ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜಕೀಯಕ್ಕೆ ಬರಲು ಗೀತಾಗೆ ಯಾರು ಪ್ರೇರಣೆ?

By Rajendra
|
Google Oneindia Kannada News

*ನಿಮ್ಮ ಸೋದರ ಬೇರೆ ಪಕ್ಷದಲ್ಲಿದ್ದಾರೆ, ನೀವು ಅವರ ವೈಯಕ್ತಿಕ ಸಪೋರ್ಟ್ ಕೇಳ್ತೀರಾ?
ಇಲ್ಲ ನಾನು ಕೇಳಲ್ಲ. ಅವರು ಎಷ್ಟೇ ಆಗಲಿ ನನ್ನ ಸೋದರ. ಹಾಗಂತ ಅವರ ನಿಲುವುಗಳಿಗೆ ನಾನು ಅಡ್ಡಿಪಡಿಸುವುದಿಲ್ಲ. ಅವರದೇ ಆದಂತಹ ವೈಯಕ್ತಿಕ ವಿಚಾರಗಳಿರುತ್ತದೆ. ನಾನು ಬೇರೆ ಪಕ್ಷದಲ್ಲಿರುವ ಕಾರಣ ಅವರ ಸಪೋರ್ಟ್ ಕೇಳುವ ಅಗತ್ಯವಿಲ್ಲ.

*ನಿಮ್ಮ ಕ್ಷೇತ್ರಕ್ಕೆ ನೀವೇನು ಮಾಡಬೇಕೆಂದಿದ್ದೀರಿ? ನಿಮ್ಮ ಗೊತ್ತು ಗುರಿ ಏನು?
ಅಲ್ಲಿ ವಿದ್ಯುತ್ ಸಮಸ್ಯೆ ಹೆಚ್ಚಾಗಿದೆ. ಮಹಿಳೆಯರಿಗೆ ಪ್ರಾತಿನಿಧ್ಯ ಕೊಡಬೇಕು ಎಂಬ ಆಸೆ ನನಗಿದೆ. ಗ್ರಾಮೀಣ ಜನತೆಗೆ ಇನ್ನಷ್ಟು ಸೌಲಭ್ಯಗಳನ್ನು ಕೊಡಬೇಕೆಂದಿದ್ದೇನೆ. ಇದೆಲ್ಲದರ ಜೊತೆಗೆ ನಮ್ಮ ತಂದೆಯವರ ಕೆಲಸಗಳನ್ನು ಮುಂದುವರೆಸಿಕೊಂಡು ಹೋಗುತ್ತೇನೆ.

Elections 2014: An interview with Geetha Shivrajkumar

*ಶಿವಮೊಗ್ಗ ಕ್ಷೇತ್ರದಲ್ಲಿ ಗಂಭೀರ ಸಮಸ್ಯೆಗಳೇನು?
ಅಡಿಕೆ ಬೆಳೆಗಾರರ ಸಮಸ್ಯೆಗಳಿರಬಹುದು, ಎಲೆಕ್ಟ್ರಿಸಿಟಿ ಸಮಸ್ಯೆ ಸ್ವಲ್ಪ ಗಂಭೀರವಾಗಿಯೇ ಇದೆ. ಇವಿಷ್ಟು ಅಲ್ಲಿ ಗಂಭೀರವಾಗಿದೆ. ಇದರ ಜೊತೆಗೆ ಇನ್ನಷ್ಟು ಸಮಸ್ಯೆಗಳಿವೆ ಅವು ಏನು ಎಂಬುದನ್ನು ತಿಳಿದುಕೊಂಡು ಮುಂದಿನ ಹೆಜ್ಜೆ ಇಡುತ್ತೇನೆ.

*ರಾಜಕೀಯಕ್ಕೆ ಬರಲು ನಿಮಗೆ ಯಾರು ಪ್ರೇರಣೆ?
ನಮ್ಮ ತಾಯಿಯವರ ಆಸೆಯನ್ನು ಈಡೇರಿಸುವ ಒಂದೇ ಒಂದು ಕಾರಣಕ್ಕಾಗಿ ನಾನು ರಾಜಕೀಯಕ್ಕೆ ಬಂದಿದ್ದೇನೆ. ಅದು ಬಿಟ್ಟು ಇನ್ಯಾವ ಉದ್ದೇಶವೂ ಇಲ್ಲ.

*ಶಿವಮೊಗ್ಗದಲ್ಲಿ ನೀವು ಹೇಗೆ ತಳಮಟ್ಟದ ಹೋರಾಟಕ್ಕೆ ಸಿದ್ಧರಾಗಿದ್ದೀರಿ?
ಮಾರ್ಚ್ 27ರಂದು ನಾನು ನಾಮಿನೇಷನ್ ಫೈಲ್ ಮಾಡುತ್ತಿದ್ದೇನೆ. ಅದಾದ ಬಳಿಕ ಜನರನ್ನು ವೈಯಕ್ತಿಕವಾಗಿ ಭೇಟಿ ಮಾಡುತ್ತೇನೆ. ಗ್ರಾಮಪಂಚಾಯಿತಿ ಮಟ್ಟದಿಂದ ನಾನು ಕೆಲಸ ಕಾರ್ಯಗಳನ್ನು ಮಾಡಲು ಬಯಸುತ್ತೇನೆ.

