವ ವಿಮೆ, ಕಾರು ನಿರ್ವಹಣೆ ಹಾಗೂ ವಾರದ ಎಲ್ಲ ದಿನವೂ 24/7 ಸೇವೆ ಮುಂತಾದ ವಿಶಿಷ್ಟ ಸೌಲಭ್ಯಗಳು ಈ ನಮ್ಮ ಟೈಗರ್ ನ ಪ್ರಮುಖ ಸೇವೆಗಳಾಗಿವೆ.

   ನಮ್ಮ ಟೈಗರ್ ಕ್ಯಾಬ್ ನ ಪ್ರಮುಖ ಸೇವೆಗಳು

   ನಮ್ಮ ಟೈಗರ್ ಕ್ಯಾಬ್ ನ ಪ್ರಮುಖ ಸೇವೆಗಳು

   ನಮ್ಮ ಟೈಗರ್ ಸೇವೆ ದಿನದ 24 ಗಂಟೆಯೂ ಸಾಮಾನ್ಯ ದರದಲ್ಲಿ ಸೇವೆ ಒದಗಿಸಲಿದೆ. ಕೊನೆ ನಿಮಿಷದ ವರೆಗೆ ಯಾವುದೇ ಚಾರ್ಚ್ ಇಲ್ಲದೇ, ಏಕಾಏಕಿ ದರ ವಿಧಿಸದೆ ಉತ್ತಮ ಸೇವೆ ನೀಡಲಿದೆ.

   ನಮ್ಮ ಟೈಗರ್ ಕುರಿತು ಒಂದಿಷ್ಟು ತಿಳಿಯಿರಿ

   ನಮ್ಮ ಟೈಗರ್ ಕುರಿತು ಒಂದಿಷ್ಟು ತಿಳಿಯಿರಿ

   ನಮ್ಮ ಟೈಗರ್ ಎಂಬುವುದು ತಾಂತ್ರಿಕವಾಗಿ ವಿಕಸನಗೊಂಡ ಒಮ್ನಿ ಸಾರಿಗೆ ಒದಗಿಸುವ ಬಾರತದ ಮೂಲದ ಸಂಸ್ಥೆಯಾಗಿದೆ. ಇದು ರಾಷ್ಟ್ರಮಟ್ಟದ ಪ್ರಯಾಣಿಕ ಸಾರಿಗೆಗೆ ಬಾಡಿಗೆ ವಾಹನಗಳನ್ನು ಒದಗಿಸುವ ನೆಟ್ ವರ್ಕ್ ಅಭಿವೃದ್ಧಿಪಡಿಸುವ ಉದ್ಯಮದಲ್ಲಿ ತೊಡಗಿಕೊಂಡು ಗ್ರಾಹಕರ ಬೇಡಿಕೆಗಳಿಗೆ ಅನುಗುಣವಾಗಿ ಸೇವೆ ಸಲ್ಲಿಸುತ್ತಿದೆ.

   ಹುಲಿ ಟೆಕ್ನಾಲಜೀಸ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಗೆ

   ಹುಲಿ ಟೆಕ್ನಾಲಜೀಸ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಗೆ

   ಶೀಘ್ರದಲ್ಲಿಯೇ ರಸ್ತೆಗಿಳಿಯಲಿರುವ ನಮ್ಮ ಟೈಗರ್ ಕ್ಯಾಬ್ ಗಳ ನಿರ್ವಹಣೆ ಹೊಣೆಯನ್ನು ಕೋಲ್ಕತ್ತಾ ಮೂಲದ ಹುಲಿ ಟೆಕ್ನಾಲಜೀಸ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಗೆ ವಹಿಸಲಾಗಿದೆ.

   Namma TYGR ಆ್ಯಪ್ ಡೌನ್ ಲೋಡ್ ಹೇಗೆ?

   Namma TYGR ಆ್ಯಪ್ ಡೌನ್ ಲೋಡ್ ಹೇಗೆ?

   Namma TYGR ಎಂದು ಪ್ಲೇಸ್ಟೋರ್ ನಲ್ಲಿ ಟೈಮ್ ಮಾಡಿ. ಬಳಿಕ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಬೇಕು. ತದನಂತರ ಇನ್ ಸ್ಟಾಲ್ ಮಾಡಿಕೊಂಡು ನಂತರ ನೀವು ಪ್ರಯಾಣಿಸಬೇಕಾದ ವಿಳಾಸ ನಮೂದಿಸಬೇಕು.

   ಟೈಗರ್ ಆ್ಯಪ್ ಅನ್ನು ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ಕಿಸಿ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Former Karnataka Chief Minister HD Kumaraswamy led 'Namma TYGR' Cab service launched by JD(S) supremo H D Deve Gowda in Town Hall, Bengaluru on November 29.The app can be downloaded by typing Namma TYGR on Google Play Store.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