ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐಪಿಎಸ್ ಗೋಯಲ್ ಗೆ ಆಫರ್, ಟ್ರಾಲ್ ಹೈಕ್ಳು ಅಡ್ಮಿನ್ ಆಗ್ತೀರಾ?

By Mahesh
|
Google Oneindia Kannada News

ಬೆಂಗಳೂರು, ಆಗಸ್ಟ್ 04: ಚಳಿ, ಮಳೆ, ಗಾಳಿ ಲೆಕ್ಕಿಸದೆ ಅವಿರತವಾಗಿ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಸರಿಪಡಿಸುವ ಪೊಲೀಸರು, ಈ ಡಿಜಿಟಲ್ ಯುಗದಲ್ಲಿ ಕಾಲಕ್ಕೆ ತಕ್ಕಂತೆ ಫೇಸ್ ಬುಕ್, ಟ್ವಿಟ್ಟರ್ ಬಳಸಿ ಜನ ಜಾಗೃತಿ ಮೂಡಿಸುತ್ತಿದ್ದಾರೆ.

ಅದರಲ್ಲೂ ಬೆಂಗಳೂರು ಟ್ರಾಫಿಕ್ ಪೊಲೀಸರು ಈ ವಿಷಯದಲ್ಲಿ ಮುಂದಿದ್ದಾರೆ. ಪೂರ್ವ ವಲಯದ ಡಿಸಿಪಿ ಅಭಿಶೇಕ್ ಗೋಯಲ್ ಅವರ ಟ್ವೀಟ್ ಈಗ ಭಾರಿ ಸದ್ದು ಮಾಡುತ್ತಿದೆ.[ಬಲಿಗಾಗಿ ಕಾದಿವೆ, ಬೆಂಗ್ಳೂರ್ ರಸ್ತೆಗುಂಡಿಗಳು]

'ನಮ್ಮ ಹೊಸ ವ್ಯಾಲೆಟ್ ಸೇವೆಗೆ ಸ್ವಾಗತ, ಟ್ರಾಫಿಕ್ ಪೀಕ್ ಸಂದರ್ಭದಲ್ಲಿ ಈ ಸೇವೆ ಲಭ್ಯವಿರುತ್ತದೆ. ನಿಮ್ಮ ವಾಹನವನ್ನು ಎಲ್ಲೆಂದರಲ್ಲಿ ಬಿಟ್ಟು ಹೊರಡಿ, ನಾವು ಮುಂದಿನದ್ದು ನೋಡಿಕೊಳ್ಳುತ್ತೇವೆ' ಎಂದು ಹಾಸ್ಯಭರಿತವಾಗಿ ಅಭಿಶೇಕ್ ಗೋಯಲ್ ಅವರು ಟ್ವೀಟ್ ಮಾಡಿದ್ದರು.[ಸಂಚಾರ ದಟ್ಟಣೆಗೆ ಸ್ವಯಂಚಾಲಿತ ಸಿಗ್ನಲ್‌ ವ್ಯವಸ್ಥೆ]

ಸಾಮಾನ್ಯವಾಗಿ ಸರ್ಕಾರಿ ಪ್ರಕಟಣೆಗಳು, ಟ್ರಾಫಿಕ್ ಪೊಲೀಸರ ನಿಯಮಾವಳಿಗಳ ಬಗ್ಗೆ ಘೋಷಣೆಗಳು ಯಾವುದೇ ಸತ್ವವಿಲ್ಲದ ಬರಹಗಳನ್ನು ಹೊಂದಿರುತ್ತದೆ. ಆದರೆ, ಇಂಥ ಸಂದೇಶಗಳಿಗೆ ಸ್ವಲ್ಪ ಉಪ್ಪು ಹುಳಿ ಖಾರ ಬೆರೆಸಿ ಜನರಿಗೆ ತಟ್ಟುವಂತೆ ಮುಟ್ಟಿಸುವಲ್ಲಿ ಅಭಿಶೇಕ್ ಅವರು ಯಶಸ್ವಿಯಾಗಿದ್ದಾರೆ. [ಟ್ರಾಫಿಕ್ ಪೊಲೀಸರ ಕಣ್ಣಿಗೆ ಬಿದ್ದ ಅಂಪೈರ್ ಜಾನ್]

ಅಭಿಶೇಕ್ ಅವರ ಟ್ವೀಟ್ ಗೆ ಭಾರಿ ಪ್ರತಿಕ್ರಿಯೆಗಳು ಬಂದಿವೆ. ಕೆಲವರು ಸಲಹೆ, ಸೂಚನೆ ನೀಡಿದ್ದರೆ, ಮತ್ತೆ ಕೆಲವರು ಟ್ರಾಫಿ ಪೊಲೀಸರು, ಟೋಯಿಂಗ್ ಮಾಡುವ ಟೈಗರ್ ವಾಹನ ಸಿಬ್ಬಂದಿಗಳ ವರ್ತನೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಎಲ್ಲದರ ನಡುವೆ ಜನಪ್ರಿಯ ಟ್ರಾಲ್ ಪೇಜ್ ಟ್ರಾಲ್ ಹೈಕ್ಳು ಅವರು ಸಾರ್ ನಮ್ಮ ಟ್ರಾಲ್ ಪೇಜ್ ಆಡ್ಮಿನ್ ಆಗುತ್ತೀರಾ ಎಂದು ಪ್ರಶ್ನೆ ಹಾಕಿದ್ದಾರೆ.

