ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗ ಜೆಡಿಎಸ್ ಅಭ್ಯರ್ಥಿ ಗೀತಾ ಶಿವಣ್ಣ ಸಂದರ್ಶನ

By Rajendra
|
Google Oneindia Kannada News

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಚುನಾವಣಾ ಕಣಕ್ಕೆ ಇಳಿಯುತ್ತಿರುವುದು ಗೊತ್ತೇ ಇದೆ. ಗೀತಾ ಶಿವರಾಜ್ ಕುಮಾರ್ ಜೆಡಿಎಸ್ ನಿಂದ ಶಿವಮೊಗ್ಗ ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ತಿದ್ದಾರೆ.

ಯಥೇಚ್ಛ ನೈಸರ್ಗಿಕ ಸೌಂದರ್ಯವನ್ನು ತುಂಬಿಕೊಂಡಿರುವ ಶಿವಮೊಗ್ಗ ಜಿಲ್ಲೆ ಕರ್ನಾಟಕದ ಅನ್ನದ ಬಟ್ಟಲು ಎನ್ನಿಸಿಕೊಂಡಿದೆ. ಅವರ ಕ್ಷೇತ್ರ, ರಾಜಕೀಯ ಪ್ರವೇಶಕ್ಕೆ ಸಂಬಂಧಿಸಿದಂತೆ ಮಾತಿಗೆಳೆದಾಗ ಅವರು ತಮ್ಮ ಮುಂದಿನ ರಾಜಕೀಯದ ಬಗ್ಗೆ ಮನಬಿಚ್ಚಿ ಮಾತನಾಡಿದರು. ಅವರೊಂದಿಗೆ ನಡೆಸಿದ ಸಂದರ್ಶನದ ಆಯ್ದ ಕೆಲವು ಪ್ರಶ್ನೋತ್ತರಗಳು ಇಲ್ಲಿವೆ.

*ಯಡಿಯೂರಪ್ಪ ಅವರು ಪ್ರಬಲ ಸ್ಪರ್ಧಿ ಅನ್ನಿಸುತ್ತಿಲ್ಲವೇ?
ನಾನು ಆ ರೀತಿ ಅಂದುಕೊಂಡೇ ಇಲ್ಲ. ತುಂಬ ಹಿರಿಯ ರಾಜಕಾರಣಿ. ಅವರ ಬಗ್ಗೆ ನನಗೆ ಗೌರವ ಇದೆ. ಒಂದು ವೇಳೆ ಅವರು ಸ್ಪರ್ಧಿಸದಿದ್ದರೆ ಇನ್ನೊಬ್ಬರು ಬರುತ್ತಿರಲಿಲ್ಲವೇ? ಯಾರೋ ಒಬ್ಬರ ಮುಂದೆ ನಾನು ಸ್ಪರ್ಧಿಸಲೇಬೇಕಲ್ಲವೇ?

*ದೇವೇಗೌಡರ ಚದುರಂಗದಾಟದಲ್ಲಿ ನೀವು ದಾಳವಾಗಿದ್ದೀರಾ?
ಇಲ್ಲವೇ ಇಲ್ಲ. ನಾನು ನಮ್ಮ ತಂದೆಯವರ ಕೆಲಸ ಮುಂದುವರಿಸಬೇಕೆಂದಿದ್ದೇನೆ. ನಮ್ಮ ತಾಯಿಯವರ ಆಸೆ ಕೂಡ ಅದೇ. ಯಾವುದೇ ದುರುದ್ದೇಶದಿಂದ ರಾಜಕೀಯಕ್ಕೆ ಬಂದಿಲ್ಲ.

*ಮುಂದೆ ಎದುರಾಗುವ ಸಮಸ್ಯೆಗಳನ್ನು ಎದುರಿಸಲು ಮಾನಸಿಕವಾಗಿ ಸಿದ್ಧರಾಗಿದ್ದೀರಾ?
ನನಗೇನು ಆ ರೀತಿಯ ಸಮಸ್ಯೆಗಳು ಕಾಣುತ್ತಿಲ್ಲ. ನನ್ನ ಬಗ್ಗೆ ಅವರು ಏನೂ ಮಾತನಾಡುವುದಕ್ಕೂ ಆಗಲ್ಲ. ಏಕೆಂದರೆ ನಾನು ಆ ರೀತಿ ತಪ್ಪು ಮಾಡಿಲ್ಲ ಅಲ್ವಾ?

