ಟಾಟಾ ಸಂಸ್ಥೆ - ನೀರಾ ರಾಡಿಯಾ ಸಂಬಂಧ ಕೆದಕಿದ ಮಿಸ್ತ್ರಿ

Posted By:
Subscribe to Oneindia Kannada

ಮುಂಬೈ, ನವೆಂಬರ್ 16: ಟಾಟಾ ಸನ್ಸ್‌ ಕಂಪನಿ ಅಧ್ಯಕ್ಷ ಹುದ್ದೆಯಿಂದ ವಜಾಗೊಂಡಿರುವ ಸೈರಸ್‌ ಮಿಸ್ತ್ರಿ ಅವರು ಮಾಧ್ಯಮಗಳ ಲಾಬಿಗಾರ್ತಿ ನೀರಾ ರಾಡಿಯಾ ಹಾಗೂ ಟಾಟಾ ಸಂಸ್ಥೆಯ ಜತೆಗಿನ ಸಂಬಂಧವನ್ನು ಮತ್ತೆ ಕೆದಕಿದ್ದಾರೆ.

2ಜಿ ತರಂಗಾಂತರ ವಿತರಣೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಲಾಬಿಗಾರ್ತಿ ನೀರಾ ರಾಡಿಯಾ ಅವರಿಗೆ ಟಾಟಾ ಸನ್ಸ್ ನಿಂದ ವಾರ್ಷಿಕವಾಗಿ 40 ಕೋಟಿ ರುಪಾಯಿ ಪಾವತಿ ಮಾಡಲಾಗಿತ್ತು. ನೀರಾ ರಾಡಿಯಾ ಫೋನ್ ಕದ್ದಾಲಿಕೆ ಪ್ರಕರಣ ಬೆಳಕಿಗೆ ಬಂದ ನಂತರ ರಾಡಿಯಾ ತನ್ನ ವೈಷ್ಣವಿ ಕಾರ್ಪೊರೇಟ್ ಕಮ್ಯುನಿಕೇಶನ್ಸ್ ಸಂಸ್ಥೆಯನ್ನು ಸ್ಥಗಿತಗೊಳಿಸಿದ್ದರು. [ನೀರಾ ರಾಡಿಯಾ ಎಂಬ ಅನಂತ ಶಕ್ತಿಯ ರತುನ]

Cyrus P Mistry Hits out at Tata Sons takes Niira Radia Arun Nanda Names

ಟಾಟಾ ಮತ್ತು ರಿಲಯನ್ಸ್ ಕಂಪನಿಗಳಿಗೆ ಸಾರ್ವಜನಿಕ ಸಂಪರ್ಕ ಸೇವೆ ಒದಗಿಸುತ್ತಿದ್ದ ನೀರಾ ರಾಡಿಯಾ ವ್ಯವಹಾರ ಸ್ಥಗಿತಗೊಳಿಸಿದ ನಂತರ ಟಾಟಾ ಕಂಪನಿ ಅರುಣ್ ನಂದಾ ಒಡೆತನದ ರೆಡಿಫ್ಯೂಶಿಯನ್ ಎಡೆಲ್ ಮನ್ ಸಂಸ್ಥೆಯೊಂದಿಗೆ ತನ್ನ ಸಾರ್ವಜನಿಕ ಸಂಪರ್ಕ ಸೇವೆಯ ಒಪ್ಪಂದ ಆರಂಭಿಸಿತ್ತು. [ಟಾಟಾ ಸಂಸ್ಥೆ ಮಾರುಕಟ್ಟೆ ಮೌಲ್ಯ 55 ಸಾವಿರ ಕೋಟಿ ರು ಕುಸಿತ]

ಟಾಟಾ ಕಂಪನಿ ವರ್ಷಕ್ಕೆ 60 ಕೋಟಿ ರೂಪಾಯಿ ಪಾವತಿ ಮಾಡುತ್ತಿತ್ತು. ಇದೆಲ್ಲವೂ ಮಿಸ್ತ್ರಿ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುವ ಮುಂಚೆ ನಡೆದಿತ್ತು ಎಂದು ಮಿಸ್ತ್ರಿಯವರ ಕಚೇರಿ ಹೇಳಿದೆ. ಇದಲ್ಲದೆ ನಾರ್ಗಾಜುನ ರಿಫೈನರೀಸ್ ಜತೆ 400 ಕೋಟಿ ರು ಒಪ್ಪಂದ ಮಾಡಿಕೊಂಡಿರುವುದು, ಪಿಯಾಜಿಯೋ ಏರೋ ಸಂಸ್ಥೆಯ ನಷ್ಟಕ್ಕೂ ಮಿಸ್ತ್ರಿ ಅವರಿಗೂ ಸಂಬಂಧವಿಲ್ಲ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Hitting out at Tata Sons for the holding company's allegations over expenses and impairment through a full-page newspaper advertising, the office of Cyrus P Mistry says For PR, Rs40 crore to Niira Radia earlier, Rs60 crore to Arun Nanda now and Rs30 crore for Ratan Tata’s expenses…
Please Wait while comments are loading...