ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಲ್ಲಪ್ಪ ಪ್ರಕರಣದಲ್ಲಿ ಕಿಡ್ನಾಪ್ ಆಗಿದ್ದ ತೇಜಸ್ ಹೇಳಿದ್ದೇನು?

By Mahesh
|
Google Oneindia Kannada News

ಬೆಂಗಳೂರು, ಜುಲೈ 05: ಚಿಕ್ಕಮಗಳೂರಿನ ಡಿವೈಎಸ್ಪಿಯಾಗಿದ್ದ ಕಲ್ಲಪ್ಪ ಹಂಡಿಭಾಗ ಅವರು ಪತ್ನಿಯ ಊರಾದ ಮುರಗೋಡಿನಲ್ಲಿ ನೇಣು ಹಾಕಿಕೊಂಡು ಸಾವನ್ನಪ್ಪಿದ ಪ್ರಕರಣದಲ್ಲಿ ಹಲವರ ಹೆಸರುಗಳು ಕೇಳಿ ಬರುತ್ತಿದೆ. ಸಾವನ್ನಪ್ಪಲು ಕಾರಣ ಎನ್ನಲಾದ ಕಿಡ್ನಾಪ್ ಪ್ರಕರಣದ ಸಂತ್ರಸ್ತ ತೇಜಸ್ ಗೌಡ ಹೇಳಿಕೆ ಪ್ರಮುಖವಾಗಿದೆ. ಚಿಕ್ಕಮಗಳೂರು ಎಸ್ಪಿ ಕಚೇರಿಯಲ್ಲಿ ತೇಜಸ್ ಗೌಡ ನೀಡಿದ ಹೇಳಿಕೆ ವಿವರ ಇಲ್ಲಿದೆ.

ಪ್ರಕರಣದ ಕ್ವಿಕ್ ಲುಕ್ : ಜೂನ್ 27ರಂದು ಚಿಕ್ಕೊಳಲೆ ಗ್ರಾಮದ ಬಳಿ ಇರುವ ಮಾಧವ ಎಂಬುವವರಿಗೆ ಸೇರಿದ ತೋಟದಲ್ಲಿ ನಡೆದ ಅಕ್ರಮ ಇಸ್ಪೀಟ್ ಗುಂಪಿನ ಮೇಳೆ ದಾಳಿ 26 ಮಂದಿ ಹಾಗೂ 3,04 ಲಕ್ಷ ರು ವಶ. ಓರ್ವ ಆರೋಪಿ ತೇಜಸ್ ಗೌಡಗೆ ಜಾಮೀನು ಸಿಕ್ಕಿ ಜೂನ್ 28ರಂದು ಮನೆ ಬಳಿ ಹಲ್ಲೆ ನಡೆದಿದೆ. ಆರೇಳು ಮಂದಿ ಅಪಹರಿಸಿ ಬೆಂಗಳೂರಿಗೆ ಕರೆ ತಂದಿದ್ದಾರೆ. [ಡಿವೈಎಸ್ಪಿ ಕಲ್ಲಪ್ಪ ಸಾವಿಗೆ ಕಿರುಕುಳ ಕಾರಣವಲ್ಲ: ಎಸ್ಪಿ ಸಂತೋಷ್]

Chikkamagaluru DySP Kallappa Handibag suicide case: Tejas Gowda Statement

ಹಿಂದಿ ಹಾಗೂ ತಮಿಳಿನಲ್ಲಿ ಮಾತನಾಡುತ್ತಿದ್ದ ಅಪಹರಣಕಾರರು ನಾಯಿಗೂಡಿನಂಥ ಚಿಕ್ಕ ಜಾಗದಲ್ಲಿ ತೇಜಸ್ ನನ್ನು ಇಟ್ಟಿದ್ದಾರೆ. ಬೆಂಗಳೂರಿನ ಮೆಜೆಸ್ಟಿಕ್ ಬಳಿಯ ಶೋ ಆಫ್ ಮಳಿಗೆ ಮಾಲೀಕ ಶಿವು ಅವರಿಂದ 10 ಲಕ್ಷಕ್ಕಾಗಿ ಬೆದರಿಕೆ ಕರೆ ಮಾಡುವಂತೆ ತೇಜಸ್ ಗೆ ಸೂಚಿಸಿದ್ದಾರೆ. 10 ಲಕ್ಷ ರು ದುಡ್ಡನ್ನು ಪವನ್ ಅಲಿಯಾಸ್ ಡಕ್ಕನಿಗೆ ಹೇಳಿದ್ದಾರೆ. 9480805120ಗೆ ಕರೆ ಮಾಡಿದರೆ ಯಾವ ಜಾಗಕ್ಕೆ ಬರಬೇಕು ಎಂದು ತಿಳಿಸುತ್ತಾರೆ ಎಂದು ಹೇಳಿ ತೇಜಸ್ ಫೋನ್ ಕಟ್ ಮಾಡಿದ್ದಾನೆ. [ಡಿವೈಎಸ್‌ಪಿ ಕಲ್ಲಪ್ಪ ಹಂಡಿಬಾಗ್ ಆತ್ಮಹತ್ಯೆ]