*ಬಂಗಾರಪ್ಪ ಅವರ ಕುಟುಂಬಿಕರನ್ನೇ ಬಳಸಿಕೊಂಡು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ದೇವೇಗೌಡ ಮಾಸ್ಟರ್ ಪ್ಲಾನ್ ಮಾಡಿದ್ದಾರೆ ಅನ್ನಿಸುವುದಿಲ್ಲವೇ?
ನಮ್ಮ ಕುಟುಂಬದಿಂದ ನಾಲ್ಕು ಜನರಿಂದ ಯಾರಾದರೊಬ್ಬರು ಸ್ಪರ್ಧಿಸಬೇಕು ಎಂದಿತ್ತು. ನಮ್ಮ ತಾಯಿಯವರ ಆರೋಗ್ಯ ಸರಿಯಿಲ್ಲದೇ ಇರುವ ಕಾರಣ ನನ್ನನ್ನು ನಿಲ್ಲಿಸುತ್ತಿದ್ದಾರೆ. ಇದರಲ್ಲಿ ಬೇರೆ ಏನೂ ಅರ್ಥ ಕಲ್ಪಿಸಬೇಕಾಗಿಲ್ಲ.

*ಯಡಿಯೂರಪ್ಪ ಅವರ ವಿರುದ್ಧ ಬಂಗಾರಪ್ಪ ಸೋತಿದ್ದರು. ಈ ಬಾರಿ ಗೆಲ್ಲುತ್ತೀನಿ ಎಂದು ಯಾವ ವಿಶ್ವಾಸ, ಲೆಕ್ಕಾಚಾರ ನಿಮ್ಮದು?
ನನಗೆ ನಮ್ಮ ತಂದೆ ಮಾಡಿರುವ ಕೆಲಸಗಳು, ನಾನು ಮಾಡಬೇಕು ಎಂಬ ಆಸೆಗಳಿವೆ. ನಮ್ಮ ತಂದೆಯವರು ಏನೆಲ್ಲಾ ಮಾತನಾಡಿದ್ದರು ಎಂಬುದು ನನಗೆ ಗೊತ್ತಿರುವುದರಿಂದ. ಅಲ್ಲಿನ ಸಮಸ್ಯೆಗಳೇನು ಎಂಬುದು ನನಗೂ ಗೊತ್ತು. ಅದೆಲ್ಲಕ್ಕಿಂತಲೂ ಹೆಚ್ಚಾಗಿ ಶಿವಮೊಗ್ಗ ಜನತೆಗೆ ನಾವು ಎಂಥಹವರು ಎಂದು ಗೊತ್ತು.

*ತಂದೆಯ ಅನುಕಂಪವನ್ನು ಲಾಭ ಮಾಡಿಕೊಳ್ಳಲು ತಾವು ಹೊರಟಿದ್ದೀರಾ?
ಹಾಗ್ಯಾಕೆ ಅಂದುಕೊಳ್ಳಬೇಕು. ನಮ್ಮ ತಂದೆ ಮಾಡಿರುವ ಕೆಲಸಗಳು ಅದನ್ನೇ ನಾನು ಮುಂದಿಟ್ಟುಕೊಂಡು ರಾಜಕೀಯಕ್ಕೆ ಬರುತ್ತಿದ್ದೇನೆ. ಅವರು ಇನ್ನೂ ಮಾಡಬೇಕೆಂದಿದ್ದ ಕೆಲಸಗಳನ್ನು ಅವರ ಮಗಳಾಗಿ ನಾನು ನೆರವೇರಿಸುತ್ತೇನೆ. ಇದನ್ನು ಅನುಕಂಪ ಎಂದೇಕೆ ಭಾವಿಸುತ್ತೀರಿ.

*ಪದೇ ಪದೇ ಅನುಕಂಪ ಎನ್ನುವುದು ವರ್ಕ್ ಔಟ್ ಆಗುತ್ತದೆಯೇ?
ಇದನ್ನು ನಾನು ಹೇಳುವುದಕ್ಕಿಂತ ನೀವು ಜನತೆಯನ್ನೇ ಕೇಳಿದರೆ ಉತ್ತರ ಸಿಗುತ್ತದೆ. ಮುಂದೆ ಓದಿ ರಾಜಕೀಯಕ್ಕೆ ಬರಲು ಗೀತಾಗೆ ಯಾರು ಪ್ರೇರಣೆ?

English summary
Shimoga Lok Sabha constituency, Elections 2014: Late legend Dr Rajkumar daughter-in-law Geetha Shivrajkumar (Former CM late Bangarappa's daughter) contesting from JD(S). Here is an interview with Geetha Shivrajkumar, who inspired Geetha to enters politics?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X