Get Updates
Get notified of breaking news, exclusive insights, and must-see stories!

ಬೆಂಗಳೂರು -ಚೆನ್ನೈ ಹೈಸ್ಪೀಡ್ ರೈಲು ಯೋಜನೆಗೆ ಚೀನಾ ಅಡ್ಡಗಾಲು

ಬೆಂಗಳೂರು, ಅಕ್ಟೋಬರ್ 16: ದಕ್ಷಿಣ ಭಾರತದ ಪ್ರಮುಖ ನಗರಗಳಾದ ಚೆನ್ನೈ-ಬೆಂಗಳೂರು-ಮೈಸೂರು ನಡುವೆ ತ್ವರಿತಗತಿಯಲ್ಲಿ ಸಂಪರ್ಕ ಸಾಧಿಸುವ ಭಾರತದ ಯೋಜನೆಗೆ ಚೀನಾ ಅಡ್ಡಗಾಲು ಹಾಕಿದೆ.

ಡೋಕ್ಲಂ ಗಡಿ ಬಿಕ್ಕಟ್ಟಿನ ವಿಚಾರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚೀನಾಕ್ಕೆ ಮುಖಭಂಗವಾಗಿದೆ. ಈ ಹಿನ್ನಲೆಯಲ್ಲಿ ಚೀನಾದ ಸರ್ಕಾರಿ ಸ್ವಾಮ್ಯದ China Railway Eryuan Engineering Group Co Ltd (ಸಿಆರ್​ಇಇಸಿ) ಕಂಪನಿ, ಹೈಸ್ಪೀಡ್ ರೈಲು ಯೋಜನೆ ಕೈಗೆತ್ತಿಕೊಳ್ಳಲು ಹಿಂದೇಟು ಹಾಕಿರುವ ಸುದ್ದಿ ಬಂದಿದೆ.

Doklam effect? China puts Chennai-Bengaluru high speed train project on backburner

ಚೀನಾ, ಜರ್ಮನಿ, ಜಪಾನ್ ಸೇರಿ ಹಲವು ರಾಷ್ಟ್ರಗಳ ಕಂಪನಿಗಳು ಹೈಸ್ಪೀಡ್ ರೈಲು ಯೋಜನೆ ಬಗ್ಗೆ ಆಸಕ್ತಿ ತೋರಿ ಎರಡು ವರ್ಷಗಳು ಕಳೆದಿವೆ. ಅಹಮದಾಬಾದ್- ಮುಂಬೈ ಹೈಸ್ಪೀಡ್ ರೈಲು ಯೋಜನೆ, ಬುಲೆಟ್ ರೈಲು ಕೂಡಾ ಜಪಾನ್ ಕಂಪನಿ ಪಾಲಾಗಿದೆ.

ಆದರೆ, 2016ರಲ್ಲಿ ಅಧ್ಯಯನ ವರದಿ ಸಲ್ಲಿಸಿದ ಚೀನಾ ಕಂಪನಿಯು 510 ಕಿ.ಮೀ. ಉದ್ದದ ಕಾರಿಡಾರ್ ಯೋಜನೆ ಸಿದ್ಧಪಡಿಸಿತ್ತು. ಈ ಯೋಜನೆ ಸಾಕಾರಗೊಂಡರೆ, ಸುಮಾರು 150 ಕಿ.ಮೀ. (ಉದಾ: ಮೈಸೂರು- ಬೆಂಗಳೂರು) ದೂರವನ್ನು ಅಂದಾಜು 30 ನಿಮಿಷಗಳಲ್ಲಿ ಕ್ರಮಿಸಬಹುದು ಎಂದು ವರದಿಯನ್ನು ಭಾರತೀಯ ರೈಲ್ವೆಗೆ ನೀಡಲಾಗಿತ್ತು.

ಇದೇ ರೀತಿ ಸುಮಾರು 360 ಕಿ.ಮೀ.(ಬೆಂಗಳೂರು- ಚೆನ್ನೈ) ಪಯಣಕ್ಕೆ 60 ನಿಮಿಷ ಸಾಕು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಬೆಂಗಳೂರು-ಚೆನ್ನೈ-ಮೈಸೂರು ಕಾರಿಡಾರ್ ಅಲ್ಲದೆ ಇನ್ನೂ 9 ಹೈಸ್ಪೀಡ್ ರೈಲು ಯೋಜನೆಗೆ ಸಚಿವಾಲಯ ಸಿದ್ಧತೆ ನಡೆಸಿದೆ. ಹಾಲಿ 80 ಕಿ.ಮೀ ಪ್ರತಿ ಗಂಟೆ ವೇಗದಲ್ಲಿ ಚಲಿಸುವ ರೈಲುಗಳು 160 ಕಿ.ಮೀ ಪ್ರತಿ ಗಂಟೆ ವೇಗಕ್ಕೆ ಬದಲಾಗಲಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+