*ಮುಂದೆ ಬೇರೆ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಆಲೋಚನೆ ಇದೆಯೇ?
ನಾನು ಏನೇ ಆದರೂ ಮುಂದೆಯೂ ರಾಜಕೀಯದಲ್ಲಿರುತ್ತೇನೆ. ನನ್ನದು ಏನಿದ್ದರೂ ಶಿವಮೊಗ್ಗ ಪಾಲಿಟಿಕ್ಸ್ ಅಷ್ಟೇ. ಅದು ಬಿಟ್ಟು ಬೇರೆಲ್ಲೂ ಮುಂದೆ ಸ್ಪರ್ಧಿಸಲ್ಲ.

*ನೀವು ಯಾವಗಲೂ ಬೆಂಗಳೂರಲ್ಲೇ ಇರುತ್ತೀರಿ ಶಿವಮೊಗ್ಗ ಸಮಸ್ಯೆಗಳನ್ನು ಹೇಗೆ ಬಗೆಹರಿಸುತ್ತೀರಾ?
ನಾನು ಹುಟ್ಟಿ ಬೆಳೆದದ್ದೆಲ್ಲಾ ಶಿವಮೊಗ್ಗದಲ್ಲೇ. ನಮ್ಮ ತಂದೆಯವರ ಕಾಲದಲ್ಲೇ ನಾನು ಪ್ರಚಾರದಲ್ಲಿ ತೊಡಗಿಕೊಂಡಿದ್ದೆ. ಅದು ನನ್ನ ತವರೂರು. ನನಗೆ ಅಲ್ಲಿ ನಿಕಟ ಸಂಪರ್ಕ ಇದ್ದೇ ಇದೆ.

*ಜೆಡಿಎಸ್ ಪಕ್ಷವನ್ನು ಹಲವಾರು ಜನ ಬಿಟ್ಟು ಬಂದಿದ್ದಾರೆ? ಮುಂದೆ ದೇವೇಗೌಡರು ನಿಮಗೆ ತೊಂದರೆ ಕೊಟ್ಟರೆ ನೀವೇನು ಮಾಡ್ತೀರಿ?
ನನಗೆ ಆ ರೀತಿ ಅನ್ನಿಸುತ್ತಿಲ್ಲ. ನಾನು ಯಾರಿಗೂ ತೊಂದರೆ ಮಾಡಿಲ್ಲ. ನನಗೇಕೆ ಅವರು ತೊಂದರೆ ಕೊಡ್ತಾರೆ?

*ಸೊರಬದಲ್ಲಿ ಪ್ರಮುಖ ಸಮಸ್ಯೆ ಎಂದರೆ ದಂಡಾವತಿ ಯೋಜನೆ? ಈ ಬಗ್ಗೆ ನಿಮ್ಮ ನಿಲುವೇನು?
ಈ ಯೋಜನೆಯನ್ನು ಇನ್ನಷ್ಟು ಜನಕ್ಕೆ ಮುಟ್ಟಿಸಬೇಕೆ ಎಂಬ ಯೋಚನೆ ಇದೆ. ಮುಂದೆ ನಾನು ಗೆದ್ದರೆ ಆ ಬಗ್ಗೆ ಎಲ್ಲಾ ರಾಜಕೀಯ ಮುಖಂಡರೊಂದಿಗೆ ಚರ್ಚಿಸಿ ಮುಂದಿನ ಹೆಜ್ಜೆ ಇಡುತ್ತೇನೆ.

*ಆ ಯೋಜನೆ ಈಗಾಗಲೆ ಸಾಧ್ಯವಿಲ್ಲ ಎಂದು ವರದಿ ಹೇಳುತ್ತಿದ್ದೆ?
ಈ ಯೋಜನೆ ಬಗ್ಗೆ ನನಗೂ ಒಂದಷ್ಟು ಅರಿವಿದೆ. ಈಗ ಆ ಬಗ್ಗೆ ಮಾತನಾಡಲು ನನಗೆ ಇಷ್ಟವಿಲ್ಲ. ಎಲೆಕ್ಷನ್ ಮುಗೀಲಿ ಆ ಬಳಿಕ ನೋಡೋಣ.

*ಮುಂದೆ ನಿಮ್ಮ ಮಕ್ಕಳು ರಾಜಕೀಯಕ್ಕೆ ಬಂದರೆ ಒಪ್ತೀರಾ?
ಅವರಿಗೆ ಇಷ್ಟ ಇದ್ದು ಬರ್ತೀನಿ ಎಂದರೆ ನಮ್ಮದೇನು ಅಭ್ಯಂತರವಿಲ್ಲ. ಅದು ಅವರಿಗೆ ಬಿಟ್ಟಿದ್ದು.

*ನನಗೆ ಎದುರಾಳಿ ಯಾರೂ ಇಲ್ಲ ಎಂದು ಇತ್ತೀಚೆಗೆ ಹೇಳಿದ್ದೀರಿ?
ಇಲ್ಲ ನಾನು ಹಾಗಲ್ಲ ಹೇಳಿದ್ದು, ನನ್ನ ಎದುರಾಳಿಗಳ ಬಗ್ಗೆ ನನಗೆ ಭಯವಿಲ್ಲ ಎಂದು ಹೇಳಿದ್ದೆ ಅಷ್ಟೇ. ಎದುರಾಳಿ ಯಾರೂ ಇಲ್ಲ ಎಂದು ಎಲ್ಲೂ ಹೇಳಿಲ್ಲ.

English summary
Shimoga Lok Sabha constituency, Elections 2014: Late legend Dr Rajkumar daughter-in-law Geetha Shivrajkumar (Former CM late Bangarappa's daughter) contesting from JD(S). Here is an interview with Geetha Shivrajkumar, who inspired Geetha to enters politics?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X