ಅಭಿಶೇಕ್ ಅವರ ಟ್ವೀಟ್ ಗೆ ಬಂದಿರುವ ಪ್ರತಿಕ್ರಿಯೆ

ಅಭಿಶೇಕ್ ಅವರ ಟ್ವೀಟ್ ಗೆ ಬಂದಿರುವ ಪ್ರತಿಕ್ರಿಯೆ

ಅಭಿಶೇಕ್ ಗೋಯಲ್ ಅವರು ತಮ್ಮ ವೈಯಕ್ತಿಕ ಟ್ವೀಟ್ ಖಾತೆ (@goyal_abhei)ಯಿಂದ ಈ ರೀತಿ ಟ್ವೀಟ್ ಮಾಡಿದ್ದಾರೆ. ಇದಲ್ಲದೆ ಅವರು ಈಗ ಕಾರ್ಯನಿರ್ವಹಿಸುತ್ತಿರುವ ಪೂರ್ವ ವಿಭಾಗದ ಟ್ರಾಫಿಕ್ ಪೊಲೀಸ್ ಐಡಿ (@DCPtreastBCP) ಕೂಡಾ ಬಳಕೆಯಲ್ಲಿದೆ. ಅಭಿಶೇಕ್ ಅವರ ಟ್ವೀಟ್ ಗೆ ಬಂದಿರುವ ಪ್ರತಿಕ್ರಿಯೆಗಳನ್ನು ಮುಂದೆ ಓದಿ,,,

ವ್ಯಾಲೆಟ್ ಸರ್ವೀಸ್ ಎಂದು ಟ್ವೀಟ್

ವ್ಯಾಲೆಟ್ ಸರ್ವೀಸ್ ಎಂದು ಟ್ವೀಟ್ ಮಾಡಿದ್ದ ಅಭಿಶೇಕ್ ಗೋಯಲ್

ಟೋಯಿಂಗ್ ಚಾರ್ಚ್ ಅಧಿಕ

ಅಕ್ರಮ ವಾಹನ ನಿಲುಗಡೆ ಜತೆಗೆ ಟೋಯಿಂಗ್ ಚಾರ್ಚ್ ಅಧಿಕ

ಕಾರಿಗೆ ತೊಂದರೆಯಾಗದಿದ್ದರೆ ಸಾಕು

ಕಾರಿಗೆ ತೊಂದರೆಯಾಗದಿದ್ದರೆ ಸಾಕು, ಹೊಸ ವಿಧಾನ ಕಂಡುಕೊಂಡು ಅಳವಡಿಸುವುದು ಉತ್ತಮ

ಸಾರ್ ಟ್ರಾಲ್ ಪೇಜ್ ಗೆ ಅಡ್ಮಿನ್ ಆಗ್ತೀರಾ?

ಸಾರ್ ಟ್ರಾಲ್ ಪೇಜ್ ಗೆ ಅಡ್ಮಿನ್ ಆಗ್ತೀರಾ?

ಬೌರಿಂಗ್ ಆಸ್ಪತ್ರೆ ಬಳಿ ತುಂಬಾ ಜಾಮ್

ಬೌರಿಂಗ್ ಆಸ್ಪತ್ರೆ ಬಳಿ ತುಂಬಾ ಟ್ರಾಫಿಕ್ ಜಾಮ್, ವಾಹನ ನಿಲುಗಡೆ ಸರಿಯೇ ಇಲ್ಲ

ಗೋಯಲ್ ಟ್ವೀಟ್ ಸೂಪರ್ ಎಂದರು

ಗೋಯಲ್ ಟ್ವೀಟ್ ಸೂಪರ್ ಎಂದು ಅನೇಕ ಮಂದಿ ಪ್ರತಿಕ್ರಿಯಿಸಿದ್ದಾರೆ.

ಐಪಿಎಸ್ ರೂಪಾ ಅವರಿಂದ ಟ್ವೀಟ್

ಐಪಿಎಸ್ ರೂಪಾ ಅವರು ಟ್ವೀಟ್ ಮಾಡಿ ಶ್ಲಾಘಿಸಿದ್ದಾರೆ.

ವಿಜಯನಗರದಲ್ಲಿ ಟ್ರಾಫಿಕ್ ಜಾಮ್ ಇದೆ

ವಿಜಯನಗರದಲ್ಲಿ ಟ್ರಾಫಿಕ್ ಜಾಮ್ ಇದೆ, ಜಪ್ತಿ ಮಾಡಲಾದ ವಾಹನಗಳು ಹೆಚ್ಚಾಗಿದೆ ಏನಾದರೂ ಮಾಡಿ

ಆಟೋಗಳದ್ದೇ ಸಮಸ್ಯೆ

ಬೆಂಗಳೂರಿನಲ್ಲಿ ಆಟೋರಿಕ್ಷಾಗಳದ್ದೇ ಸಮಸ್ಯೆ

English summary
"Welcome to our valet service. Available even during peak rush hours. Leave your vehicle anywhere and we will be there to serve." This was a tweet put out by Abhishek Goyal, Bengaluru's Deputy Commissioner of Police, Traffic East Division.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X