ಸಿದ್ದರಾಮಯ್ಯ ಸಚಿವ ಸಂಪುಟಕ್ಕೆ 13 ಹೊಸಮುಖಗಳ ಸೇರ್ಪಡೆ

Posted By:
Subscribe to Oneindia Kannada

ಬೆಂಗಳೂರು, ಜೂನ್ 19: ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸಚಿವ ಸಂಪುಟವನ್ನು ವಿಸ್ತರಿಸಿದ್ದು, 13 ಹೊಸ ಮುಖಗಳನ್ನು ಸೇರಿಸಿಕೊಂಡಿದ್ದಾರೆ. ಭಾನುವಾರ ಸಂಜೆ ರಾಜಭವನದ ಗ್ಲಾಸ್ ಹೌಸ್ ನಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಅವರು ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು.

34 ಜನ ಸದಸ್ಯರ ಸಂಪುಟಕ್ಕೆ ಇನ್ನು ಒಂದು ಸ್ಥಾನ ಮಾತ್ರ ಬಾಕಿ ಉಳಿದಿದೆ. ಪ್ರಮಾಣ ವಚನ ಸ್ವೀಕರಿಸಿದ 13 ಜನ ಶಾಸಕರ ಪೈಕಿ 9 ಜನ ಸಂಪುಟ ದರ್ಜೆ ಸಚಿವರು, 4 ರಾಜ್ಯ ದರ್ಜೆ ಸಚಿವರು ಇದರ ಜೊತೆಗೆ ಹಾಲಿ ಇಬ್ಬರು ಸಚಿವ(ಶರಣ ಪ್ರಕಾಶ್ ಪಾಟೀಲ್ ಹಾಗೂ ಕೃಷ್ಣಭೈರೇಗೌಡ)ರಿಗೆ ಕ್ಯಾಬಿನೆಟ್ ದರ್ಜೆಗೆ ಬಡ್ತಿ ಸಿಗಲಿದೆ.[ಅಂಬರೀಶ್ ಅವನತಿಗೆ ಕಾರಣವಾದ ಹೆಂಗಸಿನ ಬಗ್ಗೆ ಜಗ್ಗೇಶ್ ಟ್ವೀಟ್]

ರಾಯಚೂರು, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಕೊಡಗು, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಯಾದಗಿರಿ ಜಿಲ್ಲೆಗಳಿಗೆ ಪ್ರಾತಿನಿಧ್ಯ ಸಿಕ್ಕಿಲ್ಲ.

ರಾಜ್ಯ ಸಂಪುಟ ಪುನಾರಚನೆಗೆ ಹಸಿರು ನಿಶಾನೆ ನೀಡಿದ್ದ ಕಾಂಗ್ರೆಸ್ ಹೈಕಮಾಂಡ್ 14 ಹಾಲಿ ಸಚಿವರಿಗೆ ಕೊಕ್ ನೀಡಿ ಹೊಸದಾಗಿ 14 ಮಂದಿಯನ್ನು ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ನಿರ್ದೇಶಿಸಿತ್ತು. 14ನೇ ಸ್ಥಾನಕ್ಕೆ ವಿಜಯನಗರದ ಶಾಸಕ ಎಂ ಕೃಷ್ಣಪ್ಪ ಅವರ ಹೆಸರು ಕೇಳಿ ಬಂದಿತ್ತು. ಆದರೆ, ಸದ್ಯಕ್ಕೆ ಒಂದು ಸ್ಥಾನವನ್ನು ಖಾಲಿ ಇರಿಸಲಾಗಿದೆ. [ಸಂಪುಟದಿಂದ ಹೊರಹೋಗಲಿರುವ 13 ಸಚಿವರು]

Cabinet reshuffle: Siddaramaiah inducts 13 new faces

ಕ್ಯಾಬಿನೆಟ್ ದರ್ಜೆ ಸಚಿವರಾಗಿ 9 ಶಾಸಕರಿಂದ ಪ್ರಮಾಣ ವಚನ:
ಕ್ರಮ ಸಂಖ್ಯೆ ಕ್ಷೇತ್ರ ಕ್ಯಾಬಿನೆಟ್ ದರ್ಜೆ ಸಚಿವರು
1 ಸಾಗರ ಕಾಗೋಡು ತಿಮ್ಮಪ್ಪ
2 ಶ್ರೀನಿವಾಸಪುರ ರಮೇಶ್ ಕುಮಾರ್
3 ನರಸಿಂಹರಾಜ ಕ್ಷೇತ್ರ ತನ್ವೀರ್ ಸೇಠ್
4 ಬಾಗಲಕೋಟೆ ಎಚ್ ವೈ ಮೇಟಿ
5 ಯಲಬುರ್ಗಾ ಬಸವರಾಜ ರಾಯರೆಡ್ಡಿ
6 ದಾವಣಗೆರೆ ಉತ್ತರ ಎಸ್​.ಎಸ್​ ಮಲ್ಲಿಕಾರ್ಜುನ್
7 ಪರಿಷತ್​ ಸದಸ್ಯ ಎಂ.ಆರ್​​.ಸೀತಾರಾಂ
8 ಕಲಘಟಗಿ ಸಂತೋಷ್​ ಲಾಡ್
9 ಗೋಕಾಕ ರಮೇಶ್​​ ಜಾರಕಿಹೊಳಿ
ರಾಜ್ಯಸಚಿವರಾಗಿ ನಾಲ್ವರಿಂದ ಪ್ರಮಾಣ ವಚನ
1 ಚಿತ್ತಾಪುರ ಪ್ರಿಯಾಂಕ ಖರ್ಗೆ
2 ಭಾಲ್ಕಿ ಈಶ್ವರ ಖಂಡ್ರೆ
3 ಉಡುಪಿ ಪ್ರಮೋದ್​ ಮಧ್ವರಾಜ್
4 ಹಾವೇರಿ ರುದ್ರಪ್ಪ ಲಮಾಣಿ

(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka Chief Minister Siddaramaiah on Sunday(Jun 19) inducted 13 new ministers into his cabinet. Governor Vajubhai Vala administered the oath of office and secrecy to the new ministers in a function held at the Raj Bhavan, Bengaluru.
Please Wait while comments are loading...