ಪ್ರಯಾಣಿಕರಿಗೊಂದು ಸಿಹಿ ಸುದ್ದಿ: ಬಿಎಂಟಿಸಿ ಬಸ್ ದರ ಇಳಿಕೆ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಏಪ್ರಿಲ್ 13: ಚಿಲ್ಲರೆ ಸಮಸ್ಯೆಯ ಹಿನ್ನೆಲೆಯಲ್ಲಿ ಬಿಎಂಟಿಸಿ (ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ) ಬಸ್ ದರವನ್ನು ಪರಿಷ್ಕರಿಸಲಾಗಿದ್ದು, ಎರಡನೇ ಹಂತದ ದರವನ್ನು 12 ರಿಂದ 10 ರೂ. ಗೆ ಇಳಿಸಲಾಗಿದೆ. ಏಪ್ರಿಲ್ 15 ರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ ಎಂದು ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಪ್ರತಿ ಹಂತದ ಬಸ್ ದರವನ್ನು ಪರಿಷ್ಕರಿಸಲಾಗಿದ್ದು, ದರ ಪರಿಷ್ಕರಣೆಯ ಪಟ್ಟಿ ಇಂತಿದೆ.

* ಎರಡನೇ ಹಂತದ ದರ 12ರಿಂದ 10ರೂ.ಗೆ ಇಳಿಕೆ
* 3,6,8ನೇ ಹಂತದಲ್ಲಿ 1 ರೂ ಹೆಚ್ಚಳ
ಹವಾನಿಯಂತ್ರಿತ ಬಸ್ ಗಳ ದರದಲ್ಲೂ ಪರಿಷ್ಕರಣೆ
* ಮೊದಲ ಹಂತ 15 ರಿಂದ 10ರೂ.ಗೆ ಇಳಿಕೆ
* 3ನೇ ಹಂತ 35 ರಿಂದ 30 ರೂ.ಗೆ ಇಳಿಕೆ
* 4ನೇ ಹಂತ 45 ರಿಂದ 40 ರೂ.ಗೆ ಇಳಿಕೆ
* 14ನೇ ಹಂತ 95 ರಿಂದ 90 ರೂ.ಗೆ ಇಳಿಕೆ ಮಾಡಲಾಗಿದೆ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
BMTC revises bus fare in Karnataka effective from 15th April
Please Wait while comments are loading...