ಮೇಲ್ಕಂಡ ಸಂಖ್ಯೆ ಡಿವೈಎಸ್ಪಿ ಕಲ್ಲಪ್ಪ ಅವರ ಅಧಿಕೃತ ಮೊಬೈಲ್ ಸಂಖ್ಯೆಯಾಗಿದೆ. ಪವನ್ ಅಲಿಯಾಸ್ ಡಕ್ಕ 96636 66600 ಸಂಖ್ಯೆಯಿಂದ ಕಲ್ಲಪ್ಪ ಅವರ ನಂಬರ್ ಗೆ ಕರೆ ಮಾಡಿ ಮಾತನಾಡಿದ್ದರ ದಾಖಲೆ ಈಗ ತನಿಖಾ ತಂಡದ ಬಳಿ ಇದೆ. ಪವನ್ ರಿಂದ ಕಲ್ಲಪ್ಪ ಅವರು ಹಣ ಪಡೆದಿದ್ದಕ್ಕೂ ಸಾಕ್ಷಿ ಸಿಕ್ಕಿದೆ. ಹಣ ಪಾವತಿಯಾದ ಬಳಿಕ ಇತ್ತ ಬೆಂಗಳೂರಿನಲ್ಲಿ ತೇಜಸ್ ಬಿಡುಗಡೆಯಾಗಿದೆ. ಚಿಕ್ಕಮಗಳೂರಿಗೆ ವಾಪಸ್ ಬಂದ ಬಳಿಕ ಬಸವನಹಳ್ಳಿ ಪೊಲೀಸ್ ಠಾಣೆ ಹಾಗೂ ಎಸ್ಪಿ ಕಚೇರಿಗೆ ತೆರಳಿ ತೇಜಸ್ ಸಂಪೂರ್ಣ ಕಥೆಯನ್ನು ವಿವರಿಸಿದ್ದಾನೆ.

ಇನ್ನೊಂದು ಕಥೆ ಹೀಗಿದೆ: ಕಲ್ಮನೆ ಚಿಟ್ ಫಂಡ್ ನಡೆಸುತ್ತಿದ್ದ ನಟರಾಜ್ ಎಂಬಾತ ಕಲ್ಲಪ್ಪ, ಪ್ರವೀಣ್ ನಡುವೆ ವ್ಯವಹಾರ ಕುದುರಲು ಕಾರಣ ಎನ್ನಲಾಗಿದೆ. ತೇಜಸ್ ಚೀಟಿ ಕಟ್ಟುತ್ತಿದ್ದ. 20 ಲಕ್ಷ ರು ಡಿಮ್ಯಾಂಡ್ ಮಾಡಲಾಗಿತ್ತು. 10 ಲಕ್ಷ ರು ಕಟ್ಟಿ ಆಮೇಲೆ ಸುಮ್ಮನಾದ. ಈ ಬಾಕಿ ಮೊತ್ತವನ್ನು ಡಿಮ್ಯಾಂಡ್ ಮಾಡಿ ಪಡೆಯಲು ಈ ಕಿಡ್ನಾಪ್ ತಂತ್ರ ಬಳಸಲಾಗಿದೆ.

ಈ ಪ್ರಕರಣದಲ್ಲಿ ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಅವರಿಗೂ ಅಪಹರಣಕಾರರ ಗುಂಪಿನಲ್ಲಿದ್ದರು ಎನ್ನಲಾದ ಹಿಂದೂ ಸಂಘಟಕ ಪ್ರವೀಣ್ ಖಾಂಡ್ಯ ಅವರ ನಡುವೆ ಸಂಪರ್ಕ ಇರುವುದು ಸಾಬೀತಾಗಿತ್ತು. ಕಲ್ಲಪ್ಪ ಅವರ ವಿರುದ್ಧ ಎಫ್ ಐಆರ್ ಹಾಕಿದ್ದರು, ತನಿಖೆ ನಡೆಯುತ್ತಿತ್ತು ಎಂಬ ಮಾಹಿತಿ ಸಿಕ್ಕಿತು. ಆದರೆ, ಈಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ ಎಂದು ಸಿಎಂ ಸಿದ್ದರಾಮಯ್ಯ ಕೂಡಾ ಪ್ರತಿಕ್ರಿಯಿಸಿದ್ದಾರೆ.

English summary
Chikkamagaluru DySP Kallappa Handibag suicide case: Statement of Tejas Gowda who was allegedly kidnapped by Praveen Khandya and gang is here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X